ಭಾರತದಲ್ಲಿ ಬ್ಯಾಟರಿಚಾಲಿತ ವಾಹನಗಳ (ಇವಿ) ಬಳಕೆ ಹೆಚ್ಚುತ್ತಿದೆ. ಪರಿಸರ ಮಾಲಿನ್ಯವನ್ನು ತಡೆಗಟ್ಟುವ ಉದ್ದೇಶ ಮತ್ತು ಪೆಟ್ರೋಲ್–ಡೀಸೆಲ್ ವಾಹನಗಳಿಗಿಂತ ಕಡಿಮೆ ವೆಚ್ಚ ಎಂಬುದು ಇವಿಗಳ ಬಳಕೆ ಹೆಚ್ಚಾಗಲು ಪ್ರಮುಖ ಕಾರಣ. ಸರ್ಕಾರವೂ ಇವಿಗಳ ಬಳಕೆಯನ್ನು ಉತ್ತೇಜಿಸುತ್ತಿದೆ. ಇವಿಗಳ ಖರೀದಿಗೆ ಸಹಾಯಧನವನ್ನೂ ನೀಡುತ್ತಿದೆ. ಆದರೆ ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲಿನ ಉಷ್ಣ ವಿದ್ಯುತ್ ಸ್ಥಾವರಗಳನ್ನೇ ಹೆಚ್ಚು ನೆಚ್ಚಿಕೊಂಡಿರುವ ಕಾರಣ ಇವಿಗಳಿಂದಲೂ ಹೆಚ್ಚು ವಾಯುಮಾಲಿನ್ಯವಾಗುತ್ತದೆ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

ಭಾರತದಲ್ಲಿ ಇವಿಗಳ ಬಳಕೆಯಿಂದ ಪರೋಕ್ಷವಾಗಿ ವಿದ್ಯುತ್ಗೆ ಬೇಡಿಕೆ ಹೆಚ್ಚುತ್ತದೆ. ದೇಶದಲ್ಲಿ ಒಟ್ಟು ಬಳಕೆಯ ಶೇ 60ರಷ್ಟು ವಿದ್ಯುತ್ ಅನ್ನು ಪಳೆಯುಳಿಕೆ ಇಂಧನದಿಂದ (ಕಲ್ಲಿದ್ದಲು, ಡೀಸೆಲ್, ನೈಸರ್ಗಿಕ ಅನಿಲ) ಉತ್ಪಾದಿಸಲಾಗುತ್ತದೆ. ಹೀಗಾಗಿ ವಿದ್ಯುತ್ ಚಾಲಿತ ವಾಹನಗಳು ಚಲಿಸುವಾಗ ಇಂಗಾಲದ ಡೈಆಕ್ಸೈಡ್ ಅನ್ನು ಹೊರಹಾಕುವುದಿಲ್ಲ. ಆದರೆ, ಚಾರ್ಜಿಂಗ್ ಮಾಡಲು ಬಳಸುವ ವಿದ್ಯುತ್ನ ಉತ್ಪಾದನೆ ವೇಳೆ ವಾತಾವರಣಕ್ಕೆ ಇಂಗಾಲದ ಡೈಆಕ್ಸೈಡ್ ಬಿಡುಗಡೆಯಾಗುತ್ತದೆ.

ಈಗಿನ ಸ್ಥಿತಿಯಲ್ಲಿ ಭಾರತದಲ್ಲಿ ಇವಿಗಳ ಬಳಕೆಯಿಂದ ಪರಿಸರ ಮಾಲಿನ್ಯ ಕಡಿಮೆಯಾಗುವುದಿಲ್ಲ. ನವೀಕರಿಸಬಹುದಾದ ಇಂಧನ ಮೂಲಗಳು, ಜಲವಿದ್ಯುತ್ ಮತ್ತು ಅಣು ವಿದ್ಯುತ್ನ ಪ್ರಮಾಣವನ್ನು ಹೆಚ್ಚಿಸಿದರೆ, ಇವಿಗಳಿಂದಾಗುವ ಪರೋಕ್ಷ ವಾಯು ಮಾಲಿನ್ಯವನ್ನು ತಡೆಗಟ್ಟಬಹುದು.

2070ರ ವೇಳೆಗೆ ಭಾರತವು ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನೆಯ ಪ್ರಮಾಣವನ್ನು ಶೇ 99.9ರಷ್ಟು ತಗ್ಗಿಸುವ ಗುರಿ ಹಾಕಿಕೊಂಡಿದೆ. ಅಲ್ಲಿಯವರೆಗೆ ಇವಿ ಚಾರ್ಜಿಂಗ್ ಮಾಡುವಾಗ, ಪರೋಕ್ಷವಾಗಿ ವಾತಾವರಣಕ್ಕೆ ಇಂಗಾಲದ ಡೈಆಕ್ಸೈಡ್ ಬಿಡುಗಡೆಯಾಗುತ್ತಿರುತ್ತದೆ. ಆದರೆ ಕಲ್ಲಿದ್ದಲು ಆಧಾರಿತ ವಿದ್ಯುತ್ ಮೇಲಿನ ಅವಲಂಬನೆ ಕಡಿಮೆಯಾದಂತೆ, ಇವಿಗಳಿಂದಾಗುವ ಪರೋಕ್ಷ ವಾಯುಮಾಲಿನ್ಯದ ಪ್ರಮಾಣವೂ ಕಡಿಮೆಯಾಗುತ್ತದೆ.

ಬ್ಯಾಟರಿಗಳಿಂದಲೂ ಹಾನಿ

ಇವಿಗಳಲ್ಲಿ ಈಗ ಲಿಥಿಯಂ ಅಯಾನ್ ಬ್ಯಾಟರಿಗಳನ್ನು ಬಳಸಲಾಗುತ್ತಿದೆ. ಈ ಸ್ವರೂಪದ ಬ್ಯಾಟರಿಗಳಲ್ಲಿ ಲಿಥಿಯಂ, ನಿಕ್ಕಲ್ ಮತ್ತು ಕೋಬಾಲ್ಟ್ಗಳನ್ನು ಬಳಸಲಾಗುತ್ತದೆ. ಈ ಮೂರು ರಾಸಾಯನಿಕ ವಸ್ತುಗಳು ಭೂಮಿಯಲ್ಲಿ ಖನಿಜ ರೂಪದಲ್ಲಿ ದೊರೆಯುತ್ತವೆ. ವಿಶ್ವದಲ್ಲಿ ಈಗ ಬಳಕೆಯಾಗುತ್ತಿರುವ ಬಹುಪಾಲು ಲಿಥಿಯಂ ಚೀನಾದಿಂದ ಪೂರೈಕೆಯಾಗುತ್ತದೆ. ಲಿಥಿಯಂ ಅನ್ನು ಗಣಿಗಳಿಂದ ಹೊರತೆಗೆಯುವಾಗ ವಾತಾವರಣಕ್ಕೆ ಅಪಾಯಕಾರಿ ರಾಸಾಯನಿಕ ವಸ್ತುಗಳು ಬಿಡುಗಡೆಯಾಗುತ್ತವೆ.ವಿಶ್ವದ ಶೇ 70ರಷ್ಟು ಕೋಬಾಲ್ಟ್ ಅನ್ನು ಕಾಂಗೋ ಪೂರೈಸುತ್ತದೆ. ಲಿಥಿಯಂ ಅಯಾನ್ ಬ್ಯಾಟರಿಯಲ್ಲಿ ಇದು ಅತ್ಯಂತ ಪ್ರಮುಖವಾದ ರಾಸಾಯನಿಕ ವಸ್ತು. ಇದನ್ನು ಭೂಮಿಯಿಂದ ಹೊರತೆಗೆಯುವಾಗ ವಿಷಕಾರಿ ರಾಸಾಯನಿಕ ವಸ್ತುಗಳು ವಾತಾವರಣಕ್ಕೆ ಬಿಡುಗಡೆಯಾಗುತ್ತವೆ.ಈ ಕಾರಣದಿಂದ ಇವಿಗಳ ಬಳಕೆ ಹೆಚ್ಚಿದರೆ, ಪರೋಕ್ಷವಾಗಿ ಪರಿಸರಕ್ಕೆ ಹಾನಿಯಾಗುತ್ತದೆ.

ಲಿಥಿಯಂ ಅಯಾನ್ ಬ್ಯಾಟರಿಗಳ ಕಾರ್ಯಕ್ಷಮತೆ ಕುಸಿದಾಗ ಅವನ್ನು ಬದಲಿಸಬೇಕಾಗುತ್ತದೆ. ಹೀಗೆ ಬದಲಿಸಿದ ಹಳೆಯ ಬ್ಯಾಟರಿಗಳಲ್ಲಿ ಮರುಬಳಕೆ ಆಗುತ್ತಿರುವ ಬ್ಯಾಟರಿಗಳ ಪ್ರಮಾಣ ಶೇ 5 ಮಾತ್ರ. ಉಳಿದ ಶೇ 95ರಷ್ಟು ಹಳೆಯ ಬ್ಯಾಟರಿಗಳನ್ನು ಅವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುತ್ತಿದೆ. ಇದರಿಂದ ಪರಿಸರಕ್ಕೆ ಅಪಾಯಕಾರಿ ರಾಸಾಯನಿಕ ವಸ್ತುಗಳು ಬಿಡುಗಡೆಯಾಗುತ್ತವೆ.ಈ ಸ್ವರೂಪದ ಮಾಲಿನ್ಯವನ್ನು ತಡೆಯಲು ಹಳೆಯ ಬ್ಯಾಟರಿಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ನೀತಿಗಳನ್ನು ರೂಪಿಸಬೇಕಾಗುತ್ತದೆ.

ಮುಂದಿರುವ ಸವಾಲುಗಳು

ಇವಿಗಳಿಂದಾಗುವ ಪರೋಕ್ಷ ಪರಿಸರ ಮಾಲಿನ್ಯವನ್ನು ತಡೆಗಟ್ಟಲು ಬಹಳ ದೂರ ಸಾಗಬೇಕಾಗಿದೆ. ವಿದ್ಯುತ್ ಉತ್ಪಾದನೆಗೆ ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆಯನ್ನು ತಗ್ಗಿಸಬೇಕಿದೆ. ಅಂದರೆ ಕಲ್ಲಿದ್ದಲು ಉಷ್ಣ ವಿದ್ಯುತ್ ಸ್ಥಾವರ, ಡೀಸೆಲ್ ಆಧಾರಿತ ವಿದ್ಯುತ್ ಉತ್ಪಾದನಾ ಸ್ಥಾವರ ಮತ್ತು ನೈಸರ್ಗಿಕ ಅನಿಲ ಆಧಾರಿತ ವಿದ್ಯುತ್ ಉತ್ಪಾದನಾ ಸ್ಥಾವರಗಳ ಮೇಲಿನ ಅವಲಂಬನೆಯನ್ನು ಸಂಪೂರ್ಣವಾಗಿ ತಪ್ಪಿಸಬೇಕು.

ಇದಕ್ಕೆ ಪರ್ಯಾಯವಾಗಿ ಜಲವಿದ್ಯುತ್, ಸೌರವಿದ್ಯುತ್, ಪವನ ವಿದ್ಯುತ್ ಮತ್ತು ಅಣುವಿದ್ಯುತ್ ಸ್ಥಾವರಗಳ ಸಂಖ್ಯೆ ಹಾಗೂ ಸಾಮರ್ಥ್ಯವನ್ನು ಹೆಚ್ಚಿಸಬೇಕು. ಅಗತ್ಯವಿರುವ ವಿದ್ಯುತ್ನ ಶೇ 100ರಷ್ಟನ್ನೂ ಈ ಮೂಲಗಳಿಂದಲೇ ಪೂರೈಸುವಂತಾದರೆ, ಇವಿಗಳಿಂದಾಗುವ ವಾಯುಮಾಲಿನ್ಯವನ್ನು ಸಂಪೂರ್ಣವಾಗಿ ತಗ್ಗಿಸಲು ಸಾಧ್ಯವಿದೆ. ಆದರೆ ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರಗಳ ಅವಲಂಬನೆಯನ್ನು ಸಂಪೂರ್ಣವಾಗಿ ತಗ್ಗಿಸಲು, ಅಭಿವೃದ್ಧಿ ಹೊಂದಿದ ರಾಷ್ಟ್ರಗಳು 2050ರವರೆಗಿನ ಗಡುವು ಹಾಕಿಕೊಂಡಿವೆ. ರಷ್ಯಾ 2060, ಭಾರತವು 2070ರಲ್ಲಿ ಈ ಗುರಿಯನ್ನು ಮುಟ್ಟುವ ಪ್ರತಿಜ್ಞೆ ಮಾಡಿವೆ. ಇದಕ್ಕಾಗಿ ಅಪಾರ ಪ್ರಮಾಣದ ಬಂಡವಾಳ ಹೂಡಿಕೆ ಮಾಡಬೇಕಾಗುತ್ತದೆ. ಆದರೆ ಭಾರತವು ಹಾಕಿಕೊಂಡಿರುವ ಗುರಿಯನ್ನು 2070ರ ಒಳಗೆ ಮುಟ್ಟಲು ಸಾಧ್ಯವಿಲ್ಲ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಬ್ಯಾಟರಿಗಳಿಂದಾಗುವ ಪರಿಸರ ಮಾಲಿನ್ಯವನ್ನು ತಡೆಗಟ್ಟಲೂ ಹಲವು ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ಕಡಿಮೆ ಹಾನಿಕಾರಕ ರಾಸಾಯನಿಕ ವಸ್ತುಗಳ ಸಂಯೋಜನೆಯ ಬ್ಯಾಟರಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಬೇಕಿದೆ. ಬ್ಯಾಟರಿಗಳ ಮರುಬಳಕೆಯನ್ನು ಉತ್ತೇಜಿಸಬೇಕಿದೆ. ಅಲ್ಲದೆ, ಹಳೆಯ ಬ್ಯಾಟರಿಗಳ ವೈಜ್ಞಾನಿಕ ವಿಲೇವಾರಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕಿದೆ.

ಶುದ್ಧ ಇಂಧನ ಅನಿವಾರ್ಯ

ವಿಶ್ವದ ಇತರೆಡೆಗೆ ಹೋಲಿಸಿದರೆ, ಯುರೋಪ್ ಖಂಡದಲ್ಲಿ ಇವಿಗಳ ಮಾರಾಟ ಅಧಿಕವಾಗಿದೆ. ಆದರೆ ಪೋಲಂಡ್ ಮತ್ತು ಕೊಸೊವೊ ಮೊದಲಾದ ದೇಶಗಳಲ್ಲಿ ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳೇ ಅಧಿಕ. ಹಾಗಾಗಿ, ಇಲ್ಲಿ ಇವಿಗಳಿಂದ ಆಗುವ ಪರೋಕ್ಷ ಮಾಲಿನ್ಯ ಹೆಚ್ಚು ಎಂದು ರೇಡಿಯಂಟ್ ಎನರ್ಜಿ ಗ್ರೂಪ್ (ಆರ್ಇಜಿ) ಸಂಶೋಧನಾ ಸಂಸ್ಥೆಯ ವರದಿ ತಿಳಿಸಿದೆ.

ಅಣು ವಿದ್ಯುತ್ ಹಾಗೂ ಜಲವಿದ್ಯುತ್ ಗ್ರಿಡ್ನಿಂದ ಪೂರೈಕೆಯಾಗುವ ವಿದ್ಯುತ್ನಿಂದ ಚಾರ್ಜ್ ಮಾಡಲಾದ ಇ–ವಾಹನಗಳು ಪರಿಸರ ಸ್ನೇಹಿ. ಆದರೆ ಪಳೆಯುಳಿಕೆ ಇಂಧನ ಆಧಾರಿತ ವಿದ್ಯುತ್ ಸ್ಥಾವರಗಳು ಅಧಿಕವಾಗಿರುವಲ್ಲಿ ಇವಿಗಳಿಂದಲೂ ದೊಡ್ಡ ಪ್ರಮಾಣದ ವಾಯುಮಾಲಿನ್ಯ ಉಂಟಾಗುತ್ತದೆ.ಟೆಸ್ಲಾ ಮಾಡೆಲ್ 3 ಇವಿಯನ್ನು 100 ಕಿ.ಮೀ ಓಡಿಸಲು ಬೇಕಾದ, ವಿದ್ಯುತ್ ಉತ್ಪಾದನೆ ವೇಳೆ ವಾತಾವರಣಕ್ಕೆ ಬಿಡುಗಡೆಯಾದ ಇಂಗಾಲದ ಪ್ರಮಾಣ ಮತ್ತು ಪೆಟ್ರೋಲ್/ಡೀಸೆಲ್ ಚಾಲಿತ ವಾಹನವನ್ನು ಅಷ್ಟೇ ದೂರ ಓಡಿಸಿದಾಗ ಬಿಡುಗಡೆಯಾದ ಇಂಗಾಲದ ಪ್ರಮಾಣವನ್ನು ಹೋಲಿಸಿ ಈ ಅಧ್ಯಯನ ಮಾಡಲಾಗಿದೆ.

ಹೀಗಾಗಿ ಶುದ್ಧ ಇಂಧನ ಮೂಲವು, ಇವಿಗಳ ಉದ್ದೇಶ ಈಡೇರಿಕೆಗೆ ಅನಿವಾರ್ಯ.ಸ್ವಿಟ್ಜರ್ಲೆಂಡ್ ಈ ದಿಸೆಯಲ್ಲಿ ಶೇ 100ರಷ್ಟು ಸಾಧನೆ ಮಾಡಿದೆ. ನಾರ್ವೆ ಶೇ 98, ಫ್ರಾನ್ಸ್ ಶೇ 96, ಆಸ್ಟ್ರಿಯಾ ಶೇ 93ರಷ್ಟು ಇಂಗಾಲ ಹೊರಸೂಸುವಿಕೆಯನ್ನು ತಡೆದಿವೆ ಎಂದು ವರದಿ ಅಭಿಪ್ರಾಯಪಟ್ಟಿದೆ. ಸೈಪ್ರಸ್, ಸರ್ಬಿಯಾ, ಎಸ್ಟೋನಿಯಾ, ನೆದರ್ಲೆಂಡ್ಸ್ ದೇಶಗಳು ಹಿಂದಿವೆ.ಯುರೋಪ್ನ ಅತಿದೊಡ್ಡ ಕಾರು ತಯಾರಿಕಾ ದೇಶವಾಗಿರುವ ಜರ್ಮನಿಯು ನವೀಕರಿಸಬಹುದಾದ ಮೂಲದಿಂದ ವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸಿದೆ. ಹೀಗಾಗಿ, ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು
ಶೇ 55ರಷ್ಟು ಕಡಿತ ಮಾಡಿದೆ.

ಸೌರ ಮತ್ತು ಪವನ ವಿದ್ಯುತ್ ಮೇಲೆ ಹೆಚ್ಚು ಹೂಡಿಕೆ ಮಾಡಿರುವ ಸ್ಪೇನ್ ಹಾಗೂ ಜರ್ಮನಿಯಲ್ಲಿ ನವೀಕರಿಸಬಹುದಾದ ಮೂಲಗಳಿಂದ ಪಡೆದ ವಿದ್ಯುತ್ ಅನ್ನು ಸಂಗ್ರಹಿಸಿಡುವ ಸಮಸ್ಯೆಯಿದೆ. ಹೀಗಾಗಿ ಚಾರ್ಜ್ ಮಾಡುವ ಸಮಯ ಯಾವುದು ಎಂಬುದರ ಮೇಲೆ ಇಂಗಾಲ ಹೊರಸೂಸುವಿಕೆ ಪ್ರಮಾಣ ನಿರ್ಧಾರವಾಗುತ್ತದೆ. ಅಂದರೆ, ಸೂರ್ಯನ ಕಿರಣಗಳು ಪ್ರಖರವಾಗಿರುವ ಹಾಗೂ ಹೆಚ್ಚು ಗಾಳಿ ಬೀಸುವ ಮಧ್ಯಾಹ್ನದ ಹೊತ್ತು ಇವಿಗಳನ್ನು ಚಾರ್ಜ್ ಮಾಡುವುದರಿಂದ ಶೇ 16–18ರಷ್ಟು ಇಂಗಾಲ ಹೊರಸೂಸುವಿಕೆ ನಿಯಂತ್ರಿಸಬಹುದು.

ವಿದ್ಯುತ್ ತಯಾರಿಕೆಯನ್ನು ಇಂಗಾಲಮುಕ್ತಗೊಳಿಸುವ ಹಾಗೂ ನವೀಕರಿಸಬಹುದಾದ ಮೂಲಗಳಿಂದ ಉತ್ಪಾದಿಸಿದ ಇಂಧನವನ್ನು ದಾಸ್ತಾನು ಮಾಡುವ ಉತ್ತಮ ಮಾರ್ಗಗಳನ್ನು ಕಂಡುಕೊಳ್ಳುವ ಸವಾಲು ವಾಹನ ಉದ್ಯಮದ ಮುಂದಿದೆ.ಲಿಥಿಯಂ ಅಯಾನ್ ಬ್ಯಾಟರಿಗಳು ಕೇವಲ 4 ಗಂಟೆಗಳವರೆಗೆ ಪೂರ್ಣ ಸಾಮರ್ಥ್ಯದಲ್ಲಿ ವಿದ್ಯುತ್ ಸಂಗ್ರಹಿಸುವ ಸಾಮರ್ಥ್ಯ ಹೊಂದಿವೆ. ಅಂದರೆ ಹಗಲಿನಲ್ಲಿ ಗಮನಾರ್ಹ ಪ್ರಮಾಣದ ಸೌರ ಮತ್ತು ಪವನ ಶಕ್ತಿಯನ್ನು ಉತ್ಪಾದಿಸುವ ದೇಶಗಳು, ರಾತ್ರಿಯ ವೇಳೆ ಇಂಗಾಲ ಆಧಾರಿತ ವಿದ್ಯುತ್ ಮೂಲಗಳ ಮೇಲೆ ಅವಲಂಬಿತವಾಗಬೇಕಾದ ಪರಿಸ್ಥಿತಿ ಇದೆ.

ದೇಶಗಳು ಹೊಂದಿರುವ ವಿದ್ಯುತ್ ಉತ್ಪಾದನಾ ಮೂಲಗಳು ಯಾವುವು ಎಂಬುದರ ಮೇಲೆ, ಸಾರಿಗೆಯನ್ನು ಪೂರ್ಣ ವಿದ್ಯುದೀಕರಣಗೊಳಿಸುವ ಅಂಶ ಅವಲಂಬಿತವಾಗಿದೆ. ಇವಿ ಯಶಸ್ವಿಯಾಗಬೇಕಾದರೆ, ಇಂಗಾಲಮುಕ್ತ ವಿದ್ಯುತ್ ಕಾರ್ಯ
ತಂತ್ರಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಂಶೋಧಕ ಸಿದ್ ಬಗ್ಗಾ ಹೇಳುತ್ತಾರೆ.

ಐದರಲ್ಲಿ ಒಂದು ಕಾರು ಇವಿ

ಯುರೋಪ್ನಲ್ಲಿ ಕಳೆದ ತ್ರೈಮಾಸಿಕದಲ್ಲಿ ಮಾರಾಟವಾದ ಪ್ರತೀ ಐದು ಕಾರುಗಳಲ್ಲಿ ಒಂದು ವಿದ್ಯುತ್ಚಾಲಿತ ವಾಹನವಾಗಿದೆ. 2028ರ ವೇಳೆಗೆ ಈ ಪ್ರಮಾಣ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಅರ್ನೆಸ್ಟ್ ಅಂಡ್ ಯಂಗ್ಕಂಪನಿ ತಿಳಿಸಿದೆ.

ಜನರಲ್ ಮೋಟಾರ್ಸ್, ಫೋಕ್ಸ್ವ್ಯಾಗನ್ ಸೇರಿದಂತೆ ಪ್ರಮುಖ ವಾಹನ ತಯಾರಿಕಾ ಕಂಪನಿಗಳು ಮುಂಬರುವ ವರ್ಷಗಳಲ್ಲಿ ವಿದ್ಯುತ್ಚಾಲಿತ ವಾಹನಗಳನ್ನೇ ಹೆಚ್ಚು ಮಾರಾಟ ಮಾಡಬೇಕು ಎಂಬ ಗುರಿ ಹಾಕಿಕೊಂಡಿವೆ. ಫೋಕ್ಸ್ವ್ಯಾಗನ್ ಕಂಪನಿಯು 2030ರ ವೇಳೆಗೆ ವಿದ್ಯುತ್ಚಾಲಿತ ವಾಹನಗಳ ಮಾರಾಟ ಪ್ರಮಾಣವನ್ನು ಶೇ 70ಕ್ಕೆ ಏರಿಸುವ ಬದ್ಧತೆ ಪ್ರದರ್ಶಿಸಿದೆ.

ಆಧಾರ: ಇಂಟರ್ನ್ಯಾಷನಲ್ ಕೌನ್ಸಿಲ್ ಆನ್ ಕ್ಲೀನ್ ಟ್ರಾನ್ಸ್ಪೋರ್ಟೇಷನ್ ವರದಿ, ಇಂಧನ ಸಚಿವಾಲಯ, ಪಿಟಿಐ, ರಾಯಿಟರ್ಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.