ಉತ್ತರ ಕರ್ನಾಟಕದಲ್ಲಿ (North Karnataka) ಹಲವು ಸಮುದಾಯದವರಿದ್ದಾರೆ. ಆಯಾ ಸಮುದಾಯದವರು ಅವರದೇ ಶೈಲಿಯ ಅಡುಗೆಗಳನ್ನು ಮಾಡಿಕೊಳ್ಳುತ್ತಾರೆ. ಅಂತಹ ಸಮುದಾಯದಲ್ಲಿ ಒಂದು ಮರಾಠ ಸಮುದಾಯ (Maratha Community). ಗ್ರೀನ್ ಮಟನ್ ಕರಿ ಮಾಡುವುದರಲ್ಲಿ ಇವರು ಫೇಮಸ್. ಹುಬ್ಬಳ್ಳಿ ಸ್ಪೆಷಲ್ ಈ ಮಟನ್ ಸಾರನ್ನು ನಿಮಗಾಗಿ ಮಾಡಿ ತೋರಿಸಿದ್ದಾರೆ ಆದರ್ಶ ತತ್ಪತಿ (Adarsh Tatpati). ಮಟನ್ ಮಾಂಸವನ್ನು ಮೊದಲೇ ಬೇಯಿಸಿ ಇಟ್ಟುಕೊಂಡಿದ್ದರೆ ಇಪ್ಪತ್ತೇ ನಿಮಿಷದಲ್ಲಿ ಮಾಡಬಹುದಾದ ಅಡುಗೆ ಇದು. ಜೋಳದ ರೊಟ್ಟಿ (Jowar Roti) ಮತ್ತು ಸೆಟ್ ದೋಸೆ (Set Dosa) ಜೊತೆಗೆ ಈ ತಿಳಿಹಸಿರು ಬಣ್ಣದ ಮಟನ್ ಕರಿ ತಿಂದರೆ ಸ್ವರ್ಗಕ್ಕೆ ಮೂರೇ ಗೇಣು !

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.