ಕ್ಯಾನ್ಸರ್ಗೆ ನೀಡುವ ಚಿಕಿತ್ಸೆಯಲ್ಲಿ ಹಲವು ಅಡ್ಡಪರಿಣಾಮಗಳು ಇರುತ್ತವೆ. ಹಾಗಾಗಿ ಕ್ಯಾನ್ಸರ್ಪೀಡಿತರು ಕ್ಯಾನ್ಸರ್ನಿಂದ ಬಳಲುವುದಲ್ಲದೇ ಚಿಕಿತ್ಸೆಯಿಂದಾಗುವ ಅಡ್ಡಪರಿಣಾಮಗಳನ್ನೂ ಎದುರಿಸಬೇಕು. ಇವುಗಳ ಮಧ್ಯೆ ಕಡಿಮೆ ಅಡ್ಡಪರಿಣಾಮ ಬೀರುವ ಹಲವು ಆವಿಷ್ಕಾರಗಳು ನಡೆದಿವೆ.

ಶೇ 70ರಷ್ಟು ಕ್ಯಾನ್ಸರ್ ಪ್ರಮಾಣವನ್ನು ಬಾರದಂತೆ ಮುಂಜಾಗ್ರತಾ ಕ್ರಮವಾಗಿ ತಡೆಗಟ್ಟಲು ಸಾಧ್ಯವಿದೆ. ಉಳಿದ ಶೇ 30ರಷ್ಟು ನಿಯಮಿತವಾಗಿ ಸ್ಕ್ರೀನಿಂಗ್ ಮೂಲಕ ಸಕಾಲದಲ್ಲಿ ಪತ್ತೆ ಹಚ್ಚಿದರೆ, ಚಿಕಿತ್ಸೆ ಪಡೆಯಬಹುದು. ಕ್ಯಾನ್ಸರ್ ಆರಂಭಿಕ ಹಂತದಲ್ಲಿ ಪತ್ತೆಯಾದರೆ ಚಿಕಿತ್ಸೆ ಸರಳವಾಗಿರುತ್ತದೆ. ನಂತರದ ಹಂತದಲ್ಲಿ ಪತ್ತೆಯಾದರೆ ಚಿಕಿತ್ಸೆ ಹೆಚ್ಚು ಸಂಕೀರ್ಣವಾಗಿದ್ದು, ಅಡ್ಡಪರಿಣಾಮಗಳಿರುತ್ತವೆ. ರೋಗಿಯು ದೀರ್ಘಕಾಲದವರೆಗೆ ಎರಡೂ ನೋವನ್ನು ಅನುಭವಿಸಬೇಕಾಗುತ್ತದೆ. ಜತೆಗೆ ದೇಹ ಸಮರ್ಪಕವಾಗಿ ಸ್ಪಂದಿಸದೇ ಹೋಗುವ ಸಾಧ್ಯತೆ ಇರುತ್ತದೆ.

ಕಡಿಮೆ ಅಡ್ಡಪರಿಣಾಮದ ಆವಿಷ್ಕಾರಗಳಲ್ಲಿ ಪ್ರಮುಖವಾಗಿರುವುದೆಂದರೆ ಡೋಸ್–ಡೆನ್ಸ್ ಕಿಮೋಥೆರಪಿ. ಈ ಕಿಮೋಥೆರಪಿಯನ್ನು ಮೂರು ವಾರಕ್ಕೊಮ್ಮೆ ನೀಡುವ ಬದಲು, ಸಣ್ಣ ಪ್ರಮಾಣದಲ್ಲಿ ಅಂದರೆ ಸಣ್ಣ ಡೋಸ್ಗಳಾಗಿ ವಿಭಜಿಸಿ ಪ್ರತಿ ವಾರ ನೀಡಲಾಗುತ್ತದೆ. ಇದರಿಂದ ಬೋನ್ ಮ್ಯಾರೋ ಸಂಬಂಧಿಸಿದ ಅಡ್ಡಪರಿಣಾಮಗಳು ಗಣನೀಯವಾಗಿ ಕಡಿಮೆಯಾಗುತ್ತದೆ.

ಮೂರು ವಾರಗಳಿಗೆ ಒಮ್ಮೆಲೇ ನೀಡುವ ಹೆಚ್ಚು ಪ್ರಮಾಣದ ಔಷಧಕ್ಕೆ ಹೋಲಿಸಿದರೆ ಇದು ಬಹಳ ಪರಿಣಾಮಕಾರಿ. ವಯಸ್ಸಾದ ಅಥವಾ ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ಕ್ಯಾನ್ಸರ್ ರೋಗಿಗಳಿಗೆ ಕಡಿಮೆ ಡೋಸ್ನ ಔಷಧವನ್ನು ನೀಡಬಹುದು.

ಆ್ಯಂಟಿ-ಆ್ಯಂಜಿಯೋಜೆನಿಕ್ ಚಿಕಿತ್ಸೆ ಜತೆ ಕಿಮೋಥೆರಪಿಯನ್ನು ಬಳಸುವುದರಿಂದ ಅಡ್ಡಪರಿಣಾಮದ ತೀವ್ರತೆ ಕಡಿಮೆ ಇರುತ್ತದೆ. ಕಿಮೋ ಇಮ್ಯೂನ್ ಥೆರಪಿ ಮತ್ತು ಆ್ಯಂಟಿ-ಆ್ಯಂಜಿಯೋಜೆನಿಕ್ ಚಿಕಿತ್ಸೆಗಳಿಂದ ರೋಗನಿರೋಧಕ ಶಕ್ತಿ ಪುನಶ್ಚೇತನಗೊಳ್ಳುತ್ತದೆ.

ರೋಗಿಗಳ ಜೀವನದ ಗುಣಮಟ್ಟ ಸುಧಾರಿಸಲು ಸೋಂಕು ಹಾಗೂ ಸುಸ್ತು ನಿವಾರಕವಾದ IV ಆಲ್ಬುಮಿನ್ ಇರುವ ಮಾತ್ರೆ ಹಾಗೂ ಲಸಿಕೆಯನ್ನು ನೀಡಬಹುದು. ಅಬಿಧಮನಿಗಳು ಹಾನಿಗೊಳಗಾಗಿದ್ದಾರೆ ದೀರ್ಘಕಾಲಿನ ವೇನಸ್ ಕ್ಯಾಥೆಟರ್ಸ್ ಅಥವಾ ಪೋರ್ಟ್ಗಳನ್ನು ನೀಡಬಹುದು. ವಯಸ್ಸಿನ ಆಧಾರದ ಮೇಲೆ ಚಿಕಿತ್ಸೆಯನ್ನು ಇನ್ನಷ್ಟು ವೈಯಕ್ತೀಕರಣಗೊಳಿಸಲು ಸಾಧ್ಯವಿರುವುದರಿಂದ ಚಿಕಿತ್ಸಾ ವೆಚ್ಚವೂ ಕಡಿಮೆಯಾಗುತ್ತದೆ.

– ಡಾ.ರಾಧೇಶ್ಯಾಂ ನಾಯಕ್, ಕನ್ಸಲ್ಟೆಂಟ್ ಮೆಡಿಕಲ್ ಆಂಕಾಲಾಜಿಸ್ಟ್, ಹೆಮಟೋಲಾಜಿಸ್ಟ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.