ಝೀ ಕನ್ನಡದ ಅತಿ ದೊಡ್ಡ ಸಂಗೀತ ರಿಯಾಲಿಟಿ ಶೋ ಕನ್ನಡದ ಸ ರಿ ಗ ಮ ಪದ ಅಂತಿಮ ಸ್ಪರ್ಧೆ ಇದೇ ಫೆ. 26ರಂದು ನಡೆಯಲಿದೆ. ಸಂಜೆ 6 ಗಂಟೆಗೆ ಅದ್ಧೂರಿ ಅಂತಿಮ ಸ್ಪರ್ಧಾ ಕಾರ್ಯಕ್ರಮ ಝೀ ಕನ್ನಡ ಚಾನೆಲ್‌ನಲ್ಲಿ ನೇರ ಪ್ರಸಾರವಾಗಲಿದೆ.

ಕಳೆದ ಸೆಪ್ಟೆಂಬರ್ 18ರಂದು ಭರ್ಜರಿಯಾಗಿ ಚಾಲನೆ ಪಡೆದುಕೊಂಡ ಸರಿಗಮಪ ಚಾಂಪಿಯನ್ ಶಿಪ್ ಈವರೆಗೆ ಸಂಗೀತದ ಅನೇಕ ಪ್ರಯೋಗಗಳೊಂದಿಗೆ ಉತ್ತಮ ಗುಣಮಟ್ಟದ ಕಾರ್ಯಕ್ರಮವೆಂದು ಮೆಚ್ಚುಗೆ ಪಡೆದಿತ್ತು.

ಈ ಬಾರಿ 17 ಆವೃತ್ತಿಗಳ 36 ಚಾಂಪಿಯನ್ ಸ್ಪರ್ಧಿಗಳನ್ನು ಒಗ್ಗೂಡಿಸಿ ಅವರನ್ನು 6 ತಂಡಗಳಾಗಿ ವಿಂಗಡಿಸಲಾಗಿತ್ತು. ಈ ತಂಡಗಳಿಗೆ ಕನ್ನಡದ 6 ಹೆಸರಾಂತ ಸಂಗೀತಗಾರರಾದ ಹೇಮಂತ್, ಸುಚೇತನ್, ಅನುರಾಧಾ ಭಟ್, ಲಕ್ಷ್ಮೀ ನಾಗರಾಜ್, ಇಂದೂ ನಾಗರಾಜ್ ಮತ್ತು ನಂದಿತಾ ಮಾರ್ಗದರ್ಶನ ನೀಡಿದ್ದರು.

ಸಂಗೀತ ನಿರ್ದೇಶಕರಾದ ಹಂಸಲೇಖ, ಸಂಗೀತ ಸಂಯೋಜಕ ಅರ್ಜುನ್ ಜನ್ಯ ಮತ್ತು ಗಾಯಕ ವಿಜಯ್‌ಪ್ರಕಾಶ್ ಕಾರ್ಯಕ್ರಮದ ತೀರ್ಪುಗಾರರು. ಅನುಶ್ರೀ ಈ ಕಾರ್ಯಕ್ರಮದ ನಿರೂಪಕಿ. ತಮ್ಮ ನೆಚ್ಚಿನ ಗಾಯಕರ ಆಯ್ಕೆಗೆ ವೀಕ್ಷಕರ ಮತದಾನ ಆರಂಭವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.