ಕಳೆದ ದೀಪಾವಳಿ ಸಮಯದಲ್ಲಿ ಗುಂಡ್ಲುಪೇಟೆ ತಾಲ್ಲೂಕಿನ ಕೋಡಹಳ್ಳಿಯಿಂದ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಕೈಗೊಂಡಿದ್ದ ಯುವಕರ ತಂಡ
ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿರುವ ಆದಿಚುಂಚನಗಿರಿ ಸಂಸ್ಥಾನದಲ್ಲಿ 2022ರ ನವೆಂಬರ್‌ನಲ್ಲಿ ನಡೆದ ಒಕ್ಕಲಿಗ ವಧು–ವರರ ಸಮಾವೇಶದಲ್ಲಿ ಪಾಲ್ಗೊಂಡವರು
ರೈತ ಸಂಘದಿಂದ ಅವಿವಾಹಿತ ಯುವ ರೈತರ ನೋಂದಣಿ: ಯುವ ರೈತರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ರೈತ ಸಂಘ, ಸರ್ಕಾರದ ಗಮನ ಸೆಳೆಯಲು ನಿರ್ಧರಿಸಿ, ಅವಿವಾಹಿತ ಯುವ ರೈತರ ನೋಂದಣಿ ಆರಂಭಿಸಿದೆ. ಬೃಹತ್ ಸಮಾವೇಶವೊಂದನ್ನು ಶೀಘ್ರದಲ್ಲಿ ನಡೆಸಲಿದೆ. ‘ರೈತ ವರನನ್ನು ಮದುವೆಯಾಗುವ ವಧುವಿಗೆ ಸರ್ಕಾರದಿಂದ ₹ 5 ಲಕ್ಷ ಪ್ರೋತ್ಸಾಹಧನ ನೀಡಬೇಕು. ಸರ್ಕಾರಿ ಹಾಗೂ ಅರೆ ಸರ್ಕಾರಿ ಉದ್ಯೋಗಗಳಲ್ಲಿ ರೈತರ ಮಕ್ಕಳಿಗೆ ಮೀಸಲಾತಿ ಜಾರಿಗೊಳಿಸಬೇಕು. ಕೃಷಿ ಸಂಬಂಧಿಸಿದ ವಾಣಿಜ್ಯ ಚಟುವಟಿಕೆಗಳನ್ನು ನಡೆಸಲು ರೈತರ ಮಕ್ಕಳಿಗೆ ‘ಮುದ್ರಾ’ ಯೋಜನೆ ಮಾದರಿಯಲ್ಲಿ ಬಡ್ಡಿ ರಹಿತ ಸಾಲ ನೀಡಬೇಕು. ಹೆಣ್ಣು ಮಕ್ಕಳಿಗೆ ವಿಶೇಷ ಪ್ಯಾಕೇಜ್ ಘೋಷಿಸಿ, ಸಾಮೂಹಿಕ–ಸರಳ ವಿವಾಹವನ್ನು ಪ್ರೋತ್ಸಾಹಿಸಬೇಕು ಎಂಬುದು ನಮ್ಮ ಬೇಡಿಕೆ’ ಎಂದು ಹೇಳುತ್ತಾರೆ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹಾಗೂ ಸರ್ವೋದಯ ಕರ್ನಾಟಕ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಎನ್. ಗೌಡ.
ಬಡಗಲಪುರ ನಾಗೇಂದ್ರ ಹಾಗೂ ಸರ್ವೋದಯ ಕರ್ನಾಟಕ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಎನ್. ಗೌಡ
ಘನತೆಯಿಂದ ಕಾಣಬೇಕಿದೆ: ಹೆಣ್ಣು ಸಿಗದಿರುವುದಕ್ಕೆ ಲಿಂಗಾನುಪಾತದ ಕುಸಿತದ ಜತೆಗೆ, ಕೃಷಿ ಕೆಲಸಕ್ಕೆ ಘನತೆ ಇಲ್ಲದಿರು ವುದು, ಜಾತಿ ಪದ್ಧತಿ ಹಾಗೂ ವರ್ಗ ಭೇದವೂ ಕಾರಣ. ಅಂತರ್ಜಾತಿ ವಿವಾಹಕ್ಕೆ ಸಮುದಾಯಗಳು ತೆರೆದುಕೊಂಡಿಲ್ಲ. ಜಾತಿಗಳಲ್ಲಿರುವ ಉಪ ಪಂಗಡದ ವ್ಯತ್ಯಾಸವನ್ನೂ ಸಮಾಜ ಒಪ್ಪಿಕೊಳ್ಳುತ್ತಿಲ್ಲ. ಕೃಷಿ ಮಾಡುವ ಹೆಣ್ಣು –ಗಂಡನ್ನು ಘನತೆಯಿಂದ ನೋಡದಿರುವುದು ಸಮಸ್ಯೆಯ ಮೂಲ ಎನ್ನುತ್ತಾರೆ ಬೆಂಗಳೂರಿನ ವಿಎಚ್‌ಸಿ ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಹೋಂ ಸೈನ್ಸ್‌ನ ಸಮಾಜ ಶಾಸ್ತ್ರ ಪ್ರಾಧ್ಯಾಪಕ
ಬೆಂಗಳೂರಿನ ವಿಎಚ್‌ಸಿ ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಹೋಂ ಸೈನ್ಸ್‌ನ ಸಮಾಜ ಶಾಸ್ತ್ರ ಪ್ರಾಧ್ಯಾಪಕ