ಚಿಕನ್ ಲೆಗ್ಪೀಸ್ ಬಿರಿಯಾನಿ
ಬೇಕಾಗುವ ಸಾಮಗ್ರಿಗಳು: ಚಿಕನ್ ಲೆಗ್ಪೀಸ್ – 6, ಸೋನಾ ಮಸೂರಿ ಅಕ್ಕಿ – 1ಕೆ.ಜಿ., ಶುಂಠಿಪೇಸ್ಟ್ – 1ಚಮಚ, ಬೆಳ್ಳುಳ್ಳಿ ಪೇಸ್ಟ್ – 2ಚಮಚ, ಕೊತ್ತಂಬರಿಸೊಪ್ಪು – ಸ್ವಲ್ಪ, ಪುದೀನಸೊಪ್ಪು – ಸ್ವಲ್ಪ, ಕರಿಬೇವು 1ಕಡ್ಡಿ, ನಿಂಬೆಹಣ್ಣು – 1, ಹಸಿಮೆಣಸಿನಕಾಯಿ – 15, ಅರಿಸಿನಪುಡಿ – ಸ್ವಲ್ಪ, ಚಕ್ಕೆಪುಡಿ – 1/2ಚಮಚ, ಕಾಳುಮೆಣಸು(ಪೆಪ್ಪರ್) – 6, ಏಲಕ್ಕಿ – 2, ಲವಂಗ – 6, ಚಕ್ಕೆ – 3ಚಿಕ್ಕ ತುಂಡುಗಳು, ಈರುಳ್ಳಿ – 3, ಟೊಮೆಟೊ – 5, ಎಣ್ಣೆ, ತುಪ್ಪ (ಡಾಲ್ಡಾ), ಪಲಾವ್ ಎಲೆ – 2, ಸಾಸಿವೆ, ಉಪ್ಪು ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ಚೆನ್ನಾಗಿ ತೊಳೆದ ಚಿಕನ್ ಲೆಗ್ಪೀಸ್ಗಳನ್ನು ಸೀಳಿ ಖಾರದಪುಡಿ, ಉಪ್ಪು, ನಿಂಬೆರಸ ಹಾಕಿ ಕಲಸಿ 2 ಗಂಟೆ ರೆಫ್ರಿಜರೇಟರ್ನಲ್ಲಿಡಿ.ಈರುಳ್ಳಿ, ಟೊಮೆಟೊ, ಕೊತ್ತಂಬರಿ, ಪುದೀನಾ, ಹಸಿಮೆಣಸಿನಕಾಯಿಯನ್ನು ಕತ್ತರಿಸಿಟ್ಟುಕೊಳ್ಳಿ.ಕುಕ್ಕರ್ಗೆ ಎಣ್ಣೆ ಮತ್ತು ತುಪ್ಪ(ಡಾಲ್ಡಾ)ವನ್ನು ಸಮಪ್ರಮಾಣದಲ್ಲಿ ಹಾಕಿ ಕಾದ ನಂತರ ಸಾಸಿವೆ ಸಿಡಿಸಿ ಕಾಳುಮೆಣಸು (ಪೆಪ್ಪರ್), ಚಕ್ಕೆ, ಲವಂಗ, ಏಲಕ್ಕಿ, ಚಕ್ಕೆಪುಡಿ, ಅರಿಸಿನಪುಡಿ, ಪಲಾವ್ ಎಲೆಯನ್ನು ಹಾಕಿ ಸ್ವಲ್ಪ ಫ್ರೈ ಆದ ನಂತರ ಈರುಳ್ಳಿ, ಹಸಿಮೆಣಸಿನಕಾಯಿ, ಟೊಮೆಟೊ, ಕೊತ್ತಂಬರಿ, ಪುದೀನ – ಇಷ್ಟನ್ನು ಹಾಕಿ ಫ್ರೈ ಮಾಡಿ. ತದನಂತರ ತೊಳೆದ ಚಿಕನ್ ಲೆಗ್ಪೀಸ್ ಮತ್ತು ಉಪ್ಪನ್ನು ಸೇರಿಸಿ ಸ್ವಲ್ಪ ಸಮಯ ಬೇಯಿಸಿದ ತರುವಾಯ ಒಂದಕ್ಕೆ ಎರಡಕ್ಕಿಂತ ಸ್ವಲ್ಪ ಕಡಿಮೆ ನೀರನ್ನು ಹಾಕಿ, ತೊಳೆದ ಅಕ್ಕಿಯನ್ನು ಈ ಮಿಶ್ರಣಕ್ಕೆ ಸೇರಿಸಿ ರುಚಿ ನೋಡಿ ಕಡಿಮೆಯಿದ್ದನ್ನು ಸೇರಿಸಿ ಕುಕ್ಕರ್ ಮುಚ್ಚಳವನ್ನು ಮುಚ್ಚಿ.

ಚಿಕನ್ ಲಿವರ್ ಕಡಾಯಿ ಮಸಾಲೆ
ಬೇಕಾಗುವ ಸಾಮಗ್ರಿಗಳು: ಚಿಕನ್ ಲಿವರ್ – 1ಕೆ.ಜಿ., ಈರುಳ್ಳಿ – 3,ಟೊಮೆಟೊ – 3, ಕೊತ್ತಂಬರಿಸೊಪ್ಪು – ಸ್ವಲ್ಪ, ಪುದೀನಸೊಪ್ಪು – ಸ್ವಲ್ಪ, ಕ್ಯಾಪ್ಸಿಕಂ – 1, ಶುಂಠಿ–ಬೆಳ್ಳುಳ್ಳಿ ಪೇಸ್ಟ್ – 2ಚಮಚ, ದನಿಯಾಪುಡಿ – 2ಚಮಚ, ಖಾರದ ಪುಡಿ – 2ಚಮಚ, ಅರಿಸಿನಪುಡಿ – ಸ್ವಲ್ಪ, ಗರಂಮಸಾಲೆ – ಸ್ವಲ್ಪ, ಕಡಾಯಿ ಮಸಾಲೆಪುಡಿ – 1ಚಮಚ, ಎಣ್ಣೆ, ಕಸೂರಿಮೇಥಿ – 1ಚಮಚ, ಸಾಸಿವೆ, ಉಪ್ಪು ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ಕಡಾಯಿ ಮಸಾಲೆ ಪುಡಿ ಮಾಡಲು: ದನಿಯಾಬೀಜ – ಸ್ವಲ್ಪ, ಜೀರಿಗೆ – ಸ್ವಲ್ಪ, ಸೋಂಪುಕಾಳು – ಸ್ವಲ್ಪ, ಲವಂಗ – 2, ಮೆಣಸು – 10, ಏಲಕ್ಕಿ – 1, ಚಕ್ಕೆ – 1ಇಂಚು ಉದ್ದದ್ದು, ಮೊರಾಠಿ ಮೊಗ್ಗು – 1, ಬ್ಯಾಡಗಿ ಮೆಣಸಿನಕಾಯಿ – 4, ಒಣಮೆಣಸಿನಕಾಯಿ – 6 ಇಷ್ಟನ್ನು ಸಣ್ಣ ಉರಿಯಲ್ಲಿ ಹುರಿದು ಪುಡಿಮಾಡಿಟ್ಟುಕೊಳ್ಳಿ.

ಚೆನ್ನಾಗಿ ತೊಳೆದ ಚಿಕನ್ ಗಿಝರ್ಡ್-ಲಿವರ್, ಸ್ವಲ್ಪ ಅರಿಸಿನಪುಡಿ, ಖಾರದಪುಡಿ ಮತ್ತು ಉಪ್ಪನ್ನು ಬೆರೆಸಿ ಕುಕ್ಕರ್ನಲ್ಲಿ ಬೇಯಿಸಿಕೊಳ್ಳಿ. ಈರುಳ್ಳಿ, ಕ್ಯಾಪ್ಸಿಕಂ, ಕೊತ್ತಂಬರಿ ಮತ್ತು ಪುದೀನಸೊಪ್ಪನ್ನು ಕತ್ತರಿಸಿಟ್ಟುಕೊಳ್ಳಿ. ಟೊಮೆಟೊ ಬೇಯಿಸಿ ಪ್ಯೂರಿ ಮಾಡಿಟ್ಟುಕೊಳ್ಳಿ.ತೆರೆದ ಪಾತ್ರೆಗೆ ಎಣ್ಣೆ ಹಾಕಿ ಕಾದ ನಂತರ ಸಾಸಿವೆ ಸಿಡಿಸಿ ಈರುಳ್ಳಿ ಹಾಕಿ ಕಂದುಬಣ್ಣ ಬರುವ ತನಕ ಫ್ರೈ ಮಾಡಿ. ನಂತರ ಕ್ಯಾಪ್ಸಿಕಂ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಪುದೀನ, ಟೊಮೆಟೊ ಪ್ಯೂರಿ, ಉಪ್ಪು ಹಾಕಿ. ಫ್ರೈ ಆದ ನಂತರ ಕಡಾಯಿ ಮಸಾಲೆಪುಡಿ, ಗರಂ ಮಸಾಲೆ, ದನಿಯಾಪುಡಿ, ಖಾರದಪುಡಿ ಹಾಕಿ ಸ್ವಲ್ಪ ಸಮಯ ಬೇಯಿಸಿದ ನಂತರ ಬೇಯಿಸಿರುವ ಚಿಕನ್ ಗಿಝರ್ಡ್-ಲಿವರ್ನ್ನು ನೀರಿನ ಸಮೇತ ಹಾಕಿ ಚೆನ್ನಾಗಿ ಫ್ರೈ ಮಾಡಿದ ಮೇಲೆ ಕಸೂರಿ ಮೇಥಿ ಹಾಕಿ ಮುಚ್ಚಳ ಮುಚ್ಚಿ ಚೆನ್ನಾಗಿ ಬೇಯಿಸಿ ನಂತರ ಕೊತ್ತಂಬರಿಯನ್ನು ಉದುರಿಸಿ ಉಣಬಡಿಸಿ.

ಚಿಕನ್ ಗ್ರೇವಿ
ಬೇಕಾಗುವ ಸಾಮಗ್ರಿಗಳು: ಚಿಕನ್ – 1ಕೆ.ಜಿ., ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 3ಚಮಚ, ಕೊತ್ತಂಬರಿಸೊಪ್ಪು – ಸ್ವಲ್ಪ, ಪುದೀನಸೊಪ್ಪು – ಸ್ವಲ್ಪ, ಕರಿಬೇವು – 1ಕಡ್ಡಿ, ಬೆಳ್ಳುಳ್ಳಿ – 10ಎಸಳು, ದನಿಯಾಪುಡಿ – 1ಚಮಚ, ಖಾರದ ಪುಡಿ – 2ಚಮಚ, ಅರಿಸಿನಪುಡಿ – ಸ್ವಲ್ಪ, ಹಸಿಮೆಣಸಿನಕಾಯಿ – 5, ಕಾಳುಮೆಣಸು – 10, ಲವಂಗ – 5, ಚಕ್ಕೆ – 1ಇಂಚು ಉದ್ದದ್ದು, ಗಸಗಸೆ – ಸ್ವಲ್ಪ, ಈರುಳ್ಳಿ – 3, ಟೊಮೆಟೊ – 2, ಕಾಯಿ – 1/2ಹೋಳು, ಸಾಸಿವೆ, ಎಣ್ಣೆ, ಉಪ್ಪು ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ:ಈರುಳ್ಳಿ ಖಾರಕ್ಕೆ: ಈರುಳ್ಳಿ, ಕೊತ್ತಂಬರಿ, ಪುದೀನ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮತ್ತು ಸ್ವಲ್ಪ ನೀರು ಹಾಕಿ ರುಬ್ಬಿಟ್ಟುಕೊಳ್ಳಿ.

ಕಾಯಿಮಸಾಲೆಗೆ: ಕಾಯಿ, ಪೆಪ್ಪರ್, ಲವಂಗ, ಚಕ್ಕೆ, ಗಸೆಗಸೆಗಳಿಗೆ ಸ್ವಲ್ಪ ಎಣ್ಣೆ ಹಾಕಿ ಹುರಿದು ತಣ್ಣಗಾದ ನಂತರ ಸ್ವಲ್ಪ ನೀರು ಹಾಕಿ ರುಬ್ಬಿಟ್ಟುಕೊಳ್ಳಿ.

ಎಣ್ಣೆ ಹಾಕಿ ಕಾದ ನಂತರ ಸಾಸಿವೆಯನ್ನು ಸಿಡಿಸಿ ಈರುಳ್ಳಿ, ಜಜ್ಜಿದ ಬೆಳ್ಳುಳ್ಳಿ, ಕತ್ತರಿಸಿದ ಹಸಿಮೆಣಸಿನಕಾಯಿ ಮತ್ತು ಪುದೀನ ಹಾಕಿ ಕಂದುಬಣ್ಣ ಬರುವವರೆಗೆ ಫ್ರೈ ಮಾಡಿದ ಮೇಲೆ ಟೊಮೆಟೊ, ಅರಿಸಿನಪುಡಿ, ಚಿಕನ್ ಮತ್ತು ಉಪ್ಪನ್ನು ಬೆರೆಸಿದ ನಂತರ ಈರುಳ್ಳಿಖಾರದ ಮಿಶ್ರಣವನ್ನು ಹಾಕಿ. ಚಿಕನ್ ಅರ್ಧ ಬೇಯುವ ತನಕ ಬೇಯಿಸಿದ ಮೇಲೆ ಕಾಯಿ ಮಸಾಲೆ ಹಾಕಿ ಚೆನ್ನಾಗಿ ಬೇಯಿಸಿ. ನಂತರ ಧನಿಯಾ ಮತ್ತು ಖಾರದಪುಡಿ ಹಾಕಿ ಸ್ವಲ್ಪ ಬೇಯಿಸಿ. ಬೇಕೆಂದರೆ ಕೊತ್ತಂಬರಿಸೊಪ್ಪನ್ನು ಕತ್ತರಿಸಿ ಉದುರಿಸಿ.

ಚಿಕನ್ ಲೆಗ್ಪೀಸ್ ಕಬಾಬ್
ಬೇಕಾಗುವ ಸಾಮಗ್ರಿಗಳು: ಚಿಕನ್ ಲೆಗ್ಪೀಸ್ – 2, ಕಡಲೆಹಿಟ್ಟು – 3ಚಮಚ, ಗರಂಮಸಾಲೆ, ಕೆಂಪು ಖಾರದಪುಡಿ – 3ಚಮಚ, ಮೈದಾಹಿಟ್ಟು – 1ಚಮಚ, ಜೋಳದ ಹಿಟ್ಟು – 2ಚಮಚ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1ಚಮಚ, ಮೊಸರು – 1ಚಮಚ, ಕೋಳಿಮೊಟ್ಟೆ – 1, ಉಪ್ಪು – ರುಚಿಗೆ ತಕ್ಕಷ್ಟು, ಕರಿಯಲು ಎಣ್ಣೆ, ನಿಂಬೆಹಣ್ಣು – 1.

ತಯಾರಿಸುವವಿಧಾನ:ಕಡಲೆಹಿಟ್ಟು, ಮೈದಾಹಿಟ್ಟು, ಕೆಂಪು ಖಾರದಪುಡಿ, ಜೋಳದಹಿಟ್ಟು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಗರಂ ಮಸಾಲೆ, ಮೊಸರು, ಕೋಳಿಮೊಟ್ಟೆ, ಬೇಕೆಂದರೆ ಕೇಸರಿಬಣ್ಣ, ಉಪ್ಪು – ಇಷ್ಟನ್ನು ಹಾಕಿ ಕಲಸಿ ಚಿಕನ್ ಲೆಗ್ಪೀಸ್ಗಳನ್ನು ಮಧ್ಯದಲ್ಲಿ ಸೀಳಿ ಅದಕ್ಕೆ ಮಸಾಲೆ ಹಿಡಿಯುವ ರೀತಿ ಚೆನ್ನಾಗಿ ಕಲಸಿ ಅರ್ಧ ಗಂಟೆ ರೆಫ್ರಿಜರೇಟರ್ನಲ್ಲಿಡಿ. ಫ್ರೈ ಪ್ಯಾನ್ಗೆ ಸ್ವಲ್ಪ ಎಣ್ಣೆ ಹಾಕಿ ಎಲ್ಲಾ ಭಾಗಕ್ಕೂ ಹೋಗುವಂತೆ ಅಲ್ಲಾಡಿಸಿ ಚಿಕನ್ ಲೆಗ್ಪೀಸ್ಗಳನ್ನು ಹಾಕಿ ಸಣ್ಣ ಉರಿಯಲ್ಲಿ ಎಲ್ಲಾ ಮಗ್ಗಲುಗಳು ಬೇಯುವಂತೆ ತಿರುಗಿಸುತ್ತಾ ಬೇಯಿಸಿ. ಆರಿದ ಮೇಲೆ ನಿಂಬೆಹಣ್ಣಿನ ರಸವನ್ನು ಹಾಕಿ ತಿನ್ನಲು ಕೊಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.