ಹಲವು ಕಾರಣಗಳಿಗಾಗಿ ನಗರಪ್ರದೇಶಗಳಲ್ಲಿ ವಾಸಿಸುವ ಕ್ವಿಯರ್ ಸಮುದಾಯದ ಜನರ ಧ್ವನಿಗಳು, ಅಭಿವ್ಯಕ್ತಿ ಹೊರಜಗತ್ತಿಗೆ ತೋರುತ್ತವೆ. ನಗರ ಪ್ರದೇಶವು ಈ ಸಮುದಾಯದವರಿಗೆ ಹೆಚ್ಚು ಸ್ವಾತಂತ್ರ್ಯ ನೀಡಬಹುದು. ಅದಕ್ಕಾಗಿ ಅವರು ತಮ್ಮ ಅಸ್ಮಿತೆಯನ್ನು ಭಯವಿಲ್ಲದೇ ಹೇಳಿಕೊಳ್ಳುತ್ತಾರೆ. ಆದರೆ, ಇಂಥ ಪರಿಸ್ಥಿತಿ ಸಣ್ಣ ಸಣ್ಣ ಊರುಗಳಲ್ಲಿ ಇಲ್ಲ. ಸಣ್ಣ ಊರುಗಳಲ್ಲಿ ಈ ಸಮುದಾಯದವರನ್ನು ಜನರು ಒಪ್ಪಿಕೊಳ್ಳುವುದಿಲ್ಲ, ಅವರ ಸ್ಥಿತಿಯು ಚಿಂತಾಜನಕವಾಗಿರುತ್ತದೆ. ನಗರ ಪ್ರದೇಶದ ಕ್ವಿಯರ್ ಜನರ ಅಭಿವ್ಯಕ್ತಿಯು ಜಗತ್ತಿಗೆ ತಿಳಿಯುವುದಕ್ಕೆ ಅವರಿಗೆ ಲಭ್ಯ ಇರುವ ಬೇರೆ ಬೇರೆ ಸಂಪನ್ಮೂಲಗಳೂ ಕಾರಣವಾಗಿವೆ. ಅವರ ಅಭಿವ್ಯಕ್ತಿಯನ್ನು ಹೊರಜಗತ್ತಿಗೆ ಕೇಳಿಸಬಲ್ಲ ಹಲವು ವಿಧಾನಗಳಿವೆ. ಮೂಲೆಗುಂಪಾದ ವರ್ಗದ ಜನರ ಅಭಿವ್ಯಕ್ತಿಯನ್ನು ಜಗತ್ತಿಗೆ ತಿಳಿಸುವ ಕಾರ್ಯವಾಗಬೇಕು ಎನ್ನುವುದನ್ನು ಇದು ಸೂಚಿಸುತ್ತದೆ. ಹಾಗೆಯೇ, ಅವರ ಮಾತು ಕೇಳಿಸುತ್ತಿಲ್ಲವಷ್ಟೇ, ಆದರೆ, ಅವರು ಬದುಕಿದ್ದಾರೆ; ಅವರ ಅಸ್ತಿತ್ವ ಇದೆ. ನಗರ ಪ್ರದೇಶಗಳಲ್ಲೂ ಕ್ವಿಯರ್ ಸಮುದಾಯದ ಜನರ ಮೇಲೆ ಹಿಂಸೆ, ದೌರ್ಜನ್ಯಗಳು ನಡೆಯುತ್ತಿವೆ. ಆದರೆ, ಅವರ ಮೇಲಾದ ಹಿಂಸೆ, ದೌರ್ಜನ್ಯಗಳನ್ನು ಜಗತ್ತಿಗೆ ತಿಳಿಸುವ ಮೂಲಗಳು ನಗರ ಪ್ರದೇಶಗಳಲ್ಲಿ ಮಾತ್ರ ಇವೆ. ಆದ್ದರಿಂದ, ಕ್ವಿಯರ್ ಸಮುದಾಯದ ಜನರು ನಗರಪ್ರದೇಶಗಳಲ್ಲಿ ಮಾತ್ರ ಇರುವುದಲ್ಲ, ಯಾವುದೇ ವರ್ಗ, ದೇಶ, ಪ್ರದೇಶದವರೂ ಕ್ವಿಯರ್ ಆಗಿರಬಹುದು.