ಪ್ರತಿವರ್ಷ ಉಪಯೋಗಿಸಿ ಬಿಸಾಡಿದ 30 ಲಕ್ಷ ಪ್ಲಾಸ್ಟಿಕ್ ಬಾಟಲಿಗಳು ಮಳೆಯಂತೆ ನಿಮ್ಮ ಊರಿನ ಮೇಲೆ ಬೀಳುತ್ತಿದೆ – ಎಂದು ನ್ಯೂಜಿಲೆಂಡಿನ ವಿಜ್ಞಾನಿಗಳು, ಅಕ್ಲಾಂಡ್ ನಗರವಾಸಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಇದೇನಿದು ಪ್ಲಾಸ್ಟಿಕ್ ಬಾಟಲಿಗಳ ಮಳೆ? ಹೇಗೆ ಸಾಧ್ಯ? ಇಂಥ ಪ್ರಶ್ನೆಗಳಿಗೆ ಈ ವಿಜ್ಞಾನಿಗಳು ವಾತಾವರಣವನ್ನು ಕಲುಷಿತಗೊಳಿಸುತ್ತಿರುವ ಮೈಕ್ರೋಪ್ಲಾಸ್ಟಿಕ್ ತ್ಯಾಜ್ಯ ಕುರಿತು ನಡೆಸಿರುವ ಅಧ್ಯಯನದಲ್ಲಿ ಉತ್ತರ ದೊರೆಯುತ್ತದೆ.

ಕಳೆದ 70 ವರ್ಷಗಳಲ್ಲಿ ಜಗತ್ತಿನಲ್ಲಿ 830 ಕೋಟಿ ಟನ್ ಪ್ಲಾಸ್ಟಿಕ್ ಉತ್ಪಾದನೆಯಾಗಿದೆ. ಆದರೆ ಇದರಲ್ಲಿ ಶೇ 9ರಷ್ಟು ಮಾತ್ರ ಮರುಬಳಕೆಯಾಗಿದೆ. ಉಳಿದಿದ್ದು ತ್ಯಾಜ್ಯವೆಂದು ಸುಡುವುದು ಅಥವಾ ಅವೈಜ್ಞಾನಿಕವಾಗಿ ನೆಲ–ಜಲಪ್ರದೇಶಗಳಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ಕಾಲಕ್ರಮೇಣ ಇಂತಹ ಪ್ಲಾಸ್ಟಿಕ್ ತ್ಯಾಜ್ಯ ಮೈಕ್ರೋಪ್ಲಾಸ್ಟಿಕ್ ಅಗಿ ಪರಿವರ್ತನೆಯಾಗುತ್ತದೆ ಮತ್ತು ನದಿ–ಸಾಗರಗಳ ಮಾಲಿನ್ಯಕ್ಕೆ ಕಾರಣವಾಗುತ್ತಿದೆ. ಬೀಸುವ ಗಾಳಿಯಲ್ಲಿ ಬಹಳ ದೂರದವರೆಗೆ ಹರಡುವ ಈ ಮೈಕ್ರೋಪ್ಲಾಸ್ಟಿಕ್‌ಗಳು ಪರಿಸರಕ್ಕೆ ಅಪಾರ ಹಾನಿಯನ್ನುಂಟುಮಾಡುತ್ತಿವೆ. ಇದಲ್ಲದೆ ನೈಲಾನ್, ಪಾಲಿಯಸ್ಟರ್‌ನಂತಹ ಸಿಂಥೆಟಿಕ್ ಬಟ್ಟೆಗಳನ್ನು ಒಗೆಯುವಾಗ, ವಾಹನಗಳು ಸಂಚರಿಸುವಾಗ ಟೈಯರ್‌ಗಳು ರಸ್ತೆಗೆ ಉಜ್ಜುವಾಗ – ಹೀಗೆ ಅನೇಕ ರೀತಿಯಲ್ಲಿ ಬಿಡುಗಡೆಯಾಗುವ ಮೈಕ್ರೋಪ್ಲಾಸ್ಟಿಕ್ ಕೂಡ ಪರಿಸರಕ್ಕೆ ಹಾನಿಯನ್ನುಂಟುಮಾಡುತ್ತಿದೆ.

ಅಕ್ಲಾಂಡ್ ನಗರದಲ್ಲಿ ಗಾಳಿಯಲ್ಲಿ ಸೇರಿರುವ 0.01 ಮಿಲಿಮೀಟರ್‌ನಷ್ಟು ಚಿಕ್ಕದಾದ ಮೈಕ್ರೋಪ್ಲಾಸ್ಟಿಕ್ ಕಣಗಳನ್ನು ಗುರುತಿಸಿ, ಲೆಕ್ಕ ಮಾಡಲು ವಿಜ್ಞಾನಿಗಳು ಅತ್ಯಾಧುನಿಕ ಸಂಗ್ರಹಣೆ ಮತ್ತು ವಿಶ್ಲೇಷಣೆ ವಿಧಾನಗಳನ್ನು ಬಳಸಿದರು. ನಗರದ ಹಲವಾರು ಕಡೆ ಹೀಗೆ ಸಂಗ್ರಹಿಸಿದ ಮೈಕ್ರೋಪ್ಲಾಸ್ಟಿಕ್ ಕಣಗಳನ್ನು ವಿಶ್ಲೇಷಣೆ ಮಾಡಿ, ಲೆಕ್ಕ ಮಾಡಿದಾಗ, ಪ್ರತಿ ಒಂದು ಚದರ ಮೀಟರ್ ಪ್ರದೇಶದಲ್ಲಿರುವ ವಾತಾವರಣದಲ್ಲಿ 4,885 ಮೈಕ್ರೋಪ್ಲಾಸ್ಟಿಕ್ ಕಣಗಳಿರುವುದು ಪತ್ತೆಯಾಗಿದೆ. ಇನ್ನು ಒಂದು ಚದರ ಮೀಟರ್ ಪ್ರದೇಶದಲ್ಲಿರುವ ವಾತಾವರಣದಲ್ಲಿ ಪ್ಯಾಕಿಂಗ್ ಮೊದಲಾದ ಉತ್ಪನ್ನಗಳಲ್ಲಿ ಬಳಸಲಾಗುವ ಪಾಲಿಸ್ಟೈರೀನ್ (ಥರ್ಮೋಕೂಲ್), ಪಾಲಿಎಥೆಲೀನ್ ಹಾಗೂ ಪಿಇಟಿ ಮೈಕ್ರೋ ಪ್ಲಾಸ್ಟಿಕ್ ಕಣಗಳಂತೆ, ವಿದ್ಯುತ್ ಮತ್ತು ವಿದ್ಯುನ್ಮಾನ ಉಪಕರಣಗಳಲ್ಲಿ ಹೆಚ್ಚಾಗಿ ಬಳಸುವ ಪಾಲಿಕಾರ್ಬನೇಟ್‌ನ ಮೈಕ್ರೋಪ್ಲಾಸ್ಟಿಕ್, ಪಿವಿಸಿ ಹಾಗೂ ರೆಸಿನ್ ತ್ಯಾಜ್ಯದ ಮೈಕ್ರೋಪ್ಲಾಸ್ಟಿಕ್ ಮುಂತಾದವುಗಳ ಕಣಗಳು ಪತ್ತೆಯಾಗಿವೆ.

ಅಕ್ಲಾಂಡ್ ನಗರವೊಂದರ ಮೇಲೆ ಪ್ರತಿವರ್ಷ 74 ಮೆಟ್ರಿಕ್ ಟನ್‌ಗಳಷ್ಟು ಮೈಕ್ರೋಪ್ಲಾಸ್ಟಿಕ್ ಕಣಗಳು ಮಳೆಯಂತೆ ಸುರಿಯುತ್ತಿವೆ. ಇದು 30 ಲಕ್ಷ ಪ್ಲಾಸ್ಟಿಕ್ ಬಾಟಲಿಗಳಿಗೆ ಸಮವಾಗುತ್ತದೆ – ಎಂದು ವಿಜ್ಞಾನಿಗಳು ಆತಂಕ ವ್ಯಕ್ತ ಪಡಿಸಿದ್ದಾರೆ. ಅಕ್ಲಾಂಡ್ ನಗರದಲ್ಲಿ ಅಕ್ಲಾಂಡ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ನಡೆಸಿದ ಅಧ್ಯಯನದಂತೆ ಜಗತ್ತಿನಾದಂತ್ಯ ಅಧ್ಯಯನ ನಡೆದಾಗ, ನಮ್ಮ–ನಿಮ್ಮ ಊರಿನ ಮೇಲೆ ಎಷ್ಟು ಟನ್‌ಗಳಷ್ಟು ಮೈಕ್ರೋಪ್ಲಾಸ್ಟಿಕ್ ಮಳೆಯಾಗುತ್ತಿದೆ; ಗಾಳಿ, ನೆಲ, ಜಲದ ಮಾಲನ್ಯಕ್ಕೆ ಕಾರಣವಾಗುತ್ತಿದೆ ಎಂದು ಹೆಚ್ಚು ನಿಖರವಾಗಿ ಗೊತ್ತಾಗುತ್ತದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಭಾರತದಲ್ಲಿ ‘ನಮಾಮಿ ಗಂಗೆ’ಯಂತಹ ಬೃಹತ್ ನದಿ ಶುದ್ಧೀಕರಣ ಯೋಜನೆಗಳು ನಡೆಯಬೇಕು. ಮಹಾನಗರಗಳಲ್ಲಿ ವಾಹನ ಮತ್ತು ಉದ್ಯಮಗಳಿಂದಾಗುವ ವಾಯುಮಾಲಿನ್ಯದ ನಿಯಂತ್ರಣ ಆಗಬೇಕು. ನೆಲ, ಜಲ ಮತ್ತು ಗಾಳಿಯಲ್ಲಿನ ಮೈಕ್ರೋಪ್ಲಾಸ್ಟಿಕ್ ಕಣಗಳ ಪ್ರಮಾಣ ಕಡಿಮೆ ಮಾಡಲು ಕಠಿಣ ಕ್ರಮ ಕೈಗೊಳ್ಳುವುದು ಅಗತ್ಯವಿದೆ.

ಬರಿಗಣ್ಣಿಗೆ ಕಾಣಿಸದಷ್ಟು ಸೂಕ್ಷ್ಮವಾಗಿರುವ ಮೈಕ್ರೋಪ್ಲಾಸ್ಟಿಕ್ ಕಣಗಳು ಮಾನವನ ಆರೋಗ್ಯಕ್ಕೆ ಮಾರಕವಾಗಿವೆ. ನಾವು ಉಸಿರಾಡುವ ಗಾಳಿಯ ಮೂಲಕ ದೇಹವನ್ನು ಪ್ರವೇಶಿಸುವ ಮೈಕ್ರೋಪ್ಲಾಸ್ಟಿಕ್‌ಗಳ ಕಣಗಳು ಮಾನವನ ಶ್ವಾಸಕೋಶದಲ್ಲಿ ಸೇರಿರುವುದನ್ನು ಪತ್ತೆ ಮಾಡಿದ್ದಾರೆ. ಕೆಲವು ಕ್ಯಾನ್ಸರ್ ರೋಗಿಗಳ ಶ್ವಾಸಕೋಶಗಳಲ್ಲಿ ಕೂಡ ಇಂತಹ ಮೈಕ್ರೋಪ್ಲಾಸ್ಟಿಕ್ ಕಣಗಳು ಪತ್ತೆಯಾಗಿವೆ. ಮಾನವನ ಮೆದುಳು, ಯಕೃತ್ತು, ಶ್ವಾಸಕೋಶ, ವೃಷಣಗಳು ಮತ್ತು ಕರುಳಬಳ್ಳಿ ಹಾಗೂ ತಾಯಿಯ ಎದೆಹಾಲಿನಲ್ಲಿ ಕೂಡ ಮೈಕ್ರೋಪ್ಲಾಸ್ಟಿಕ್ ಕಣಗಳು ಪತ್ತೆಯಾಗಿರುವುದು ವಿಜ್ಞಾನಿಗಳಲ್ಲಿ ಹಾಗೂ ವೈದ್ಯರಲ್ಲಿ ಆತಂಕವನ್ನುಂಟುಮಾಡಿದೆ. ಮಕ್ಕಳು ಮತ್ತು ಹಿರಿಯರ ಆರೋಗ್ಯದ ಮೇಲೆ ಮೈಕ್ರೋಪ್ಲಾಸ್ಟಿಕ್ ಕಣಗಳಿಂದ ಅಗುವ ಪರಿಣಾಮಗಳನ್ನು ಕುರಿತು ಅನೇಕ ಅಧ್ಯಯನ ವರದಿಗಳು ಪ್ರಕಟವಾಗಿವೆ. ಮೈಕ್ರೋಪ್ಲಾಸ್ಟಿಕ್ ಕಣಗಳು ಮತ್ತು ನ್ಯಾನೋಪ್ಲಾಸ್ಟಿಕ್ ಕಣಗಳು ಮಾನವನ ಆರೋಗ್ಯಕ್ಕೆ ಹೆಚ್ಚು ಮಾರಕವಾಗಿವೆ ಎಂದು ಈ ವರದಿಗಳು ತಿಳಿಸುತ್ತವೆ.

ಪರಿಸರ ಮತ್ತು ಅರೋಗ್ಯಕ್ಕೆ ಮಾರಕವಾದ ಪ್ಲಾಸ್ಟಿಕ್‌ಗಳ ಬಳಕೆಯನ್ನು ಬಿಟ್ಟು, ಪರಿಸರಸ್ನೇಹಿ ವಸ್ತುಗಳನ್ನು ಬಳಸಲು ಜನಸಾಮಾನ್ಯರು ಮುಂದಾಗಬೇಕು. ಪ್ಲಾಸ್ಟಿಕ್ ತ್ಯಾಜ್ಯದ ಮರುಬಳಕೆಯ ಪ್ರಮಾಣ ಹೆಚ್ಚಾಗಬೇಕು. ಪ್ಲಾಸ್ಟಿಕ್ ತ್ಯಾಜ್ಯದ ವೈಜ್ಞಾನಿಕ ನಿರ್ವಹಣೆ ವ್ಯವಸ್ಥೆ ದೇಶದಾದಂತ್ಯ ಜಾರಿಗೆ ಬರಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.