ಮೊಬೈಲ್ ಕ್ಲಿನಿಕ್ ಅನ್ನು ತಾವೆಲ್ಲರೂ ನೋಡಿರುತ್ತೀರಿ. ಒಂದಷ್ಟು ಜನ ಅದರ ಸೇವೆಗಳನ್ನೂ ಪಡೆದುಕೊಂಡಿರುತ್ತೀರಿ. ಇದೊಂದು ಮೂಲಭೂತ ಆರೋಗ್ಯಸೇವೆಗಳಿಂದ ವಂಚಿತರಾದ ಗ್ರಾಮೀಣ ಜನರಿಗೆ ತುರ್ತು ವೈದ್ಯಕೀಯ ಸಹಾಯವನ್ನು ನೀಡುವಂತಹ ವಿಶೇಷವಾಗಿ ವಿನ್ಯಾಸಗೊಳಿಸುವ ಸಂಚಾರಿ ತುರ್ತು ವೈದ್ಯಕೀಯ ವ್ಯವಸ್ಥೆ. ತುರ್ತು ಸಂದರ್ಭಗಳಲ್ಲಿ, ಅವಶ್ಯಕವಾದ ಪ್ರಥಮ ಚಿಕಿತ್ಸೆ, ಮಕ್ಕಳ ನಿಗಾ, ವೃದ್ದರ ಶುಶ್ರೂಷೆ, ನಡವಳಿಕೆಗೆ ಸಂಬಂಧಿಸಿದ ಆರೋಗ್ಯ ಸೇವೆಗಳು. ಹೀಗೆ ಸಾಕಷ್ಟು ಸೇವೆಗಳನ್ನು ಒದಗಿಸುತ್ತವೆ ಈ ಮೊಬೈಲ್ ಕ್ಲಿನಿಕ್ಕುಗಳು. ಎಂತಹುದೇ ರಸ್ತೆಮಾರ್ಗಗಳಿದ್ದರೂ ಅದನ್ನು ದಾಟಿಹೋಗಿ ಅಪಾಯದಲ್ಲಿರುವವರಿಗೆ ಚಿಕಿತ್ಸೆ ನೀಡಲೆಂದೇ ವಿಶೇಷವಾಗಿ ವಿನ್ಯಾಸಗೊಳಿಸಿರುವ ವಾಹನಗಳಿವು. ಇವುಗಳನ್ನು ರೂಪಿಸಿರುವುದೇ ಹಾಗೆ. ಇದು ಕೂಡ ನಮ್ಮ ತಂತ್ರಜ್ಞಾನ ಕಾಲದ ಮತ್ತೊಂದು ವಿಶೇಷ ಕಲ್ಪನೆ ಎನ್ನಬಹುದು. ಆದರೆ ಇದರಲ್ಲೇನು ವಿಶೇಷ? ಈ ತಂತ್ರಜ್ಞಾನ ಬಂದು ಬಹಳ ವರ್ಷಗಳೇ ಕಳೆದಿವೆಯಲ್ಲ ಎನ್ನುವುದು ನಿಮ್ಮ ಕುತೂಹಲವಾದರೆ, ಅದರಲ್ಲಿಯೂ ಹೊಸತಿದೆ ಎನ್ನುವುದು ಭಾರತೀಯ ವಾಯುಸೇನಾ ಪಡೆಯ ಉತ್ತರ.

ಹೌದು. ಭಾರತೀಯ ವಾಯುಸೇನಾ ಪಡೆಯು ‘BHISHM’ ಹೆಸರಿನ ಸಂಚಾರಿ ಆಸ್ಪತ್ರೆಗಳನ್ನು ಸ್ಥಳೀಯವಾಗಿ ಸಿದ್ದಪಡಿಸಿದೆಯಂತೆ. ‘BHISHM’ ಎಂದರೆ ‘ಭಾರತ್ ಹೆಲ್ತ್ ಇನಿಶಿಯೇಟಿವ್ ಫಾರ್ ಸಹಯೋಗ್, ಹಿತಾ ಅಂಡ್ ಮೈತ್ರಿ’. ಇದುವರೆಗೂ ನಾವು ನೀವು ನೋಡಿದ್ದು ಕೇಳಿದ್ದು ನಮ್ಮ ಹಾಗೆ ರಸ್ತೆಯಲ್ಲಿ ಚಲಿಸುವ ಸಂಚಾರಿ ಕ್ಲಿನಿಕ್ಕುಗಳು. ಆದರೆ ವಾಯುಸೇನೆಯ ಕೆಲಸ ವಾಯುಮಂಡಲದಲ್ಲಿ, ಅಲ್ಲವೆ? ಇದೂ ಒಂದು ಮೊಬೈಲ್ ಕ್ಲಿನಿಕ್ ಎನ್ನುವುದಾದರೆ ಇದರಲ್ಲೇನು ಹೊಸತು ಎಂದಿರಾ? ಇಲ್ಲಿದೆ ಉತ್ತರ. ಇವು ಹೆಲಿಕ್ಯಾಪ್ಟರುಗಳ ಮೂಲಕ ಹಾರಿಬಿಟ್ಟು ಕೆಳಕ್ಕೆ ಕಳುಹಿಸಬಹುದಾದ ಮೊಬೈಲ್ ಕ್ಲಿನಿಕ್ಕುಗಳು. ಪ್ಯಾರಾಚೂಟಿನಂತೆ ಇವು ಹಾರುವುದಿಲ್ಲ. ವಿಮಾನದಿಂದ ಕೆಳಕ್ಕೆ ಬಿಟ್ಟಾಗ ಗಾಳಿಯಲ್ಲಿ ಚಲಿಸಿ ನಿರ್ಧಿಷ್ಟ ಪ್ರದೇಶಗಳಿಗೆ ತಲುಪಬಲ್ಲ ಕ್ಲಿನಿಕ್ಕುಗಳಿವು. ಹೌದು. ಭಾರತೀಯ ವಾಯುಸೇನಾಪಡೆ ಮೊನ್ನೆ ಆಗ್ರಾದ ಬಳಿ ಈ BHISHM ಘಟಕಗಳನ್ನು ಹಾರಿಬಿಟ್ಟು ಪರೀಕ್ಷಿಸಿದೆಯಂತೆ.

ಇಂದು ಎಲ್ಲೆಡೆ ಜನಪ್ರಿಯವಾಗಿರುವ ‘ಆರ್ಟಿಫಿಶಿಯಲ್ ಇಂಟೆಲಿಜೆನ್ಸ್’ ಮತ್ತು ‘ಡಾಟಾ ಅನಲಿಟಿಕ್ಸ್’ನ ಅತ್ಯಾಧುನಿಕ ಈ ತಂತ್ರಜ್ಞಾನಗಳನ್ನೂ ಈ ಮೊಬೈಲ್ ಕ್ಲಿನಿಕ್ಕುಗಳಲ್ಲಿ ಅಳವಡಿಸಿರುವುದು ವಿಶೇಷ. BHISHM ಘಟಕಗಳಲ್ಲಿ ಒಂದು ಆಸ್ಪತ್ರೆಯಲ್ಲಿರಬಹುದಾದ ಆಪರೇಷನ್ ಥಿಯೇಟರ್, ಮಿನಿ-ಐಸಿಯು, ವೆಂಟಿಲೇಟರ್, ರಕ್ತಪರೀಕ್ಷಾ ಸಾಧನಗಳು, ಎಕ್ಸ್-ರೇ ಯಂತ್ರಗಳು, ಕುಕಿಂಗ್ ಸ್ಟೇಷನ್ ಮುಂತಾದ ಎಲ್ಲ ಅವಶ್ಯಕ ಮತ್ತು ಪ್ರಮುಖ ಆಧುನಿಕ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ.

ಇವು ಯಾವುದೇ ನಿರ್ಜನ ಪ್ರದೇಶಗಳಲ್ಲಿ ಬೆಟ್ಟಗುಡ್ಡ, ಅರಣ್ಯಪ್ರದೇಶಗಳಲ್ಲಿಯೂ ಕಾರ್ಯನಿರ್ವಹಿಸಬಲ್ಲವಂತೆ. ಇದರಿಂದಾಗಿ ಪ್ರವಾಹ, ಭೂಕಂಪ, ಸುನಾಮಿ, ಬೆಂಕಿಯ ಅಪಘಾತಗಳು, ವಿಮಾನ ಅಪಘಾತಗಳಂತಹ ವಿಪತ್ತು ಸಂದರ್ಭಗಳಲ್ಲಿ ಇವು ಬಹಳ ಅನುಕೂಲಿ. ಜೊತೆಗೆ ಇವನ್ನು ವಿಮಾನಗಳಿಂದ ಹಾರಿಬಿಟ್ಟಾಗ ಆರ್ಟಿಫಿಶಿಯಲ್ ತಂತ್ರಜ್ಞಾನದ ಸಹಾಯದಿಂದ ಅಪಾಯ ಸಂಭವಿಸಿರುವ ಸ್ಥಳವನ್ನು ಗುರುತಿಸುತ್ತವೆಯಂತೆ; ಬೆಟ್ಟಗುಡ್ಡ ಅಥವಾ ಅರಣ್ಯಪ್ರದೇಶಗಳಲ್ಲಿ ಕಾರ್ಯನಿರ್ವಹಿಸಬೇಕಾದಾಗಲೂ ವೇಗವಾಗಿ ಚಲಿಸಿ, ತಕ್ಷಣ ಗ್ರಹಿಸಿ, ತುರ್ತಾಗಿ ವೈದ್ಯಕೀಯ ಸೇವೆಗಳನ್ನು ಇವು ನೀಡಬಲ್ಲವಂತೆ. ಏಕಕಾಲದಲ್ಲಿ ಸುಮಾರು 200 ಜನರಿಗೆ ಚಿಕಿತ್ಸೆ ಮಾಡಬಲ್ಲ ವ್ಯವಸ್ಥೆಯನ್ನು ಅಳವಡಿಸಲಾಗಿದೆ.

ಇದರ ತಂತ್ರಜ್ಞಾನದ ಕಾರಣದಿಂದಾಗಿ ಜನರನ್ನು ಸರಿಯಾದ ಸಮಯದಲ್ಲಿ ರಕ್ಷಿಸಬಹುದು. ಪರಿಸ್ಥಿತಿಗಳಿಗೆ ಅನುಗುಣವಾಗಿ ಪೂರ್ವತಯಾರಿಗಳನ್ನೂ ಮಾಡಿಕೊಳ್ಳಲೂ ಇದು ನೆರವಾಗುತ್ತದೆ. ವೈದ್ಯಕೀಯ ತಂಡಗಳು ಸಹಕಾರ, ಸಂವಹನ ಮತ್ತು ಸಂಪರ್ಕಗಳನ್ನು ಸುಲಭವಾಗಿಸುತ್ತದೆ. ತನ್ಮೂಲಕ ಕಾರ್ಯಾಚರಣೆಯನ್ನೂ ಸಫಲಗೊಳಿಸುತ್ತದೆ.

BHISHM ಘಟಕಗಳನ್ನು 72 ಹಗುರವಾದ, ಸದೃಢವಾದ ಹಾಗೂ ಜಲನಿರೋಧಕ ಭಾಗಗಳಿಂದ ಮಾಡಲಾಗಿದೆ. ಆಕಾಶದಲ್ಲಿ ಚಲಿಸಿ ಮೇಲಿಂದ ಕೆಳಕ್ಕೆ ಬೀಳಬೇಕೆಂದರೆ ಅವು ಹಗುರವಾಗಿಯೂ ಇರಬೇಕು. ಸದೃಢವಾಗಿಯೂ ಇರಬೇಕು. ಹಾಗಾದಲ್ಲಿ ಮಾತ್ರವೇ ಇವನ್ನು ತ್ವರಿತವಾಗಿ ಮತ್ತು ವಿವಿಧ ರೀತಿಗಳಲ್ಲಿ ಆರೋಗ್ಯಸೇವಾ ಕಾರ್ಯಕ್ಕೆ ನಿಯೋಜಿಸುವುದು ಸುಲಭ. ಅಂತೆಯೇ BHISHM ಘಟಕಗಳನ್ನು ವಿನ್ಯಾಸ ಮಾಡಲಾಗಿದೆ. ಇವುಗಳನ್ನು ಮೊದಲಿಗೆ ಬಿಡಿಭಾಗಗಳಾಗಿ ವ್ಯವಸ್ಥಿತವಾಗಿಟ್ಟುಕೊಂಡಿದ್ದು, ಅಗತ್ಯಬಿದ್ದಾಗ ಕೇವಲ 12 ನಿಮಿಷಗಳಲ್ಲಿ ಕ್ಲಿನಿಕ್ಕನ್ನು ರೂಪಿಸಿಬಿಡಬಹುದಂತೆ. ಬೈಸಿಕಲ್, ಬೈಕ್, ಡ್ರೋನ್, ವಿಮಾನ – ಹೀಗೇ ಯಾವುದೇ ರೀತಿಯಲ್ಲಾದರೂ ಕೊಂಡೊಯ್ದು ಬಳಸಿಕೊಳ್ಳಬಹು. ಇವು ರಸ್ತೆಮಾರ್ಗಗಳಿಂದ ಹಿಡಿದು ವಿಮಾನದಿಂದ ಕೆಳಕ್ಕೆ ಹಾರಿಸುವುದರವರೆಗೆ ಎಲ್ಲ ರೀತಿಯಲ್ಲೂ, ಎಲ್ಲ ಪರಿಸ್ಥಿತಿಗಳಲ್ಲಿಯೂ ಸುಲಭವಾಗಿ ಕೆಲಸ ಮಾಡುತ್ತವೆ. ಹೀಗಾಗಿ ವಿಪತ್ತಿನಂತಹ ಮಾರಣಾಂತಿಕ ಸಂದರ್ಭಗಳಲ್ಲಿ ಇಂತಹ ಸೇವೆಗಳು ಬಹಳ ಉಪಯುಕ್ತವೆನಿಸುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.