ಚಿಕನ್ ಬಿರಿಯಾನಿ

ಬೇಕಾಗುವ ಸಾಮಗ್ರಿಗಳು: ಸೋನಾ ಮಸೂರಿ ಅಕ್ಕಿ- ಅರ್ಧ ಕೆಜಿ, ಚಿಕನ್ - ಅರ್ಧ ಕೆಜಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ - 2 ಚಮಚ, ಅಡುಗೆಎಣ್ಣೆ, ಪಲಾವ್ ಎಲೆ -2 , ಚಕ್ಕೆ - 3, ಲವಂಗ - 10, ಏಲಕ್ಕಿ - 6, ಮರಾಠಿ ಮೊಗ್ಗು - 4, ಕಲ್ಲು ಹೂ - 3, ತುಪ್ಪ - 2 ಚಮಚ, ಗರಂಮಸಾಲೆ ಪುಡಿ - 1 ಚಮಚ, ಖಾರದಪುಡಿ - 2 ಚಮಚ, ಅರಿಸಿನ - ಅರ್ಧ ಚಮಚ, ಕೊತ್ತಂಬರಿ ಪುಡಿ - 1 ಚಮಚ, ಟೊಮೆಟೊ - 4, ರುಚಿಗೆ ತಕ್ಕಷ್ಟು ಉಪ್ಪು, ಈರುಳ್ಳಿ - 2, ಹಸಿಮೆಣಸಿನಕಾಯಿ - 8,ಮೊಸರು - 1 ಕಪ್, ನಿಂಬೆಹಣ್ಣು - ಅರ್ಧ,ಕೊತ್ತಂಬರಿ ಸೊಪ್ಪು - 1 ಹಿಡಿ, ಪುದಿನ -1 ಹಿಡಿ

ತಯಾರಿಸುವ ವಿಧಾನ: ಒಂದು ದೊಡ್ಡ ಪಾತ್ರೆಗೆ ಎಣ್ಣೆ, ತುಪ್ಪ ಹಾಕಿ ಬಿಸಿಯಾದ ಮೇಲೆ ಪಲಾವ್ ಎಲೆ, ಚಕ್ಕೆ, ಲವಂಗ, ಏಲಕ್ಕಿ, ಮರಾಠಿ ಮೊಗ್ಗು, ಕಲ್ಲು ಹೂ ಹಾಕಿ ಹುರಿದುಕೊಳ್ಳಿ. ಅದಕ್ಕೆ ಕತ್ತರಿಸಿದ ಈರುಳ್ಳಿ, ಹಸಿಮೆಣಸಿನಕಾಯಿ ಹಾಕಿ ಬಾಡಿಸಿ, ಶುಂಠಿ–ಬೆಳ್ಳುಳ್ಳಿ ಪೇಸ್ಟ್ ಹಾಕಿ ಹಸಿವಾಸನೆ ಹೋಗುವ ತನಕ ಹುರಿಯಿರಿ. ಖಾರದ ಪುಡಿ, ಅರಿಸಿನ ಪುಡಿ ಹಾಕಿ. ಟೊಮೊಟೊ, ಉಪ್ಪು ಹಾಕಿ ಗೊಜ್ಜಿನ ರೀತಿ ಆಗುವ ತನಕ ಹುರಿದುಕೊಳ್ಳಿ. ಇದಕ್ಕೆ ತೊಳೆದಿಟ್ಟಿರುವ ಚಿಕನ್ ತುಂಡುಗಳನ್ನು ಹಾಕಿ, ಕೊತ್ತಂಬರಿ ಸೊಪ್ಪು, ಪುದಿನ, ಮೊಸರು ಹಾಕಿ ಕಲೆಸಿಕೊಳ್ಳಿ. ನಂತರ ಕೊತ್ತಂಬರಿಪುಡಿ, ಗರಂ ಮಸಾಲೆ ಪುಡಿ ಹಾಕಿ ಮಿಶ್ರಣ ಮಾಡಿ, ಮುಚ್ಚಳ ಹಾಕಿ 15 ನಿಮಿಷ ಮಧ್ಯಮ ಉರಿಯಲ್ಲಿ ಬೇಯಿಸಿ. ಚಿಕನ್ ಅರೆ ಬೆಂದ ನಂತರ 3 ಲೋಟ ನೀರು ಹಾಕಿ 10 ನಿಮಿಷ ಕುದಿಸಿ. ಅದಕ್ಕೆ ತೊಳೆದ ಅಕ್ಕಿ ಹಾಕಿ, ನಿಂಬೆರಸ ಸೇರಿಸಿ 15 ನಿಮಿಷ ದೊಡ್ಡ ಉರಿಯಲ್ಲಿ ಮುಚ್ಚಳ ಮುಚ್ಚಿ ಬೇಯಿಸಿಕೊಳ್ಳಿ. ಮುಕ್ಕಾಲು ಭಾಗ ಬೆಂದ ನಂತರ ಮತ್ತೆ ಪಾತ್ರೆಗೆ ಮುಚ್ಚಳ ಮುಚ್ಚಿ ಯಾವುದಾದರೂ ತೂಕ ಇರುವ ವಸ್ತು ಇಟ್ಟು ಅತೀ ಕಡಿಮೆ ಉರಿಯಲ್ಲಿ 15
ನಿಮಿಷ ಧಮ್ ಕಟ್ಟಿ ಇಡಿ. ಈಗ ಬಲು ರುಚಿಯಾದ ಚಿಕನ್ ಬಿರಿಯಾನಿ ಸಿದ್ಧ.

ಚಿಕನ್ ಗ್ರೇವಿ

ಬೇಕಾಗುವ ಸಾಮಗ್ರಿಗಳು: ಚಿಕನ್ - ಅರ್ಧ ಕೆಜಿ, ಖಾರದಪುಡಿ - ಅರ್ಧ ಚಮಚ, ಅರಿಸಿನ ಪುಡಿ - ಅರ್ಧ ಟೀ ಚಮಚ, ಕೊತ್ತಂಬರಿ ಪುಡಿ - ಅರ್ಧ ಚಮಚ, ಬೆಳ್ಳುಳ್ಳಿ - 15 ಎಸಳು, ಶುಂಠಿ - 2 ಇಂಚು, ಈರುಳ್ಳಿ - 2, ಹಸಿರು ಮೆಣಸಿನಕಾಯಿ - 5,ಟೊಮೆಟೊ - ಚಿಕ್ಕದು 1, ಪುದೀನ - 6 ಎಲೆ, ಕೊತ್ತಂಬರಿ ಸೊಪ್ಪು - 1 ಹಿಡಿ, ನಿಂಬೆಹಣ್ಣು - 1/2, ಕರಿಬೇವು - ಸ್ವಲ್ಪ, ಚಕ್ಕೆ - 1 ತುಂಡು, ಲವಂಗ - 2, ಏಲಕ್ಕಿ - 1, ಸೋಂಪು - 1/4 ಟೀ ಚಮಚ, ಕರಿಮೆಣಸು - 1/2 ಚಮಚ, ರುಚಿಗೆ ತಕ್ಕಷ್ಟು ಉಪ್ಪು, ಅಡುಗೆ ಎಣ್ಣೆ.

ತಯಾರಿಸುವ ವಿಧಾನ: ಒಲೆ ಮೇಲೆ ಬಾಣಲೆ ಇಟ್ಟು 3 ಚಮಚ ಎಣ್ಣೆ ಹಾಕಿ ಬಿಸಿ ಮಾಡಿ. ಕತ್ತರಿಸಿದ ಈರುಳ್ಳಿ, ಬೆಳ್ಳುಳ್ಳಿ, ಹಸಿಮೆಣಸಿನಕಾಯಿ ಸೇರಿಸಿ, ಇದರ ಜೊತೆ ಚಕ್ಕೆ, ಲವಂಗ, ಏಲಕ್ಕಿ, ಸೋಂಪು, ಕರಿಮೆಣಸು ಹಾಕಿ ಚನ್ನಾಗಿ ಹುರಿದುಕೊಳ್ಳಿ. ಅರ್ಧ ಭಾಗ ಹುರಿದ ನಂತರ ಟೊಮೆಟೊ ಹಾಕಿ, ಟೊಮೆಟೊ ನೀರು ಬಿಡುವವರೆಗೂ ಹುರಿಯಿರಿ. ಹುರಿದ ಮಿಶ್ರಣ ಬದಿಗೆ ಇಡಿ. ಸ್ವಲ್ಪ ತಣ್ಣಗೆ ಆದ ಮೇಲೆ ಅದಕ್ಕೆ ಪುದಿನ, ಕೊತ್ತಂಬರಿ ಸೊಪ್ಪು, ಸ್ವಲ್ಪ ನೀರು ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ಈಗ ಅದೇ ಬಾಣಲೆಗೆ ತೊಳೆದ ಚಿಕನ್ ಹಾಕಿ, ಸ್ವಲ್ಪ ಕರಿಬೇವಿನ ಸೊಪ್ಪು, ಉಪ್ಪು ಹಾಕಿ 10 ನಿಮಿಷಚೆನ್ನಾಗಿ ಹುರಿದುಕೊಳ್ಳಿ. ಅರ್ಧ ಚಿಕನ್ ಬೆಂದ ನಂತರ ಖಾರದಪುಡಿ, ಅರಿಸಿನ ಪುಡಿ, ಕೊತ್ತಂಬರಿಪುಡಿ, ಸ್ವಲ್ಪ ಉಪ್ಪು ಹಾಕಿ ಹುರಿಯಿರಿ. 3 ನಿಮಿಷಗಳ ನಂತರ ರುಬ್ಬಿದ ಮಸಾಲೆ ಹಾಕಿಕೊಳ್ಳಿ, ಇದಕ್ಕೆ ಸ್ವಲ್ಪ ನೀರು ಹಾಕಿ ಮಿಶ್ರಣ ಮಾಡಿಕೊಳ್ಳಿ, 15 ನಿಮಿಷ ಮಧ್ಯಮ ಉರಿಯಲ್ಲಿ ಮುಚ್ಚಳ ಮುಚ್ಚಿ ಬೇಯಿಸಿಕೊಳ್ಳಿ. ಚಿಕನ್ ಬೆಂದ ನಂತರ ರುಚಿಯಾದ ಚಿಕನ್ ಗ್ರೇವಿ ಸವಿಯಲು ಸಿದ್ಧ.

ರೆಸ್ಟೋರೆಂಟ್ ಸ್ಟೈಲ್ ಚಿಕನ್ ಕಬಾಬ್

ಬೇಕಾಗುವ ಸಾಮಗ್ರಿಗಳು: ಚಿಕನ್ - ಅರ್ಧ ಕೆಜಿ, ಮೈದಾಹಿಟ್ಟು-3 ಚಮಚ, ಕಾರ್ನ್ ಫ್ಲೋರ್ - 2 ಚಮಚ, ಅಕ್ಕಿಹಿಟ್ಟು - 1 ಚಮಚ, ಮೊಟ್ಟೆ - 1, ಅಚ್ಚ ಖಾರದ ಪುಡಿ - 1 ಚಮಚ, ಕೊತ್ತಂಬರಿ ಪುಡಿ - ಅರ್ಧ ಚಮಚ, ಗರಂ ಮಸಾಲೆ ಪುಡಿ - ಅರ್ಧ ಚಮಚ, ಕರಿಮೆಣಸಿನ ಪುಡಿ- ಕಾಲು ಚಮಚ, ಅರಿಸಿನ - ಕಾಲು ಚಮಚ, ಜೀರಿಗೆ ಪುಡಿ - ಅರ್ಧ ಚಮಚ, ಕೆಂಪು ಫುಡ್ ಕಲರ್ - 1 ಚಿಟಿಕೆ, ಶುಂಠಿ–ಬೆಳ್ಳುಳ್ಳಿ ಪೇಸ್ಟ್ - 1 ಚಮಚ, ಒಂದು ನಿಂಬೆ ಹಣ್ಣಿನ ರಸ, ಅಡುಗೆ ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ: ಒಂದು ಪಾತ್ರೆಗೆ ಮೈದಾ ಹಿಟ್ಟು, ಕಾರ್ನ್ ಫ್ಲೋರ್, ಅಕ್ಕಿ ಹಿಟ್ಟು, ಮೊಟ್ಟೆ, ಖಾರದಪುಡಿ, ಕೊತ್ತಂಬರಿ ಪುಡಿ, ಗರಂ ಮಸಾಲೆ ಪುಡಿ, ಕರಿಮೆಣಸಿನ ಪುಡಿ, ಅರಿಸಿನ ಪುಡಿ, ಜೀರಿಗೆ ಪುಡಿ, ಕೆಂಪು ಫುಡ್ ಕಲರ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ, ಇದಕ್ಕೆ ಸ್ವಲ್ಪ ಉಪ್ಪು ಸೇರಿಸಿಕೊಳ್ಳಿ. ನಂತರ ಮೊಟ್ಟೆ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ನಿಂಬೆರಸವನ್ನು ಹಾಕಿ ಚೆನ್ನಾಗಿ ಗಟ್ಟಿಯಾದ ಹದಕ್ಕೆ ಕಲೆಸಿಕೊಳ್ಳಿ. ಇದಕ್ಕೆ ಚಿಕನ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಅರ್ಧ ಗಂಟೆ ಮುಚ್ಚಳ ಹಾಕಿ ಬದಿಗೆ ಇಡಿ. ಒಂದು ಬಾಣಲೆಗೆ ಎಣ್ಣೆ ಹಾಕಿ ಕಾಯಲು ಇಡಿ. ಈಗ ಮಿಶ್ರಣ ಮಾಡಿದ ಒಂದೊಂದೆ ಚಿಕನ್ ಎಣ್ಣೆಯಲ್ಲಿ ಹಾಕಿ, ಮಧ್ಯಮ ಉರಿಯಲ್ಲಿ ಬೇಯಿಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.