ಆರೋಗ್ಯ ಚೆನ್ನಾಗಿರಲು ಆಹಾರದ ಆಯ್ಕೆ ಸಮರ್ಪಕವಾಗಿರಬೇಕು. ಇದು ಒಂದು ದಿನದ ಮಾತಲ್ಲ. ನಿತ್ಯವೂ ತಾಜಾ ಆಹಾರವನ್ನು ಸೇವಿಸಬೇಕು. ಸಕ್ಕರೆ, ಅನಾರೋಗ್ಯಕರ ಕೊಬ್ಬಿನಿಂದ ತುಂಬಿರುವ ಸಂಸ್ಕರಿತ ಆಹಾರ ಪದಾರ್ಥಗಳಿಂದ ದೂರವಿರಬೇಕು. ಇವುಗಳಿಗೆ ಬದಲಾಗಿ ಧಾನ್ಯಗಳು, ಪ್ರೊಟೀನ್ಗಳು, ಅವಕಾಡೊಗಳಲ್ಲಿ ಇರುವ ಉತ್ತಮ ಕೊಬ್ಬಿನಾಂಶವನ್ನು ಸೇವಿಸುವುದರಿಂದ ದೇಹವನ್ನು ಸುಸ್ಥಿತಿಯಲ್ಲಿಡಬಹುದು. ತೂಕ ನಿರ್ವಹಣೆ ಮಾತ್ರವಲ್ಲದೇ ಅನಾರೋಗ್ಯ ಸಮಸ್ಯೆಗಳಿಗೂ ಸಮತೋಲಿತ ಆಹಾರ ಕಡಿವಾಣ ಹಾಕುತ್ತದೆ.

ನಿದ್ರೆಯೂ ಜೊತೆಗಿರಲಿ

ನಿದ್ರೆ ಸರಿಯಾಗಿದ್ದರೆ ಆರೋಗ್ಯವು ಸರಿಯಾಗಿರುತ್ತದೆ. ನಿಗದಿತ ಸಮಯದಲ್ಲಿ ಗಾಢ ನಿದ್ರೆಯನ್ನು ಮಾಡಬೇಕು. ಉತ್ತಮ ನಿದ್ರೆಗೆ ಅಗತ್ಯವಿರುವ ವಾತಾವರಣವನ್ನು ಸೃಷ್ಟಿಸಿಕೊಳ್ಳಬೇಕು. ನಿದ್ರೆಗೆ ಜಾರುವ ಮುನ್ನ ಕೆಫಿನ್ಗಳ ಸೇವನೆ, ಮೊಬೈಲ್, ಕಂಪ್ಯೂಟರ್ ಬಳಕೆಗೆ ಮಿತಿ ಹಾಕಿಕೊಳ್ಳಬೇಕು. ನಿದ್ರೆಯ ಗುಣಮಟ್ಟ ಹೆಚ್ಚಿಸಲು ಉತ್ತಮ ಅಭ್ಯಾಸಗಳನ್ನು ಕೈಗೊಳ್ಳಬೇಕು. ಅವುಗಳೆಂದರೆ ಮಲಗುವ ಮುನ್ನ ಸಂಗೀತವನ್ನು ಆಲಿಸಬೇಕು. ಸಾಕಷ್ಟು ನಿದ್ರೆಯನ್ನು ಮಾಡುವುದರಿಂದ ಭಾವನಾತ್ಮಕವಾಗಿ ಮತ್ತು ದೈಹಿಕವಾಗಿ ಆರೋಗ್ಯ ಸುಧಾರಿಸಲಿದೆ. ಅಲ್ಲದೆ ಸ್ಥೂಲಕಾಯ ಮತ್ತು ಹೃದ್ರೋಗದಂತಹ ದೀರ್ಘಕಾಲದ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಲು ನೆರವಾಗಲಿದೆ.

ದೈಹಿಕವಾಗಿ ಸಕ್ರಿಯರಾಗಿರಿ

ನಿಯಮಿತವಾಗಿ ವ್ಯಾಯಾಮ ಮಾಡುವುದನ್ನು ರೂಢಿಸಿಕೊಳ್ಳಿ. ನಿತ್ಯ ಕನಿಷ್ಠ 30 ನಿಮಿಷಗಳ ಕಾಲ ನಡೆಯುವುದು, ಈಜು ಅಥವಾ ಯೋಗದಂಥ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಇದರಿಂದ ಹೃದಯರಕ್ತನಾಳದ ಆರೋಗ್ಯ, ತೂಕ ನಿರ್ವಹಣೆ ಮತ್ತು ಋತುಸಂಬಂಧ ಸಮಸ್ಯೆಗಳು ನಿವಾರಣೆಯಾಗಲಿವೆ.

ವರ್ಷಕ್ಕೊಮ್ಮೆ ಆರೋಗ್ಯ ತಪಾಸಣೆ ವರ್ಷಕ್ಕೊಮ್ಮೆ ಆರೋಗ್ಯ ತಪಾಸಣೆ ಮಾಡಿಸುವುದನ್ನು ಕಡ್ಡಾಯ ಮಾಡಿಕೊಳ್ಳಿ. ಕೊಬ್ಬು, ರಕ್ತದೊತ್ತಡ, ಮಧುಮೇಹ, ಥೈರಾಯ್ಡ್, ಮೆಮೊಗ್ರಾಮ್ ಒಳಗೊಂಡಂತೆ ನಿಯಮಿತ ಆರೋಗ್ಯ ತಪಾಸಣೆ ಇರಲಿ. ಈ ಮೂಲಕ ಸಂಭಾವ್ಯ ಆರೋಗ್ಯ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಲು ಸಾಧ್ಯವಾಗುತ್ತದೆ.

ಒತ್ತಡ ನಿರ್ವಹಣೆ

ದೀರ್ಘಕಾಲದ ಒತ್ತಡವು ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಹೀಗಾಗಿ ನಿಯಮಿತ ವಿಶ್ರಾಂತಿ ಜತೆಗೆ ಸ್ವಯಂ-ಆರೈಕೆಗೆ ಸಮಯ ಮೀಸಲಿಡಬೇಕು. ಅಗತ್ಯ ವ್ಯಾಯಾಮ, ಸೃಜನಾತ್ಮಕ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಒತ್ತಡವನ್ನು ನಿಯಂತ್ರಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.