ಚಿಕನ್ ಸ್ಟೀವ್

ಬೇಕಾಗುವ ಸಾಮಗ್ರಿಗಳು: ಆಲಿವ್ ಎಣ್ಣೆ – 2 ಚಮಚ, ಚಕ್ಕೆ – 3, ಕಾಳುಮೆಣಸು – 1 ಚಮಚ, ಬೆಳ್ಳುಳ್ಳಿ – 5 ಎಸಳು, ಈರುಳ್ಳಿ – 2 ಮಧ್ಯಮ ಗಾತ್ರದ್ದು, ಲವಂಗ – 4, ಶುಂಠಿ – ಒಂದು ಸಣ್ಣ ತುಂಡು, ಮೂಳೆ ರಹಿತ ಚಿಕನ್ ತುಂಡುಗಳು – 8 ರಿಂದ 10, ಕಾರ್ನ್ಫ್ಲೋರ್ – 2 ಚಮಚ, ಹಸಿಮೆಣಸು – 2 (ಹೆಚ್ಚಿದ್ದು), ಟೊಮೆಟೊ ಪೇಸ್ಟ್ – ಕಾಲು ಕಪ್, ಚಿಕನ್ ಸ್ಟಾಕ್ – ಹದಕ್ಕೆ ತಕ್ಕಂತೆ, ಆಲೂಗಡ್ಡೆ – 2 ಚಿಕ್ಕದ್ದು, ಬೀನ್ಸ್ – 10 ರಿಂದ 12, ಹೂಕೋಸು – ಸ್ವಲ್ಪ, ಬಟಾಣಿ – 50 ಗ್ರಾಂ, ಪುದಿನಾ – 4ರಿಂದ 5 ಎಲೆ

ತಯಾರಿಸುವ ವಿಧಾನ: ದಪ್ಪತಳದ ಪಾತ್ರೆಯಲ್ಲಿ ಆಲಿವ್ ಎಣ್ಣೆ ಹಾಕಿ ಬಿಸಿಮಾಡಿ. ಅದಕ್ಕೆ ಚಕ್ಕೆ, ಜಜ್ಜಿದ ಕಾಳುಮೆಣಸು ಹಾಗೂ ಲವಂಗ ಹಾಕಿ ಹುರಿಯಿರಿ. ಈರುಳ್ಳಿ ಸೇರಿಸಿ ಬಣ್ಣ ಬದಲಾಗುವವರೆಗೂ ಹುರಿಯಿರಿ. ಅದಕ್ಕೆ ಬೆಳ್ಳುಳ್ಳಿ, ಶುಂಠಿ ಸೇರಿಸಿ ಮಿಶ್ರಣ ಮಾಡಿ. ಆ ಮಿಶ್ರಣಕ್ಕೆ ಚಿಕನ್ ತುಂಡುಗಳನ್ನು ಸೇರಿಸಿ ಎಲ್ಲಾವನ್ನೂ ಮಿಶ್ರಣ ಮಾಡಿ ದೊಡ್ಡ ಉರಿಯಲ್ಲಿ 5 ನಿಮಿಷ ಬೇಯಿಸಿಕೊಂಡು ಕಾರ್ನ್ಫ್ಲೋರ್ ಸೇರಿಸಿ 5 ನಿಮಿಷಗಳ ಕಾಲ ಕೈಯಾಡಿಸಿ. ನಂತರ ಹಸಿಮೆಣಸು, ಟೊಮೆಟೊ ಪೇಸ್ಟ್, ಚಿಕನ್ ಸ್ಟಾಕ್ ಹಾಗೂ ಉಪ್ಪು ಸೇರಿಸಿ ಸಣ್ಣ ಉರಿಯಲ್ಲಿ 10 ನಿಮಿಷಗಳ ಕಾಲ ಕುದಿಸಿ. ನಂತರ ಮೇಲೆ ತಿಳಿಸಿದ ತರಕಾರಿಗಳನ್ನು ಕತ್ತರಿಸಿ ಹಾಕಿ ಈ ಎಲ್ಲವನ್ನೂ ಚಿಕನ್ ಹಾಗೂ ತರಕಾರಿ ಬೇಯುವವರೆಗೂ ಕುದಿಸಿ. ಇದನ್ನು ಅಪ್ಪಂ, ದೋಸೆ ಅಥವಾ ಅನ್ನದ ಜೊತೆಗೆ ತಿನ್ನಲು ಚೆನ್ನಾಗಿರುತ್ತದೆ.

ಚಿಕನ್ ಸಮೋಸಾ

ಬೇಕಾಗುವ ಸಾಮಗ್ರಿಗಳು: ಮೈದಾಹಿಟ್ಟು – 4 ಕಪ್, ಉಪ್ಪು – 1 ಟೀ ಚಮಚ, ಎಣ್ಣೆ – ಕರಿಯಲು, ನೀರು – ಹದಕ್ಕೆ ತಕ್ಕಂತೆ, ಈರುಳ್ಳಿ – 1 ಮಧ್ಯಮ ಗಾತ್ರದ್ದು, ಆಲೂಗಡ್ಡೆ – 1/2 ಕಪ್, ಬೆಳ್ಳುಳ್ಳಿ – 2 (ಚಿಕ್ಕದಾಗಿ ಕತ್ತರಿಸಿದ್ದು), ಶುಂಠಿ – ಸ್ವಲ್ಪ, ಜೀರಿಗೆ – ಅರ್ಧ ಚಮಚ, ಕೊತ್ತಂಬರಿ ಕಾಳು – ಅರ್ಧ ಚಮಚ, ಕೆಂಪುಮೆಣಸಿನ ಪುಡಿ – ಕಾಲು ಚಮಚ, ಚಿಕನ್ ತುಂಡು – ಮುಕ್ಕಾಲು ಚಮಚ, ಬಟಾಣಿ ಕಾಳು – ಅರ್ಧ ಚಮಚ, ಉಪ್ಪು – ರುಚಿಗೆ, ಗರಂ ಮಸಾಲೆ – 2 ಟೇಬಲ್ ಚಮಚ.

ತಯಾರಿಸುವ ವಿಧಾನ: ಬೌಲ್ನಲ್ಲಿ ಮೈದಾಹಿಟ್ಟು, ಉಪ್ಪು ಹಾಗೂ ಎಣ್ಣೆ ಸೇರಿಸಿ ಮಿಶ್ರಣ ಮಾಡಿ. ಅದಕ್ಕೆ ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಚಪಾತಿ ಹಿಟ್ಟಿನ ಹದಕ್ಕೆ ನೀಟಾಗಿ ಕಲೆಸಿ. ಈ ಹಿಟ್ಟನ್ನು ಅರ್ಧ ಗಂಟೆ ನೆನೆಸಿಡಿ.
ಇನ್ನೊಂದು ಪಾತ್ರೆಯಲ್ಲಿ ಮಧ್ಯಮ ಉರಿಯಲ್ಲಿ ಎಣ್ಣೆ ಬಿಸಿ ಮಾಡಿ ಅದಕ್ಕೆ ಈರುಳ್ಳಿ, ಆಲೂಗಡ್ಡೆ ಸೇರಿಸಿ 7ರಿಂದ 8 ನಿಮಿಷ ಬೇಯಿಸಿ. ಅದಕ್ಕೆ ಗರಂಮಸಾಲೆ, ಶುಂಠಿ, ಬೆಳ್ಳುಳ್ಳಿ, ಜೀರಿಗೆ, ಕೊತ್ತಂಬರಿ ಸೇರಿಸಿ 2 ನಿಮಿಷ ಬೇಯಿಸಿ. ಅದಕ್ಕೆ ಚಿಕನ್ ತುಂಡು ಸೇರಿಸಿ ಐದಾರು ನಿಮಿಷ ಬೇಯಿಸಿ. ಅದಕ್ಕೆ ಬೇಯಿಸಿಕೊಂಡ ಬಟಾಣಿ ಸೇರಿಸಿ ಮಿಶ್ರಣ ಮಾಡಿ ಸ್ವಲ್ಪ ಹೊತ್ತು ಬಿಟ್ಟು ಸ್ಟೌ ಆಫ್ ಮಾಡಿ.
ಮೊದಲೇ ಮಾಡಿಕೊಂಡ ಹಿಟ್ಟಿನಿಂದ ಚಿಕ್ಕ ಚಿಕ್ಕ ಚಪಾತಿ ಮಾಡಿಕೊಳ್ಳಿ. ಅದರ ಮಧ್ಯದಲ್ಲಿ ಚಿಕನ್ ಹಾಗೂ ಆಲೂಗಡ್ಡೆ ಹೂರಣ ಇಟ್ಟು ಸಮೋಸಾದ ಆಕಾರಕ್ಕೆ ಮಡಿಸಿ. ಅದನ್ನು ಎಣ್ಣೆಯಲ್ಲಿ ಕರಿಯಿರಿ. ಚಿಕನ್ ಸಮೋಸಾವನ್ನು ಗ್ರೀನ್ ಚಟ್ನಿ ಜೊತೆ ತಿನ್ನಲು ಚೆನ್ನಾಗಿರುತ್ತದೆ.

ಚಿಕನ್ ನೂಡಲ್ಸ್

ಬೇಕಾಗುವ ಸಾಮಗ್ರಿಗಳು: ಮೊಟ್ಟೆ – 3, ಚಿಕನ್ ತುಂಡು – 1 ಕಪ್, ಎಣ್ಣೆ – 2 ಚಮಚ, ಶುಂಠಿ–ಬೆಳ್ಳುಳ್ಳಿ ಪೇಸ್ಟ್ – 1 ಚಮಚ, ಹಸಿಮೆಣಸು – 2 ಚ(ಚಿಕ್ಕದಾಗಿ ಹೆಚ್ಚಿದ್ದು), ಈರುಳ್ಳಿ – 1 ಚಮಚ, ಕ್ಯಾರೆಟ್ – 1, ದೊಣ್ಣೆ ಮೆಣಸು – 1, ಎಲೆಕೋಸು – 1 ಕಪ್, ನೂಡಲ್ಸ್ – 200 ಗ್ರಾಂ, ಉಪ್ಪು – ರುಚಿಗೆ, ಸೋಯಾ ಸಾಸ್ – 2 ಚಮಚ, ವಿನೆಗರ್ – 1 ಚಮಚ, ಕಾಳಮೆಣಸಿನ ಪುಡಿ – 1 ಚಮಚ,

ತಯಾರಿಸುವ ವಿಧಾನ: ಪಾತ್ರೆಯಲ್ಲಿ ನೀರು, ಉಪ್ಪು ಹಾಗೂ ಒಂದು ಚಮಚ ಎಣ್ಣೆ ಹಾಕಿ ಚೆನ್ನಾಗಿ ಕುದಿಸಿ. ಅದಕ್ಕೆ ನೂಡಲ್ ಹಾಕಿ ಬೇಯಿಸಿ. ನಂತರ ತಣ್ಣೀರಿನಲ್ಲಿ ಸೋಸಿ ಬದಿಗಿಡಿ. ಮತ್ತೊಂದು ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿ ಅದಕ್ಕೆ ಮೊಟ್ಟೆ ಒಡೆದು ಹಾಕಿ ಉಪ್ಪು ಹಾಗೂ ಕಾಳುಮೆಣಸು ಸೇರಿಸಿ ಸ್ಕ್ಯ್ರಾಂಬಲ್ ಮಾಡಿಕೊಂಡು ಬದಿಗಿರಿಸಿ. ಅದೇ ಪಾತ್ರೆಗೆ ಚಿಕನ್ ತುಂಡು, ಶುಂಠಿ–ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಮಾಡಿ, ನಂತರ ಕ್ಯಾರೆಟ್, ಕ್ಯಾಬೇಜ್, ಈರುಳ್ಳಿ, ದೊಣ್ಣೆಮೆಣಸು ಹಾಗೂ ಉಪ್ಪು ಸೇರಿಸಿ ಮಿಶ್ರಣ ಮಾಡಿ. ಅದಕ್ಕೆ ಬೇಯಿಸಿಕೊಂಡ ನೂಡಲ್ಸ್ ಹಾಕಿ. ನಂತರ ಸಾಸ್, ವಿನೆಗರ್ ಸೇರಿಸಿ ಈ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ದೊಡ್ಡ ಉರಿಯಲ್ಲಿ 8 ನಿಮಿಷಗಳ ಕಾಲ ಬೇಯಿಸಿ. ನಂತರ ಸ್ಕ್ಯ್ರಾಂಬಲ್ ಮಾಡಿದ ಮೊಟ್ಟೆ ಸೇರಿಸಿ. ಕಾಳುಮೆಣಸಿನ ಪುಡಿ ಚುಮುಕಿಸಿ ಮಿಶ್ರಣ ಮಾಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.