ನವದೆಹಲಿ: ದೇಶದಲ್ಲಿ ಬಹುತೇಕ ಭಾಗಗಳಲ್ಲಿ ಮುಂಗಾರು ಕೈಕೊಟ್ಟಿರುವ ಬೆನ್ನಲ್ಲೇ ಹವಾಮಾನ ಇಲಾಖೆ ಆಘಾತಕಾರಿ ಮಾಹಿತಿಯೊಂದನ್ನು ಹೊರಗೆಡವಿದೆ.

ಭಾರತದಲ್ಲಿ 121 ವರ್ಷಗಳಲ್ಲಿ ಕಳೆದ ಆಗಸ್ಟ್ ತಿಂಗಳು ಅತ್ಯಂತ ಹೆಚ್ಚು ಒಣ (ಶುಷ್ಕ- ತೀರಾ ಕಡಿಮೆ ಮಳೆಯೊಂದಿಗೆ ಒಣ ಹವೆ ಇರುವುದು) ಹಾಗೂ ಬಿಸಿ ಹವೆಯನ್ನು ಹೊಂದಿತ್ತು ಎಂದು ಹವಾಮಾನ ಇಲಾಖೆ (IMD) ಹೇಳಿದೆ.

ಆಗಸ್ಟ್ ತಿಂಗಳಲ್ಲಿ ಕಳೆದ ಏಳು ವರ್ಷದಿಂದ ಸತತವಾಗಿ ತಾಪಮಾನ ಏರಿಕೆ ಕಂಡಿದ್ದು 2023 ರ ಆಗಸ್ಟ್ ತಿಂಗಳು ಕೂಡ 121 ವರ್ಷಗಳಲ್ಲಿ ಅತ್ಯಂತ ಹೆಚ್ಚು ತಾಪಮಾನ ಹೊಂದಿತ್ತು ಎಂದು ಅದು ಹೇಳಿದೆ.

ಸಾಮಾನ್ಯಕ್ಕಿಂತ ಆಗಸ್ಟ್‌ನಲ್ಲಿ ಕಂಡು ಬಂದಿರುವ ಭಾರಿ ಒಣ ಹವೆ, ತಾಪಮಾನ, ಅನಿಶ್ಚಿತ ಮಳೆ ನಿಶ್ಚಿತವಾಗಿಯೂ ಜಾಗತಿಕ ತಾಪಮಾನ ಬದಲಾವಣೆಯ ಮುನ್ಸೂಚನೆ ಎಂದು ಅನೇಕ ಹವಾಮಾನ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

ಭಾರತದಲ್ಲಿ ಕಳೆದ ಆಗಸ್ಟ್ ತಿಂಗಳಲ್ಲಿ ಅತಿ ಹೆಚ್ಚು ತಾಪಮಾನ 35.4 ಡಿಗ್ರಿ ಸೆಲ್ಸಿಯಸ್ ಕಂಡು ಬಂದಿದೆ. ಆಗಸ್ಟ್‌ನಲ್ಲಿ ತೀವ್ರ ಮಳೆ ಕೊರತೆ ಕಂಡು ಬಂದಿದೆ. ಆದರೆ, ಸೆಪ್ಟೆಂಬರ್‌ನಲ್ಲಿ ಸಾಮಾನ್ಯ ಮುಂಗಾರು ನಿರೀಕ್ಷೆ ಮಾಡಬಹುದು ಎಂದು ಐಎಂಡಿ ಹೇಳಿದೆಯಾದರೂ, ತಾಪಮಾನ ಸಾಮಾನ್ಯಕ್ಕಿಂತಲೂ ಹೆಚ್ಚು ಇರಲಿದೆ ಎಂದೂ ಹೇಳಿದೆ.

ಸೆಪ್ಟೆಂಬರ್‌ನಲ್ಲಿ ದೇಶದ ಈಶಾನ್ಯ ಹಾಗೂ ಹಿಮಾಲಯ ತಪ್ಪಲು ಪ್ರದೇಶಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಮಳೆ ಸುರಿಯಬಹುದು, ಉಳಿದ ಭಾಗಗಳಲ್ಲಿ ಸಾಮಾನ್ಯ, ಕೆಲವು ಕಡೆ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.