(2022-23ರ ಮಾಹಿತಿ: ತೋಟಗಾರಿಕೆ ಇಲಾಖೆ, ಹಣ್ಣು ಮತ್ತು ತರಕಾರಿಗಳ ವಿಭಾಗ, ಲಾಲ್‌ಬಾಗ್, ಬೆಂಗಳೂರು)
ವಿಜಯಪುರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಒಣದ್ರಾಕ್ಷಿ ವಹಿವಾಟು ಸಂಕೀರ್ಣದಲ್ಲಿ ಶನಿವಾರ ಇ–ಟ್ರೇಡಿಂಗ್‌ನಲ್ಲಿ ಭಾಗವಹಿಸಿದ್ದ ರೈತರು ದ್ರಾಕ್ಷಿಯನ್ನು ಜೋಡಿಸಿಟ್ಟರು
ಪ್ರಜಾವಾಣಿ ಚಿತ್ರ
ಸರ್ಕಾರದ ಕೆಪಕ್ ವಿಭಾಗದ ಅಡಿ ಗದಗದಲ್ಲಿ ನಿರ್ಮಾಣವಾಗಿರುವ ಶೈತ್ಯಾಗೃಹ
ಪ್ರಜಾವಾಣಿ ಚಿತ್ರ
ಒಣ ದ್ರಾಕ್ಷಿಯನ್ನು ಕೋಲ್ಡ್‌ಸ್ಟೋರೇಜ್ ಒಳಗೆ ಬಾಕ್ಸ್‌ಗಳಲ್ಲಿಟ್ಟು ಜೋಡಿಸಿರುವುದು.
ಸೆಲ್ಕೊ ಸಂಸ್ಥೆಯ ಸಹಯೋಗದಲ್ಲಿ ಬೆಂಗಳೂರಿನ ಸಹಜ ಆರ್ಗ್ಯಾನಿಕ್ಸ್ – ರೈತ ಉತ್ಪಾದಕ ಕಂಪನಿ, ತನ್ನ ಕಚೇರಿಯ ಆವರಣದಲ್ಲಿ ಸುಮಾರು ₹ 25 ಲಕ್ಷ ವೆಚ್ಚದ, 10 ಟನ್ ಸಾಮರ್ಥ್ಯದ ಮೂರು ಕೋಣೆಗಳ ಕೋಲ್ಡ್‌ಸ್ಟೋರೇಜ್ ಅಳವಡಿಸಿದೆ. ‘ಒಂದೊಂದು ಉತ್ಪನ್ನಕ್ಕೆ ಒಂದೊಂದು ತಾಪಮಾನ ಅಗತ್ಯ. ಅದಕ್ಕೆ ಮೂರು ಕೋಣೆಗಳನ್ನು ಮಾಡಿಸಿದ್ದೇವೆ. 6 ಡಿಗ್ರಿಯಲ್ಲಿ ಆಲೂಗೆಡ್ಡೆ, 8 ರಿಂದ 12 ಡಿಗ್ರಿಯಲ್ಲಿ ಧಾನ್ಯಗಳನ್ನು ಇಡುತ್ತೇವೆ. ಸೀಸನ್‌ನಲ್ಲಿ ಆಲೂಗೆಡ್ಡೆ ಖರೀದಿಸಿ, ಆರು ತಿಂಗಳವರೆಗೂ ಇಡುತ್ತೇವೆ. ಹುಳು ಬಾಧೆ ತಡೆಯಲು ಧಾನ್ಯ, ಹುಣಸೆಹಣ್ಣು ಇಡುತ್ತೇವೆ. ತರಕಾರಿ ಇಟ್ಟು ಬಳಸುವುದು ಕಷ್ಟ. ಸೌರ ಆಧಾರಿತ ಘಟಕವಾದರೂ, ಎಮರ್ಜೆನ್ಸಿಗಾಗಿ ವಿದ್ಯುತ್ ಸಂಪರ್ಕವೂ ಇದೆ. ಆದರೆ ಈ ವರೆಗೂ ಒಂದು ಯೂನಿಟ್ ಬಳಸಿಲ್ಲ. ಒಂದೂವರೆ ವರ್ಷದಿಂದ ಈ ಘಟಕವನ್ನು ಸೌರಶಕ್ತಿಯಿಂದ ಬಳಸುತ್ತಿದ್ದೇವೆ. ಈವರೆಗೆ ನಿರ್ವಹಣೆಗಾಗಿ ಒಂದು ಪೈಸೆ ಕೂಡ ಖರ್ಚಾಗಿಲ್ಲ’.
ಸೋಮೇಶ್, ಸೆಲ್ಕೊ ಕಂಪನಿಯ ಸಿಇಒ
6-8 ಡಿಗ್ರಿ ಸೆಲ್ಸಿಯಸ್ ಉಷ್ಣತೆಯಲ್ಲಿ ಒಣಮೆಣಸಿನಕಾಯಿ, ಒಣಶುಂಠಿ, ಅರಿಷಿಣ, ಹುಣಸೆಹಣ್ಣು, ಹೆಸರು, ಅಲಸಂದಿ, ಗೋವಿನಜೋಳವನ್ನು ಕೋಲ್ಡ್ ಸ್ಟೋರೇಜ್‌ನಲ್ಲಿ ಸಂಗ್ರಹಿಸಲು ಅವಕಾಶವಿದೆ.
ವಿ.ಎಸ್. ಮೋರಿಗೇರಿ, ಗೌರವ ಕಾರ್ಯದರ್ಶಿ, ವರ್ತಕರ ಸಂಘ ಬ್ಯಾಡಗಿ