ಶೇಂಗಾ ಬೆಳೆಯುವುದನ್ನೇ ನಿಲ್ಲಿಸಿದ್ದೆ. ಜಮೀನು ಪಾಳು ಬಿಟ್ಟಿದ್ದೆ. ಇನ್ನು ಮುಂದೆ ಕೃಷಿ ಸಾಧ್ಯವಿಲ್ಲ. ಮಾರಾಟ ಮಾಡಿ ಏನಾದರೂ ಮಾಡಬೇಕು ಎಂದು ಯೋಚಿಸಿದ್ದೆ. ಭೂಮಿ ಕೊಂಡುಕೊಳ್ಳಲೂ ಯಾರೂ ಮುಂದೆ ಬರುತ್ತಿರಲಿಲ್ಲ. ಒಳ್ಳೆ ಸಮಯದಲ್ಲಿ ಸೋಲಾರ್ ಪಾರ್ಕ್ ಬಂದು ನಮ್ಮ ಕೈ ಹಿಡಿಯಿತು
-ಜಿ.ಎನ್.ಗೋವಿಂದಪ್ಪ, ಬಳಸಮುದ್ರ ಗ್ರಾಮ
ಸೋಲಾರ್ ಪಾರ್ಕ್‌ಗೆ 25 ಎಕರೆ ಜಮೀನು ಕೊಟ್ಟಿದ್ದೇನೆ. ಕೈ ತುಂಬ ಹಣ ಬರುತ್ತಿದೆ. ಇದರಿಂದ ಹೊಸದಾಗಿ ಮನೆ ಕಟ್ಟಿಸಲು ಸಾಧ್ಯವಾಯಿತು. ಮಕ್ಕಳ ಮದುವೆಗೂ ನೆರವಾಯಿತು. ನಮ್ಮ ಭಾಗದಲ್ಲಿ ಜಮೀನು ಕೊಂಡುಕೊಳ್ಳುವವರೇ ಇರಲಿಲ್ಲ. ಈಗ ಮಾರಾಟ ಮಾಡುವವರೇ ಇಲ್ಲ. ಭೂಮಿಗೆ ಬೇಡಿಕೆ ಹೆಚ್ಚಾಗಿದೆ
-ಪಿ.ಕೃಷ್ಣಪ್ಪ, ವೆಂಕಟಮ್ಮನಹಳ್ಳಿ
ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಲು ನೆರವಾಯಿತು. ಸೋಲಾರ್ ಪಾರ್ಕ್ ತರಲು ಸಾಕಷ್ಟು ಪ್ರಯತ್ನ ಮಾಡಿದ್ದಕ್ಕೂ ಫಲ ಸಿಕ್ಕಿದೆ. ಈ ಭಾಗದ ಜನರ ಆರ್ಥಿಕ, ಸಾಮಾಜಿಕ ಸ್ಥಿತಿಗತಿ ಸುಧಾರಿಸಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ನೆರವಾಗಲಿದೆ