ವಿಮಾನಗಳ ಮೂಲಕ ವಿದೇಶ ಪ್ರಯಾಣ ಕೈಗೊಳ್ಳುವ ಎಲ್ಲಾ ಪ್ರಯಾಣಿಕರ ಪಿಎನ್ಆರ್ (ಪ್ಯಾಸೆಂಜರ್ ನೇಮ್ ರೆಕಾರ್ಡ್) ವಿವರಗಳನ್ನು, ವಿಮಾನಯಾನ ಸಂಸ್ಥೆಗಳು ಕೇಂದ್ರ ಸರ್ಕಾರಕ್ಕೆ ಕಡ್ಡಾಯವಾಗಿ ನೀಡಬೇಕು ಎಂದು ಕೇಂದ್ರ ಸರ್ಕಾರವು ಹೇಳಿದೆ. ಅಪರಾಧಿಗಳು, ಆರ್ಥಿಕ ಅಪರಾಧಿಗಳು ದೇಶದಿಂದ ಪರಾರಿಯಾಗುವುದನ್ನು ತಡೆಗಟ್ಟಲು ಈ ನಿಯಮಗಳನ್ನು ಜಾರಿಗೆ ತರಲಾಗುತ್ತಿದೆ ಎಂದು ಸರ್ಕಾರವು ಹೇಳಿದೆ. ಇದಕ್ಕಾಗಿ ‘ಪಿಎನ್ಆರ್ ಮಾಹಿತಿ ನಿಯಮಗಳು–2022’ ಅನ್ನು ಇದೇ 8ರಂದು ಜಾರಿಗೆ ತರಲಾಗಿದೆ.

ಅಪರಾಧಿಗಳು, ಆರ್ಥಿಕ ಅಪರಾಧಿಗಳು ದೇಶದಿಂದ ಪರಾರಿಯಾಗುವುದನ್ನು ತಡೆಯುವುದು ಈ ನಿಯಮಗಳ ಉದ್ದೇಶ ಎಂದು ಸರ್ಕಾರ ಹೇಳಿದೆ. ಆದರೆ, ಈ ಉದ್ದೇಶಕ್ಕಾಗಿ ‘ಲುಕ್ಔಟ್ ನೋಟಿಸ್’ ನೀಡುವ ಒಂದು ವ್ಯವಸ್ಥೆ ಈಗಾಗಲೇ ಜಾರಿಯಲ್ಲಿದೆ. ಅಪರಾಧಿಗಳು ದೇಶಬಿಟ್ಟು ಪರಾರಿಯಾಗುವುದನ್ನು ತಡೆಯುವ ಉದ್ದೇಶದಿಂದ ಕೇಂದ್ರ ಗೃಹ ಸಚಿವಾಲಯವು ಲುಕ್ಔಟ್ ನೋಟಿಸ್ ನೀಡುತ್ತದೆ. ಈ ನೋಟಿಸ್ ಜಾರಿಯಾದ ನಂತರ, ಸಂಬಂಧಿತ ವ್ಯಕ್ತಿಯು ವಿಮಾನ ನಿಲ್ದಾಣದಲ್ಲಿ, ಬಂದರುಗಳಲ್ಲಿ ಪತ್ತೆಯಾದ ತಕ್ಷಣ ಅವರನ್ನು ಬಂಧಿಸಲಾಗುತ್ತದೆ. ಲುಕ್ಔಟ್ ನೋಟಿಸ್ನ ಅವಧಿ ಗರಿಷ್ಠ ಒಂದು ವರ್ಷ.

ಈ ಸ್ವರೂಪದ ಒಂದು ವ್ಯವಸ್ಥೆ ಜಾರಿಯಲ್ಲಿದ್ದರೂ, ಒಂದೇ ಉದ್ದೇಶಕ್ಕೆ ಇನ್ನೊಂದು ವ್ಯವಸ್ಥೆಯನ್ನು ಕೇಂದ್ರ ಸರ್ಕಾರವು ಜಾರಿಗೆ ತಂದಿದೆ. ಲುಕ್ಔಟ್ ನೋಟಿಸ್ ನೀಡಿದಾಗ, ಸಂಬಂಧಿತ ವ್ಯಕ್ತಿಯ ಮಾಹಿತಿಯನ್ನಷ್ಟೇ ಹಂಚಿಕೊಳ್ಳಲಾಗುತ್ತಿತ್ತು. ಆದರೆ, ಪ್ರತಿಯೊಬ್ಬ ಪ್ರಯಾಣಿಕರ ಸಂಪೂರ್ಣ ವಿವರಗಳನ್ನು ಸರ್ಕಾರಕ್ಕೆ ಕಡ್ಡಾಯವಾಗಿ ನೀಡಲೇಬೇಕು ಎನ್ನುತ್ತದೆ ಹೊಸ ನಿಯಮ.
ಅಂದರೆ ವಿದೇಶಕ್ಕೆ ಪ್ರಯಾಣ ಬೆಳೆಸುವ ಪ್ರತಿಯೊಬ್ಬ ವ್ಯಕ್ತಿಯ ಮಾಹಿತಿಯೂ ಸರ್ಕಾರಕ್ಕೆ
ಲಭ್ಯವಾಗುತ್ತದೆ.

ಪಿಎನ್ಆರ್ ಅಡಿ ಒಟ್ಟು 19 ಸ್ವರೂಪದ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತದೆ. ಇದರಲ್ಲಿ ಪ್ರಯಾಣಿಕರ ಪ್ರಯಾಣದ ಉದ್ದೇಶ, ಟಿಕೆಟ್ ಖರೀದಿಗೆ ಹಣ ಪಾವತಿಸಿದ ವಿವರ, ಲಗೇಜು ವಿವರ, ಜನ್ಮ ದಿನಾಂಕದಂತಹ ಮಾಹಿತಿಗಳನ್ನೂ ಸಂಗ್ರಹಿಸಲಾಗುತ್ತದೆ.

ವಿಶ್ವದ 60 ದೇಶಗಳು ವಿದೇಶಕ್ಕೆ ಪ್ರಯಾಣ ಹೊರಡುವವರ ಪಿಎನ್ಆರ್ ಮಾಹಿತಿಯನ್ನು ಸರ್ಕಾರಕ್ಕೆ ಸಲ್ಲಿಸುತ್ತವೆ. ಆದರೆ, ಅಪರಾಧಿಗಳು ಪರಾರಿಯಾಗುವುದನ್ನು ತಡೆಗಟ್ಟುವ ಉದ್ದೇಶದಿಂದ ಪಿಎನ್ಆರ್ ಸಂಗ್ರಹಿಸುತ್ತಿಲ್ಲ. ಅಂತಹ ಪ್ರಯತ್ನ ಇದೇ ಮೊದಲು ಎನ್ನಲಾಗಿದೆ.

ಸರ್ಕಾರಕ್ಕೆ ಪಿಎನ್ಆರ್ ಮಾಹಿತಿಯನ್ನು ನೀಡುವುದನ್ನು ಈ ನಿಯಮ ಕಡ್ಡಾಯಗೊಳಿಸಿದೆ.ಯಾವುದೇ ವಿಮಾನ ದೇಶದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡುವ (ಡಿಪಾರ್ಚರ್) 24 ಗಂಟೆಗೂ ಮುನ್ನ ವಿಮಾನಯಾನ ಸಂಸ್ಥೆಗಳು, ಕೇಂದ್ರ ನೇರ ತೆರಿಗೆ ಮತ್ತು ಸುಂಕ ಮಂಡಳಿಯ ಅಧೀನ ಸಂಸ್ಥೆಗೆ ಈ ಮಾಹಿತಿಯನ್ನು ನೀಡಬೇಕಾಗುತ್ತದೆ. ಮಾಹಿತಿ ನೀಡಲು ವಿಫಲವಾಗುವ ವಿಮಾನಯಾನ ಕಂಪನಿಗೆ ₹25,000ದಿಂದ ₹50,000ರದವರೆಗೆ ದಂಡ ವಿಧಿಸಲು ಅವಕಾಶವಿದೆ.

ಪಿಎನ್ಆರ್ ಅಡಿ ಸಂಗ್ರಹಿಸಲಾಗುವ ಮಾಹಿತಿ

1. ಪಿಎನ್ಆರ್ ರೆಕಾರ್ಡ್ ಲೊಕೇಟರ್ ಕೋಡ್

2. ಟಿಕೆಟ್ ಕಾಯ್ದಿರಿಸುವಿಕೆ/ನೀಡಿದ ದಿನಾಂಕ

3. ಉದ್ದೇಶಿತ ಪ್ರಯಾಣದ ದಿನಾಂಕ

4. ಪ್ರಯಾಣಿಕರ ಹೆಸರು

5. ಉಚಿತ ಪ್ರಯಾಣ, ರಿಯಾಯಿತಿ, ಉಚಿತ ಸೇವೆಗಳಿಗೆ ಸಂಬಂಧಿಸಿದ ಮಾಹಿತಿ

6. ಒಂದೇ ಪಿಎನ್ಆರ್ನಲ್ಲಿ ಪ್ರಯಾಣಿಸುತ್ತಿರುವ ಇತರ ಪ್ರಯಾಣಿಕರ ಹೆಸರು

7. ಸಂಪರ್ಕ ಮಾಹಿತಿ (ಇ–ಮೇಲ್ ವಿಳಾಸ, ದೂರವಾಣಿ ಸಂಖ್ಯೆ, ಮೊಬೈಲ್ ಸಂಖ್ಯೆ)

8. ಟಿಕೆಟ್ ಶುಲ್ಕ ಪಾವತಿ ವಿವರ (ಕ್ರೆಡಿಟ್/ಡೆಬಿಟ್ ಕಾರ್ಡ್ ವಿವರ ಇತ್ಯಾದಿ)

9. ಉದ್ದೇಶಿತ ಪ್ರಯಾಣದ ಸಂಪೂರ್ಣ ವಿವರ

10. ಟ್ರಾವೆಲ್ ಏಜೆನ್ಸಿ/ಏಜೆಂಟ್ ಹೆಸರು

11. ಕೋಡ್ ಶೇರ್ ಮಾಹಿತಿ (ಒಂದು ವಿಮಾನಯಾನ ಸಂಸ್ಥೆಯು, ಬೇರೊಂದು ವಿಮಾನಯಾನ ಸಂಸ್ಥೆಗಾಗಿ ಟಿಕೆಟ್ ಬುಕಿಂಗ್ ಸೇವೆ ನೀಡಿದ್ದರೆ ಮಾತ್ರ ಅನ್ವಯ)

12. ಪ್ರಯಾಣಿಕರ ಪ್ರಯಾಣದ ಸ್ಥಿತಿಗತಿ ಮಾಹಿತಿ (ಪ್ರಯಾಣ ದೃಢ, ಚೆಕ್ ಇನ್ ಮಾಹಿತಿ ಇತ್ಯಾದಿ)

13. ಟಿಕೆಟ್ ಮಾಹಿತಿ: ಟಿಕೆಟ್ ಸಂಖ್ಯೆ, ಏಕಮುಖ ಅಥವಾ ವಾಪಸಾತಿ ಪ್ರಯಾಣದ ಟಿಕೆಟ್ ಮಾಹಿತಿ (ಲಭ್ಯವಿದ್ದರೆ)

14. ಬ್ಯಾಗ್ಗಳ ವಿವರ

15. ಆಸನ ಸಂಖ್ಯೆ ವಿವರ

16. ವಿಶೇಷ ಸವಲತ್ತುಗಳು, ಪೂರಕ ಸವಲತ್ತುಗಳ ಮಾಹಿತಿ

17. ಪಾಸ್ಪೋರ್ಟ್ ವಿವರ, ಜನ್ಮ ದಿನಾಂಕ ಮತ್ತು ಲಿಂಗದ ಮಾಹಿತಿ ಒಳಗೊಂಡ ಅಡ್ವಾನ್ಸ್ಡ್ ಪ್ಯಾಸೆಂಜರ್ ಇನ್ಫರ್ಮೇಷನ್

18. ಪಿಎನ್ಆರ್ನಲ್ಲಿ ಆದ ಯಾವುದೇ ರೀತಿಯ ಬದಲಾವಣೆಗಳ ವಿವರ

19. ಸಂಯುಕ್ತ ಪಿಎನ್ಆರ್ ವಿವರ (ಎರಡು ಪಿಎನ್ಆರ್ ಸಂಖ್ಯೆಗಳಿರುವ ಸಂದರ್ಭದಲ್ಲಿ ಅನ್ವಯ)

ಎಲ್ಲ ಇಲಾಖೆಗಳಿಗೂ ಮಾಹಿತಿ ಅಧಿಕಾರ

ಈ ನಿಯಮಗಳ ಅಡಿಯಲ್ಲಿ ಈ ದತ್ತಾಂಶಗಳನ್ನು ಯಾರು ನಿರ್ವಹಣೆ ಮಾಡಬೇಕು ಎಂಬುದನ್ನು 3ನೇ ಸೆಕ್ಷನ್ನಲ್ಲಿ ವಿವರಿಸಲಾಗಿದೆ. ಯಾರೆಲ್ಲಾ ಈ ದತ್ತಾಂಶಗಳನ್ನು ಪಡೆದುಕೊಳ್ಳುವ ಅಧಿಕಾರ ಹೊಂದಿದ್ದಾರೆ ಎಂಬುದನ್ನು ಈ ನಿಯಮಗಳ 10ನೇ ಸೆಕ್ಷನ್ನಲ್ಲಿ ವಿವರಿಸಲಾಗಿದೆ.

ಈ ನೂತನ ನಿಯಮಗಳ ಅಡಿ ವಿದೇಶಕ್ಕೆ ಹೊರಡುವ ಪ್ರಯಾಣಿಕರ ಪಿಎನ್ಆರ್ ವಿವರವನ್ನು ಸಂಗ್ರಹಿಸುವ ಮತ್ತು ನಿರ್ವಹಣೆ ಮಾಡುವ ಹೊಣೆ ‘ನ್ಯಾಷನಲ್ ಕಸ್ಟಮ್ಸ್ ಟಾರ್ಗೆಟಿಂಗ್ ಸೆಂಟರ್–ಪ್ಯಾಸೆಂಜರ್ (ಎನ್ಸಿಟಿಸಿ–ಪಿ)’ ಘಟಕದ್ದು. ವಿಮಾನಯಾನ ಸಂಸ್ಥೆಗಳು ನೀಡುವ ಪಿಎನ್ಆರ್ ಮಾಹಿತಿಯನ್ನು ಎನ್ಸಿಟಿಸಿ–ಪಿ ಸಂಗ್ರಹಿಸುತ್ತದೆ. ಈ ಘಟಕದ ಉನ್ನತ ಆಧಿಕಾರಿಗಳಿಗೆ ಮಾತ್ರವೇ ಈ ದತ್ತಾಂಶವು ಲಭ್ಯವಿರುತ್ತದೆ.

ಕೇಂದ್ರ ಸರ್ಕಾರದ ತನಿಖಾ ಸಂಸ್ಥೆಗಳು ಪಿಎನ್ಆರ್ ವಿವರವನ್ನು ಕೋರಿ ಎನ್ಸಿಟಿಸಿ–ಪಿಗೆ ಮನವಿ ಸಲ್ಲಿಸಬೇಕು. ಹೀಗೆ ಸಲ್ಲಿಸಿದ ಮನವಿಗಳಿಗೆ ಪೂರಕವಾದ ಮಾಹಿತಿ/ದತ್ತಾಂಶಗಳನ್ನು ಎನ್ಸಿಟಿಸಿ–ಪಿಯು ನೀಡಬೇಕಾಗುತ್ತದೆ. ಯಾವ ಯಾವ ತನಿಖಾ ಸಂಸ್ಥೆಗಳು ಈ ಮಾಹಿತಿಯನ್ನು ಕೋರಿ ಮನವಿ ಸಲ್ಲಿಸಬಹುದು ಎಂಬುದರ ವಿವರ ನೂತನ ನಿಯಮಗಳಲ್ಲಿ ಇಲ್ಲ. ಆದರೆ, ಕೇಂದ್ರ ಸರ್ಕಾರದ ಇಲಾಖೆಗಳು ಮತ್ತು ತನಿಖಾ ಸಂಸ್ಥೆಗಳು ಎಂದು ಉಲ್ಲೇಖಿಸಲಾಗಿದೆ. ಈ ಪ್ರಕಾರ ಕೇಂದ್ರ ಸರ್ಕಾರದ ಎಲ್ಲಾ ಇಲಾಖೆಗಳಿಗೂ ಈ ಮಾಹಿತಿಯನ್ನು ಪಡೆದುಕೊಳ್ಳುವ ಅಧಿಕಾರವಿದೆ.

ಹೀಗೆ ಪಡೆದುಕೊಳ್ಳಲಾದ ಮಾಹಿತಿಯನ್ನು ಖಾಸಗಿತನ ರಕ್ಷಣೆ ಕಾನೂನುಗಳಿಗೆ ಬದ್ಧವಾಗಿಯೇ ಬಳಸಿಕೊಳ್ಳಬೇಕು. ಮಾಹಿತಿಯನ್ನು ಯಾವ ಉದ್ದೇಶಕ್ಕೆ ಬಳಸಿಕೊಳ್ಳಲಾಗುತ್ತದೆ ಎಂಬ ವಿವರವನ್ನೂ ಎನ್ಸಿಟಿಸಿ–ಪಿಗೆ ಒದಗಿಸಬೇಕು ಎಂದು ನಿಯಮಗಳಲ್ಲಿ ವಿವರಿಸಲಾಗಿದೆ.

ಮಾಹಿತಿಯನ್ನು ನಿರಾಕರಿಸುವ ಅಧಿಕಾರ ಎನ್ಸಿಟಿಸಿ–ಪಿಗೆ ಇದೆಯೇ ಅಥವಾ ಇಲ್ಲವೇ ಎಂಬುದನ್ನು ಈ ನಿಯಮಗಳಲ್ಲಿ ಸ್ಪಷ್ಟವಾಗಿ ವಿವರಿಸಿಲ್ಲ. ‘ಎನ್ಸಿಟಿಸಿ–ಪಿಯು ಮಾಹಿತಿಯನ್ನು ನೀಡಬಹುದು’ ಎಂದಷ್ಟೇ ಹೇಳಲಾಗಿದೆ.
ಖಾಸಗಿತನ ರಕ್ಷಣೆಯ ಮಾತು

ವ್ಯಕ್ತಿಗಳ ಖಾಸಗಿ ಮಾಹಿತಿಯನ್ನು ಸಂರಕ್ಷಿಸುವುದಕ್ಕಾಗಿ ಕಠಿಣ ಸ್ವರೂಪದ ಕಾನೂನುಗಳು ದೇಶದಲ್ಲಿ ಜಾರಿಯಲ್ಲಿವೆ. ಸಂಗ್ರಹಿಸಲಾದ ಪಿಎನ್ಆರ್ ಮಾಹಿತಿಯನ್ನು ಈ ಕಾನೂನುಗಳ ಪ್ರಕಾರ ರಕ್ಷಿಸುವ ಬದ್ಧತೆಯನ್ನು ನಿಯಮಾವಳಿಗಳು ಉಲ್ಲೇಖಿಸಿವೆ. ಪ್ರಾದೇಶಿಕ ಜನಾಂಗೀಯತೆ, ರಾಜಕೀಯ ಅಭಿಪ್ರಾಯಗಳು, ಧಾರ್ಮಿಕ ನಂಬುಗೆಗಳು, ವ್ಯಾಪಾರ ಸಂಘಟನೆ ಸದಸ್ಯತ್ವ, ಆರೋಗ್ಯ, ಲೈಂಗಿಕ ಜೀವನ ಮೊದಲಾದ ಮಾಹಿತಿಗಳನ್ನು ಸಂಗ್ರಹಿಸಲು ಅವಕಾಶವಿಲ್ಲ ಎಂದು ಇಲ್ಲಿ ಸ್ಪಷ್ಟಪಡಿಸಲಾಗಿದೆ. ಈ ಸುರಕ್ಷಿತ ವ್ಯವಸ್ಥೆಯಲ್ಲಿ ಪ್ರಯಾಣಿಕರ ಮಾಹಿತಿಯನ್ನು ಸ್ವೀಕರಿಸಲು, ಸಂಗ್ರಹಿಸಲು, ಹಂಚಿಕೊಳ್ಳಲು ಅವಕಾಶವಿದೆ.

ಮಾಹಿತಿ ಎಷ್ಟು ವರ್ಷ ಇಟ್ಟುಕೊಳ್ಳಬಹುದು?

ಪ್ರಯಾಣಿಕರ ಮಾಹಿತಿ ಸಂಗ್ರಹ ವ್ಯವಸ್ಥೆಯಡಿ ಸಂಗ್ರಹಿಸಲಾದ ಮಾಹಿತಿಯನ್ನು, ಅದನ್ನು ಸ್ವೀಕರಿಸಿದ ದಿನದಿಂದ ಗರಿಷ್ಠ ಐದು ವರ್ಷಗಳವರೆಗೆ ಇಟ್ಟುಕೊಳ್ಳಲು ಅವಕಾಶವಿದೆ. ವಿಚಾರಣೆ, ತನಿಖೆ ಅಥವಾ ಕೋರ್ಟ್ ಪ್ರಕರಣ ಎದುರಿಸುತ್ತಿರುವವರ ಮಾಹಿತಿ ಸಂಗ್ರಹವು ಗರಿಷ್ಠ ಅವಧಿಯ ಸಂಗ್ರಹ ಮಿತಿ ನಿಯಮಕ್ಕೆ ಅನ್ವಯವಾಗುವುದಿಲ್ಲ. ಐದು ವರ್ಷಗಳ ಬಳಿಕ ಈ ಮಾಹಿತಿಯನ್ನು ಅನಾಮಧೇಯ ಸ್ವರೂಪದಲ್ಲಿ ವಿಲೇವಾರಿ ಮಾಡಬಹುದು. ಒಂದು ವೇಳೆ, ಐದು ವರ್ಷಗಳ ನಂತರ ಬೆದರಿಕೆ, ಅಪಾಯದ ಸಂದರ್ಭಗಳು ಎದುರಾದಾಗ, ಅನಾಮಧೇಯ ಅಥವಾ ಮರೆಮಾಚಿದ ಸ್ವರೂಪದಲ್ಲಿ ಇರಿಸಲಾಗಿರುವ ಪ್ರಯಾಣಿಕರ ಮಾಹಿತಿಯನ್ನು ಪುನಃ ಕಾಣಿಸುವಂತೆ ಮಾಡಲು ಅವಕಾಶವಿರುತ್ತದೆ. ಎನ್ಸಿಟಿಸಿ–ಪಿ ಪ್ರಧಾನ ಹೆಚ್ಚುವರಿ ಮಹಾನಿರ್ದೇಶಕ ಅಥವಾ ಹೆಚ್ಚುವರಿ ಮಹಾನಿರ್ದೇಶಕರ ಶ್ರೇಣಿಗಿಂತ ಕಡಿಮೆಯಿಲ್ಲದ ಅಧಿಕಾರಿ ಮಾತ್ರವೇ ಈ ಮಾಹಿತಿಯನ್ನು ಹೆಚ್ಚುವರಿ ಅಧ್ಯಯನ ಅಥವಾ ವಿಶ್ಲೇಷಣೆಗೆ ಒಳಪಡಿಸಬಹುದಾಗಿದೆ.

ವರ್ಷಕ್ಕೊಮ್ಮೆ ಭದ್ರತೆ ಪರಿಶೀಲನೆ

ವ್ಯವಸ್ಥೆಯ ಪರಿಶೋಧನೆ ಮತ್ತು ಭದ್ರತಾ ಪರಿಶೋಧನೆಯನ್ನು (ಆಡಿಟ್) ವರ್ಷಕ್ಕೊಮ್ಮೆ ಸ್ವತಂತ್ರವಾಗಿ ನಡೆಸಲಾಗುತ್ತದೆ. ಎನ್ಸಿಟಿಸಿ–ಪಿ ಪ್ರಧಾನ ಹೆಚ್ಚುವರಿ ಮಹಾನಿರ್ದೇಶಕ ಅಥವಾ ಹೆಚ್ಚುವರಿ ಮಹಾನಿರ್ದೇಶಕ ಪ್ರಯಾಣಿಕರ ಮಾಹಿತಿಯನ್ನು ದುರುಪಯೋಗ ಮಾಡಿಕೊಂಡಿದ್ದಾರೆಯೇ ಎಂದು ಆಡಿಟ್ ಮೂಲಕ ಪರಿಶೀಲಿಸಲಾಗುತ್ತದೆ. ಈ ಇಬ್ಬರೂ ಅಧಿಕಾರಿಗಳಿಗೆ ಪರಿಶೋಧನೆ ಮಾಡುವ ಅಧಿಕಾರ ಇರುವುದಿಲ್ಲ ಎಂದು ನಿಯಮಾವಳಿಗಳಲ್ಲಿ ವಿವರಿಸಲಾಗಿದೆ.

ಆಧಾರ: ಪಿಎನ್ಆರ್ ಮಾಹಿತಿ ನಿಯಮಗಳು–2022, ಪಿಐಬಿ, ಕೇಂದ್ರ ಗೃಹ ಸಚಿವಾಲಯದ ಲುಕ್ಔಟ್ ನೋಟಿಸ್ ನಿಯಮಗಳು, ಪಿಟಿಐ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.