ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯದ ಏಕೈಕ ‘ವಿಲೇಜ್ ಫಾರೆಸ್ಟ್’: ಊರು ಕಾಡಿಗೆ ನೂರು!

Published : 20 ಏಪ್ರಿಲ್ 2024, 23:30 IST
Last Updated : 20 ಏಪ್ರಿಲ್ 2024, 23:30 IST
ಫಾಲೋ ಮಾಡಿ
Comments
ಹಳಕಾರ ಊರಿನ ಜನರ ಕಾಡಿನ ಪ್ರೀತಿ ಸ್ವಲ್ಪವೂ ಮುಕ್ಕಾಗಿಲ್ಲ. ತಲೆತಲಾಂತರಗಳಿಂದಲೂ ಅನನ್ಯ ಎನ್ನುವ ಕಾಳಜಿ ಮತ್ತು ಕಣ್ಗಾವಲು ಫಲವಾಗಿ ವಿಲೇಜ್‌ ಫಾರೆಸ್ಟ್‌ಗೆ ಇದೀಗ ನೂರು ವರ್ಷ. ಈ ಕಾಡಿನ ಕಥೆ ಇಲ್ಲಿದೆ.
ಕಾವಲಿಗೊಂದು ಸಮಿತಿ
1934 ರಲ್ಲಿ ಹಳಕಾರ ಗ್ರಾಮಸ್ಥರ ಕೃಷಿ ಕಾರ್ಯಕ್ಕೆ ಅನುಕೂಲವಾಗುವ ಸೊಪ್ಪು, ತರೆಗೆಲೆ, ಹುಲ್ಲು ಹಾಗೂ ಮನೆ ನಿರ್ಮಾಣ, ಉರುವಲು ಕಟ್ಟಿಗಾಗಿ ಉದ್ದೇಶಕ್ಕಾಗಿ ವಿಲೇಜ್ ಫಾರೆಸ್ಟ್ ಜಾರಿಗೆ ಬಂದಿತು. ಗ್ರಾಮದ ಎಲ್ಲ ಜಾತಿಯಿಂದ ಒಬ್ಬೊಬ್ಬ ಪ್ರತಿನಿಧಿಯನ್ನು ತಹಶೀಲ್ದಾರ್ ಸಮ್ಮುಖದಲ್ಲಿ ಪಂಚಾಯ್ತಿಯ ಆಡಳಿತ ಮಂಡಳಿಗೆ ಆಯ್ಕೆ ಮಾಡಲಾಗುತ್ತದೆ. ಪ್ರತಿ ಮನೆಯ ರೈತರು ಇಲ್ಲಿ ಸದಸ್ಯರು, ಅವರೆಲ್ಲರಿಗೂ ಮತದಾನದ ಹಕ್ಕಿದೆ. ಒಬ್ಬ ಕಾರ್ಯದರ್ಶಿ, ಒಬ್ಬ ಕಾವಲುಗಾರರು ಕಾರ್ಯನಿರ್ವಹಿಸುತ್ತಾರೆ. ಗ್ರಾಮದಲ್ಲಿ ಕುಟುಂಬಗಳು ಬೆಳೆದರೂ ಯಾರೂ ಕಾಡನ್ನು ಅತಿಕ್ರಮಿಸದೆ ಜತನದಿಂದ ಕಾಪಾಡಿಕೊಂಡು ಬಂದ ಸಂಸ್ಥೆಯ ಶಿಸ್ತು ಮಾದರಿ.
ಚಿತ್ರ: ಸುಜಾತಾ ಕುಮಟಾ
ಚಿತ್ರ: ಸುಜಾತಾ ಕುಮಟಾ
ವಿಲೇಜ್ ಫಾರೆಸ್ಟ್‌ನ ಶತಮಾನೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಬೇಕು. ಕಾಡಿನಲ್ಲಿ ಮುರಿದು ಬಿದ್ದ ಮರಮಟ್ಟು ಹರಾಜು ಮೂಲಕ ಬರುವ ಆದಾಯ ಬಿಟ್ಟರೆ ಸಂಸ್ಥೆಗೆ ಬೇರೆ ಆದಾಯವಿಲ್ಲ. ಆದಾಯ ಬರುವಂತ ಹೊಸ ಯೋಜನೆಗಳನ್ನು ರೂಪಿಸಬೇಕು. ನೂರು ವರ್ಷದಷ್ಟು ಹಳೆಯದಾದ ಊರಿನ ಕಾಡಿಗೆ ಹೊಸರೂಪ ಕೊಡಬೇಕು.
– ನಾಗರಾಜ ಭಟ್ಟ, ಮಾಜಿ ಅಧ್ಯಕ್ಷ ವಿಲೇಜ್ ಫಾರೆಸ್ಟ್
ಹಳಕಾರ ವಿಲೇಜ್‌ ಫಾರೆಸ್ಟ್‌ನ ಪಕ್ಷಿನೋಟ
ಹಳಕಾರ ವಿಲೇಜ್‌ ಫಾರೆಸ್ಟ್‌ನ ಪಕ್ಷಿನೋಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT