ಬೇಸಿಗೆಯಲ್ಲಿ ದೇಹದ ಉಷ್ಣತೆ ಹತೋಟಿಯಲ್ಲಿಡಲು ಮೆಂತ್ಯೆ ಕಾಳು ಬಹುಪಯೋಗಿ. ಚರ್ಮದ ಆರೋಗ್ಯ, ತೂಕ ಇಳಿಸಿಕೊಳ್ಳಲು, ಸಕ್ಕರೆ ಕಾಯಿಲೆ ಹತೋಟಿಯಲ್ಲಿಡಲು, ಎದೆ ಹಾಲು ಹೆಚ್ಚಿಸಿಕೊಳ್ಳಲು, ಋತುಚಕ್ರದ ಸಮಯದ ಹೊಟ್ಟೆನೋವು, ಬೆನ್ನುನೋವು, ಅಜೀರ್ಣ ಸೇರಿದಂತೆ ಇನ್ನೂ ಅನೇಕ ಆರೋಗ್ಯ ಸಮಸ್ಯೆಗಳಿಗೆ ತಕ್ಕ ಮಟ್ಟಿಗೆ ಪರಿಹಾರ ನೀಡುತ್ತದೆ.

ಮೆಂತ್ಯೆಕಾಳನ್ನು ನೆನೆಸಿ ನುಣ್ಣಗೆ ರುಬ್ಬಿ ತಲೆಗೆ ಹಚ್ಚಿಕೊಳ್ಳುವುದರಿಂದ ತಲೆಹೊಟ್ಟು ನಿವಾರಣೆ ಆಗುವುದರ ಜೊತೆಗೆ ದೇಹಕ್ಕೆ ತಂಪು ನೀಡುತ್ತದೆ.

ಅಜೀರ್ಣವಾಗಿದ್ದರೆ, ಒಂದು ಚಮಚ ಮೆಂತ್ಯೆಯನ್ನು ಮಜ್ಜಿಗೆಯೊಂದಿಗೆ ಬೆರೆಸಿ ಕುಡಿದರೆ ಅಜೀರ್ಣ ಶಮನವಾಗುತ್ತದೆ.

ಅದೇ ರೀತಿ ಒಂದು ಚಮಚ ಮೆಂತ್ಯೆಯನ್ನು ರಾತ್ರಿ ನೆನೆಸಿಟ್ಟು ಬೆಳಿಗ್ಗೆ ಅದರ ನೀರನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಸಕ್ಕರೆ ಕಾಯಿಲೆ ನಿಯಂತ್ರಣದಲ್ಲಿರುತ್ತದೆ. ಗ್ಯಾಸ್ಟ್ರಿಕ್ ಸಮಸ್ಯೆ ದೂರಾಗುತ್ತದೆ. ನೆನೆಸಿದ ಮೆಂತ್ಯೆಯನ್ನು ಸಹ ಸೇವಿಸಬಹುದು. ಇಂತಹ ಬಹುಉಪಕಾರಿ ಮೆಂತ್ಯೆಯಿಂದ ಮಾಡಬಹುದಾದ ಕೆಲ ರೆಸಿಪಿಗಳನ್ನು ಇಲ್ಲಿ ನೀಡಲಾಗಿದೆ.

ರೆಸಿಪಿಗಳು

* ಮೆಂತ್ಯೆ ಕಾಳಿನ ತಂಬುಳಿ: 2 ಚಮಚ ಮೆಂತ್ಯೆ ಕಾಳನ್ನು ಕೆಂಬಣ್ಣ ಬರುವವರೆಗೆ ಹುರಿದು, ಅದು ತಣಿದ ಮೇಲೆ ಒಣಮೆಣಸು, ಕಾಯಿಯೊಂದಿಗೆ ನುಣ್ಣಗೆ ರುಬ್ಬಿ, ರುಚಿಗೆ ತಕ್ಕಷ್ಟು ಉಪ್ಪಿನೊಂದಿಗೆ ಮಜ್ಜಿಗೆ/ ಮೊಸರು ಬೆರೆಸಿ, ಸಾಸಿವೆ, ಜೀರಿಗೆ, ಒಣಮೆಣಸಿನೊಂದಿಗೆ ಒಗ್ಗರಣೆ ಕೊಟ್ಟರೆ ತಂಬುಳಿ ಸಿದ್ಧ. ಇದೇ ರೀತಿ 2 ಚಮಚ ನೆನೆಸಿದ ಮೆಂತ್ಯೆ ಕಾಳಿನೊಂದಿಗೆ ಉಪ್ಪು, ಹಸಿಮೆಣಸು, ಕಾಯಿ, ಬೆಳ್ಳುಳ್ಳಿ ಸೇರಿಸಿ ಹುಳಿ ಮಜ್ಜಿಗೆ/ ಮಜ್ಜಿಗೆ ಬೆರೆಸಿ ನುಣ್ಣಗೆ ರುಬ್ಬಿ, ನಂತರ ಹದಕ್ಕೆ ತಕ್ಕಷ್ಟು ಮಜ್ಜಿಗೆ ಬೆರೆಸಬೇಕು. ನಂತರ 1 ಒಂದು ಚಮಚ ಎಣ್ಣೆಗೆ ಸಾಸಿವೆ, ಕರಿಬೇವಿನ ಒಗ್ಗರಣೆ ಕೊಟ್ಟರೆ ಹಸಿ ತಂಬುಳಿ ಸಿದ್ಧ.

* ಮೆಂತ್ಯೆ ಕೋಸಂಬರಿ: ಒಂದು ಮುಷ್ಠಿ ಮೆಂತ್ಯೆ ಕಾಳನ್ನು ಒಂದು ದಿನ ಮುಂಚಿತವಾಗಿ ನೆನೆಸಿ, ಮೊಳಕೆ ಬರಸಿಕೊಂಡು ಅದಕ್ಕೆ ಕಾಯಿತುರಿ, ಹಸಿಮೆಣಸು (ಅಗತ್ಯವಿದ್ದರೆ), ರುಚಿಗೆ ತಕ್ಕಷ್ಟು ಉಪ್ಪು, ನಿಂಬೆಹಣ್ಣು, ಕೊತ್ತಂಬರಿ ಸೊಪ್ಪು ಬೆರೆಸಬೇಕು. ಇದಕ್ಕೆ ಸಾಸಿವೆ, ಒಣಮೆಣಸು, ಇಂಗು, ಕರಿಬೇವು ಸೇರಿಸಿ ಒಗ್ಗರಣೆ ಕೊಟ್ಟು ಕೋಸಂಬರಿ ಸಿದ್ಧ ಮಾಡಿಕೊಳ್ಳಬಹುದು. ಇದಕ್ಕೆ ಮೊಳಕೆ ಬರಿಸಿದ ಹೆಸರುಕಾಳು, ಸೌತೆಕಾಯಿ, ತುರಿದ ಕ್ಯಾರೆಟ್ ಅನ್ನು ಬೇಕಿದ್ದರೂ ಬೆರೆಸಿಕೊಳ್ಳಬಹುದು. ನಿಂಬೆ ಹಣ್ಣಿನ ಬದಲಿಗೆ ತುರಿದ ಮಾವಿನ ಕಾಯಿಯನ್ನೂ ಬಳಸಬಹುದು.

* ಮೆಂತ್ಯೆ ಗೊಜ್ಜು: ಒಣ ಬಾಣಲಿಗೆ 2 ಚಮಚ ಎಳ್ಳು, ಒಂದು ಚಮಚ ಜೀರಿಗೆ, ಕಾಲು ಬಟ್ಟಲು ಒಣ ಕೊಬ್ಬರಿ, 5–6 ಒಣಮೆಣಸು, ಒಂದು ಚಮಚ ದನಿಯಾವನ್ನು ಹುರಿದುಕೊಳ್ಳಬೇಕು. ಇದು ತಣಿದ ಮೇಲೆ ಎಲ್ಲವನ್ನೂ ಬೆರೆಸಿ ರುಬ್ಬಿಕೊಳ್ಳಬೇಕು. ನಂತರ ಬಾಣಲಿಗೆ 2ಚಮಚ ಎಣ್ಣೆ ಹಾಕಿಕೊಂಡು ಅದಕ್ಕೆ ಮೊಳಕೆ ಬರಿಸಿದ ಮೆಂತ್ಯೆ ಕಾಳನ್ನು ಹಾಕಿ ಸಾಧಾರಣ ಉರಿಯಲ್ಲಿ ಸ್ವಲ್ಪ ಹೊತ್ತು ಹುರಿದುಕೊಂಡು ಅದನ್ನು ಒಂದು ಬಟ್ಟಲಿನಲ್ಲಿ ತೆಗೆದಿಟ್ಟುಕೊಳ್ಳಿ. ನಂತರ ಅದೇ ಬಾಣಲಿಗೆ 2–3 ಚಮಚ ಎಣ್ಣೆಗೆ ಸಾಸಿವೆ, ಜೀರಿಗೆ, ಸ್ವಲ್ಪ ಇಂಗು, ಕರಿಬೇವು ಹಾಕಿ. ನಂತರ ಇದಕ್ಕೆ ಸಣ್ಣ ಕತ್ತರಿಸಿದ 1 ಈರುಳ್ಳಿ ಹಾಕು ಅರಿಶಿನ ಹಾಕಿ ಸ್ವಲ್ಪ ಹುರಿದುಕೊಂಡು ಅದಕ್ಕೆ ಹುರಿದಿಟ್ಟುಕೊಂಡಿದ್ದ ಮೆಂತ್ಯೆ ಕಾಳನ್ನು ಹಾಕಿ, ಅದಕ್ಕೆ ಉಪ್ಪು, 2 ಚಮಚದಷ್ಟು ಬೆಲ್ಲ, ನಿಂಬೆಹಣ್ಣಿನಗಾತ್ರದ ಹುಣಸೆಹಣ್ಣಿನ ರಸ ಬೆರೆಸಿ ಸ್ವಲ್ವ ಹುರಿದುಕೊಂಡ ನಂತರ 1 ಕಪ್ ನೀರು ಬೆರೆಸಿ ಕಾಳು ಮೆತ್ತಗೆ ಬೇಯಿಸಿಕೊಳ್ಳಿ. ನಂತರ ಇದಕ್ಕೆ ಮಿಕ್ಸಿ ಮಾಡಿಟ್ಟುಕೊಂಡ ಮಸಾಲವನ್ನು ಬೆರೆಸಿ, ಅಗತ್ಯಕ್ಕೆ ತಕ್ಕಷ್ಟು ನೀರು ಬೆರೆಸಿ ಚೆನ್ನಾಗಿ ಕುದಿಸಿದರೆ ಗೊಜ್ಜು ಸಿದ್ಧ. ಮುದ್ದೆ, ಚಪಾತಿ, ರೊಟ್ಟಿ, ಅನ್ನದೊಂದಿಗೆ ಸವಿಯಬಹುದು.

* ಮೆಂತ್ಯೆ ಮಾವಿನಕಾಯಿ ಚಟ್ನಿ: ಸಣ್ಣ ಚಮಚ ಮೆಂತ್ಯೆ, ಒಂದು ಮಾವಿನ ಕಾಯಿ, ಒಣಮೆಣಸು (ಬ್ಯಾಡಗಿ ಮತ್ತು ಗುಂಟೂರು) 8–9 ಜೊತೆ ಒಂದು ಸಣ್ಣ ಬಟ್ಟಲು ಕಾಯಿ ತುರಿಯನ್ನು ಹುರಿದು ರುಚಿಗೆ ತಕ್ಕಷ್ಟು ಉಪ್ಪು, ಚೂರು ಬೆಲ್ಲದೊಂದಿಗೆ ನುಣ್ಣಗೆ ರುಬ್ಬಿ, ಅದಕ್ಕೆ ಸಾಸಿವೆ ಕರಿಬೇವಿನ ಒಗ್ಗರಣೆ ಕೊಟ್ಟರೆ ಚಟ್ನಿ ಸಿದ್ಧ.

* ಮೆಂತ್ಯೆ ಲೇಹ್ಯ: ರಾತ್ರಿ ನೆನೆಸಿದ ಒಂದು ಬಟ್ಟಲು ಮೆಂತ್ಯೆಯನ್ನು ಬೆಳಗ್ಗೆ ನುಣ್ಣಗೆ ರುಬ್ಬಬೇಕು. ಬಾಣಲಿಗೆ ತುಪ್ಪ ಹಾಕಿ ಅದಕ್ಕೆ ರುಬ್ಬಿದ ಮೆಂತ್ಯೆ ಹಾಕಬೇಕು. ಇದಕ್ಕೆ ರುಚಿಗೆ ತಕ್ಕಷ್ಟು ಬೆಲ್ಲದ ನೀರನ್ನು ಬೆರೆಸಿ ನೀರು ಇಂಗುವವರೆಗೂ ಸ್ವಲ್ಪ ಸ್ವಲ್ಪ ತುಪ್ಪ ಬೆರೆಸುತ್ತಾ ಮಗಚುತ್ತಾ ಇರಬೇಕು. ಇದಕ್ಕೆ 1 ಚಮಚ ಗಸೆಗಸೆ ಪುಡಿ ಬೆರೆಸಬಹುದು. ಬಾಣಲೆ ತಳ ಬಿಡಲು ಆರಂಭಿಸಿದಾಗ ಲೇಹ್ಯ ಸಿದ್ಧ. ಬಾಣಂತಿಗೆ, ಋತುಮತಿಯಾದ ಬಾಲಕಿಯರಿಗೆ ಇದು ಹೇಳಿಮಾಡಿಸಿದ ದಿವ್ಯೌಷಧಿ.

* ಮೆಂತ್ಯೆ ಹಿಟ್ಟು/ ಮುದ್ದೆ: 1 ಕೆಜಿ ಊಟದ ಅಕ್ಕಿ/ ದೋಸೆ ಅಕ್ಕಿ, ಅರ್ಧ ಕೆ.ಜಿ ಗೋಧಿ, ಕಾಲು ಕೆ.ಜಿ. ಮೆಂತ್ಯೆ ಹಾಗೂ ಉದ್ದಿನ ಕಾಳು ತೆಗೆದುಕೊಂಡು, ಒಂದೊಂದನ್ನಾಗಿ ಸಣ್ಣ ಉರಿಯಲ್ಲಿ ಕೆಂಪಗೆ ಆಗುವವರೆಗೆ ಹುರಿಯಬೇಕು. ಇದು ತಣಿದ ಮೇಲೆ ನುಣ್ಣಗೆ ಹಿಟ್ಟು ಮಾಡಿಕೊಳ್ಳಬೇಕು ಅಥವಾ ಮಿಲ್ನಲ್ಲೂ ಹಿಟ್ಟು ಮಾಡಿಕೊಳ್ಳಬಹುದು. ರಾಗಿ ಮುದ್ದೆ ಮಾದರಿಯಲ್ಲೇ ಇದನ್ನೂ ಮುದ್ದೆ ಮಾಡುವುದು. 2 ಮುದ್ದೆ ಮಾಡಲು, ದೊಡ್ಡ ಲೋಟದಲ್ಲಿ ಒಂದು ಕಾಲು ಲೋಟ ನೀರಿಗೆ ಅರ್ಧ ಚಮಚ ಹಿಟ್ಟನ್ನು ನೀರಿಗೆ ಕಲಿಸಿ ಕುದಿಯಲು ಇಡಬೇಕು. ಇದಕ್ಕೆ ರುಚಿಗೆ ತಕ್ಕಷ್ಟು ಬೆಲ್ಲ ಬೆರೆಸಿಕೊಳ್ಳಿ. ಬೆಲ್ಲ ಚೆನ್ನಾಗಿ ಕರಗಬೇಕು. ನೀರು ಕುದಿ ಬಂದ ಮೇಲೆ ಒಂದು ಚಮಚ ತುಪ್ಪ ಬೆರೆಸಿ, ನಂತರ ನೀರಿನ ಅಳತೆಯ ಲೋಟದಲ್ಲೇ ಮುಕ್ಕಾಲು ಲೋಟ ಹಿಟ್ಟನ್ನು ನೀರಿಗೆ ಬೆರೆಸಿ ಕುದಿಯಲು ಬಿಡಬೇಕು. ಸ್ವಲ್ಪ ಸ್ವಲ್ಪ ಮೆಲ್ಲಗೆ ಹಿಟ್ಟನ್ನು ನೀರಿನಲ್ಲಿ ಮಿಕ್ಸ್ ಮಾಡುತ್ತಿರಬೇಕು. ಇದು ಮುದ್ದೆ ಹದ ಬಂದ ಮೇಲೆ ಉಂಡೆ ಕಟ್ಟಿ, ತುಪ್ಪದ ಜೊತೆ ಸೇವಿಸಬಹುದು. ಈ ಮೆಂತ್ಯೆ ಹಿಟ್ಟಿನಲ್ಲಿ ಗೊಜ್ಜು ಮಾಡಬಹುದು ಹಾಗೂ ಬಿಸಿ ಅನ್ನಕ್ಕೆ ತುಪ್ಪದ ಜೊತೆ ಮೆಂತ್ಯೆಹಿಟ್ಟನ್ನು ಕಲಸಿಕೊಂಡು ಸೇವಿಸಬಹುದು.

* ಮೆಂತ್ಯೆ ಬೆಲ್ಲ ನೀರು: ಬೇಸಿಗೆಗೆ ಹೇಳಿ ಮಾಡಿಸಿದ ಜ್ಯೂಸ್ ಇದು. ಸುಮಾರು ಒಂದೆರಡು ಗಂಟೆ ನೆನೆಸಿದ ಮೆಂತ್ಯೆಯನ್ನು ನುಣ್ಣಗೆ ರುಬ್ಬಬೇಕು. ಇದಕ್ಕೆ ಬೆಲ್ಲ ಬೆರೆಸಿ, ಅಗತ್ಯಕ್ಕೆ ತಕ್ಕಷ್ಟು ನೀರು ಬೆರೆಸಿ ಕುಡಿಯಬಹುದು. ಇದು ದೇಹಕ್ಕೆ ತಂಪು. ಇದನ್ನು ಮಾಡಿದ ಕೂಡಲೇ ಕುಡಿಬೇಕು. ರುಬ್ಬಿದಾಗ ಗಟ್ಟಿ ಇರುತ್ತದೆ. ನೀರು ಬೆರೆಸಿ ಮೇಲೆ ಕೆಳಗೆ ಎತ್ತಿಹಿಡಿದಾಗ ನೀರಾಗುತ್ತದೆ. ಸ್ವಲ್ಪ ಹೊತ್ತು ಹಾಗೇ ಇಟ್ಟರೆ ಮತ್ತೆ ಗಟ್ಟಿ ಆಗುತ್ತದೆ. ಹಾಗಾಗಿ ತಕ್ಷಣ ಕುಡಿಯುವುದು ಸೂಕ್ತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.