ಬೆಂಗಳೂರು: ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 11 ಆರಂಭಕ್ಕೆ ಸಿದ್ಧತೆ ನಡೆದಿದೆ. 10 ಸೀಸನ್ಗಳಲ್ಲಿ ನಟ ಕಿಚ್ಚ ಸುದೀಪ್ ಅವರೇ ನಿರೂಪಣೆ ನಡೆಸಿದ್ದರು. ಆದರೆ ಈ ಬಾರಿ ನಿರೂಪಕರ ಬದಲಾವಣೆಯಾಗಲಿದೆ ಎನ್ನುವ ಊಹಾಪೋಹಗಳ ನಡುವೆಯೇ ಹೊಸದೊಂದು ಪ್ರೋಮೊ ಬಿಡುಗಡೆಯಾಗಿದೆ.

ಕಲರ್ಸ್ ಕನ್ನಡ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಿರುವ ಪ್ರೊಮೊದಲ್ಲಿ, ಹೊಸ ದಶಕ, ಹೊಸ ಆಟ, ಹೊಸ ಅಧ್ಯಾಯ ಎನ್ನುವ ಶೀರ್ಷಿಕೆ ನೀಡಲಾಗಿದೆ. ಕೊನೆಯಲ್ಲಿ ಹೊಸ ನಿರೂಪಕರು ಬರಲಿದ್ದಾರಾ ಎಂದು ಪ್ರೇಕ್ಷಕರು ಅಚ್ಚರಿಯಿಂದ ಕೇಳುವುದನ್ನು ಕಾಣಬಹುದಾಗಿದೆ.

ಬಿಗ್ ಬಾಸ್ 11ಕ್ಕೆ ಹೊಸ ನಿರೂಪಕರು ಬರಲಿದ್ದಾರೆ ಎನ್ನುವ ಸುದ್ದಿಗೆ ಈ ಪ್ರೊಮೊ ಪುಷ್ಟಿ ನೀಡಿದೆ. ಹೊಸ ನಿರೂಪಕರು ಯಾರಾಗಲಿದ್ದಾರೆ ಎನ್ನುವ ಕುತೂಹಲ ಗರಿಗೆದರಿದೆ. ಈ ತಿಂಗಳ ಅಂತ್ಯದಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಆರಂಭವಾಗುವ ಸಾಧ್ಯತೆಯಿದೆ.
.Bigg Boss Kannada: ಲೋಗೊ ಬಿಡುಗಡೆ ಮೂಲಕ 11ನೇ ಆವೃತ್ತಿಗೆ ವೇದಿಕೆ ಸಜ್ಜು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.