ಬೆಂಗಳೂರು: ಕನ್ನಡದ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ತಮ್ಮ ಜೀವನದ ಗುಟ್ಟುಗಳನ್ನು ಹೊರಗಿಟ್ಟಿದ್ದಾರೆ. ಜೀವನದಲ್ಲಿ ನಡೆದ ಕಹಿ ಅನುಭವಗಳ ಬಗ್ಗೆ ಹೇಳಿಕೊಳ್ಳಬೇಕೆಂದು ಬಿಗ್ ಬಾಸ್ ಸ್ಪರ್ಧಿಗಳಿಗೆ ವೇದಿಕೆ ಕಲ್ಪಿಸಿಕೊಟ್ಟಿದ್ದರು. ಈ ಸಂದರ್ಭ, ಚಂದ್ರಕಲಾ ಮತ್ತು ದಿವ್ಯಾ ಸುರೇಶ್ ಅವರು,ಅವರಿಗೆ ತಂದೆಯಿಂದ ಆಗಿದ್ದ ಅತೀವವಾದ ನೋವನ್ನು ತೆರೆದಿಟ್ಟರು.

ಅನ್ನಕ್ಕೆ ವಿಷ ಬೆರೆಸಿದ್ದ ಅಪ್ಪ: ಬಿಗ್ ಬಾಸ್ ಮನೆಯಲ್ಲಿ ಅತ್ಯಂತ ಲವಲವಿಕೆಯಿಂದಓಡಾಡಿಕೊಂಡಿರುವ ದಿವ್ಯಾ ಸುರೇಶ್, ಬಾಲ್ಯದಲ್ಲಿನಡೆದ ಆಘಾತಕಾರಿ ಸಂಗತಿಯೊಂದನ್ನು ಬಿಚ್ಚಿಟ್ಟಿದ್ದಾರೆ.

ನಾನು ಆಗ 2 ನೇ ತರಗತಿ ಓದುತ್ತಿದ್ದೆ, ಅಂದು ದೀಪಾವಳಿ ಹಬ್ಬ, ಅಮ್ಮ ಮನೆಯಲ್ಲಿರಲಿಲ್ಲ. ಕಂಠಪೂರ್ತಿ ಕುಡಿದಿದ್ದ ಅಪ್ಪ, ಅನ್ನಕ್ಕೆ ವಿಷ ಹಾಕಿ ನನಗೆ ಮತ್ತು ಸಹೋದರನಿಗೆ ತಿನಿಸಿದರು. ಅವರೂ ಸಹ ಅದೇ ಅನ್ನ ತಿಂದಿದ್ದರು. ಯಾವುದೋ ವಿಷಯಕ್ಕೆ ನಾವು ಮೂವರೂ ಸಾಯಬೇಕೆಂದು ಅಪ್ಪ ನಿರ್ಧರಿಸಿದ್ದರು. ನೆರವಿಗೆ ಬಂದ ಊರಿನ ಜನನಮಗೆ ಉಪ್ಪು ನೀರು ಕುಡಿಸಿ ಆಸ್ಪತ್ರೆಗೆ ದಾಖಲಿಸಿದರು. ಅದೃಷ್ಟವಶಾತ್, ನಾವು ಬದುಕಿದೆವು. ಈಗಲೂ ಆ ಘಟನೆ ಕಣ್ಣೆದುರಿಗೆ ಬರುತ್ತದೆ ಎಂದು ಕಣ್ಣೀರು ಹಾಕಿದರು.

ಇದನ್ನೂ ಓದಿ.. Big Boss 8: ಅರವಿಂದ್–ದಿವ್ಯಾ ಉರುಡುಗ ಪ್ರೇಮಕ್ಕೆ ಶುಭಾ ಪೂಂಜಾ ರಾಯಭಾರ

ಅಪ್ಪನ ಅಸಹ್ಯ ವರ್ತನೆ ಬಗ್ಗೆ ಚಂದ್ರಕಲಾ ಮಾತು: ಆಗ ನಾನು 10 ವರ್ಷದ ಬಾಲಕಿ.ನನ್ನಪ್ಪ ತುಂಬಾ ಕುಡಿಯುತ್ತಿದ್ದರು. ರಾತ್ರಿ ಹೊತ್ತು ನಾನು ಮತ್ತುತಂಗಿ ಸ್ಕರ್ಟ್ ಹಾಕಿ ಮಲಗುತ್ತಿದ್ದೆವು. ಆಗ ನಮ್ಮ ಮೇಲೆಯೇ ನನ್ನಪ್ಪನ ಕೆಟ್ಟ ದೃಷ್ಟಿ ಬಿದ್ದಿತ್ತು. ಇದು ನಮ್ಮ ಅಮ್ಮನ ಗಮನಕ್ಕೆ ಬಂದು ಅದನ್ನೆಲ್ಲ ತಡೆದರು. ನಿತ್ಯ ನನ್ನಪ್ಪ ಕುಡಿದು ಅಮ್ಮನಿಗೆ ಕಾಟ ಕೊಡುತ್ತಿದ್ದರು. ಬಳಿಕ, ನಾವೇ ಅಪ್ಪನಿಂದ ಅಮ್ಮನನ್ನು ಬೇರ್ಪಡಿಸಿದೆವುಎಂದು ಚಂದ್ರಕಲಾ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.