ಕಳೆದೆರಡು ವರ್ಷದಿಂದ ಕೋವಿಡ್‌ನಿಂದಾಗಿ ಇಡೀ ವಿಶ್ವವೇ ವರ್ಕ್ ಫ್ರಮ್ ಹೋಮ್ ಪರಿಕಲ್ಪನೆಗೆ ಒಗ್ಗಿಕೊಂಡಿತ್ತು. ಇದರಿಂದ ಬಹುತೇಕ ಜನರು ಮನೆಯಿಂದಲೇ ಕೆಲಸ ಮಾಡುತ್ತಿದ್ದರಿಂದ ವಾತಾವರಣದಲ್ಲಿನ ವಾಯು ಮಾಲಿನ್ಯ ನಿಯಂತ್ರಣಕ್ಕೆ ಬಂದಿದ್ದರಿಂದ ಅಸ್ತಮಾ (ವೀಸಿಂಗ್), ಸೈನಸ್, ಕೆಮ್ಮು, ಉಸಿರಾಟದಂತಹ ಸಮಸ್ಯೆ ಕಡಿಮೆಯಾಗಿದ್ದವು. ಇದೀಗ ಬಹುತೇಕ ಎಲ್ಲಾ ಕಂಪನಿಗಳು ವಾರದಲ್ಲಿ ಎರಡರಿಂದ ಮೂರು ದಿನ ಕಡ್ಡಾಯವಾಗಿ ಕಚೇರಿಗೆ ಬರಲು ಆಹ್ವಾನಿಸಿದ್ದೇ ತಡ ಬೆಂಗಳೂರಿನಲ್ಲಿ ವಾಯು ಮಾಲಿನ್ಯ ಹೆಚ್ಚಳವಾಗುತ್ತಿದೆ. ಇದರ ಪರಿಣಾಮ ಜನರಲ್ಲಿ ಮತ್ತೆ ಅಸ್ತಮಾ, ಸೈನಸ್ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ.

ಹೌದು, ಕೋವಿಡ್ ಕಾರಣದಿಂದಾಗಿ ಜನ ಮಾಲಿನ್ಯಕ್ಕೆ ತೆರೆದುಕೊಳ್ಳದ ಕಾರಣ ಶ್ವಾಸಕೋಶದ ಸಮಸ್ಯೆ ಇಳಿಮುಖವಾಗಿತ್ತು. ಇದೀಗ ಪ್ರತಿಯೊಬ್ಬರು ತಮ್ಮ ಖಾಸಗಿ ವಾಹನಗಳಿಂದ ರಸ್ತೆಗಿಳಿಯುತ್ತಿರುವ ಕಾರಣ ವಾಯು ಮಾಲಿನ್ಯ ಹಿಂದಿಗಿಂತಲೂ ದುಪ್ಪಟ್ಟಾಗುತ್ತಿದೆ. ಇದರ ಪರಿಣಾಮ ಬಹುತೇಕರಲ್ಲಿ ಅಸ್ತಮಾದಂತಹ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಇದನ್ನು ನಿಯಂತ್ರಿಸಲು ವೈದ್ಯರು ಕೆಲ ಸಲಹೆ ನೀಡಿದ್ದಾರೆ.

ಮಾಸ್ಕ್ ಧರಿಸುವುದನ್ನು ನಿಲ್ಲಿಸದಿರಿ: ಕೋವಿಡ್ ಕಾರಣದಿಂದಾಗಿ ಎಲ್ಲರೂ ಮಾಸ್ಕ್ ಧರಿಸುವುದನ್ನು ಸರ್ಕಾರವೇ ಕಡ್ಡಾಯ ಮಾಡಿತ್ತು. ಇದು ಕೇವಲ ಕೋವಿಡ್ ಅಷ್ಟೇ ಅಲ್ಲದೇ ಇತರೆ ಆರೋಗ್ಯ ಸಮಸ್ಯೆಗಳಿಂದ ರಕ್ಷಾ ಕವಚವಾಗಿ ಕೆಲಸ ಮಾಡುತ್ತಿದೆ. ಇದೀಗ ಬೇಸಿಗೆ ಆಗಿರುವ ಕಾರಣ ಎಲ್ಲೆಡೆ ಧೂಳು ಹೆಚ್ಚಾಗಿದೆ. ಇದನ್ನು ನಿಯಂತ್ರಿಸಲು ಕಡ್ಡಾಯವಾಗಿ ಎನ್–95 ಮಾಸ್ಕ್ ಧರಿಸುವುದು ಮೊದಲ ಮುನ್ನೆಚ್ಚರಿಕೆಯಾಗಿದೆ. ಇದರಿಂದ ಧೂಳು ಹಾಗೂ ಶ್ವಾಸಕೋಶಕ್ಕೆ ಅಲರ್ಜಿ ಉಂಟು ಮಾಡುವ ಕಣಗಳನ್ನು ನಿಯಂತ್ರಿಸಲು ಸಹಕಾರಿಯಾಗುತ್ತದೆ. ಹೀಗಾಗಿ ಕೋವಿಡ್ ಕಡಿಮೆಯಾದರೂ ಅಸ್ತಮಾ, ಉಸಿರಾಟದ ಸಮಸ್ಯೆ ಇರುವವರು ಮಾಸ್ಕ್ ಧರಿಸುವುದು ಉತ್ತಮ.

ಅಸ್ತಮಾದ ಲಕ್ಷಣಗಳು:ಒಣ ಕೆಮ್ಮು ಬರುವುದು, ಉಸಿರಾಡಲು ಕಷ್ಟ, ಎದೆಯ ಭಾಗದಲ್ಲಿ ಬಿಗಿದಂತಾಗುವುದು, ಕಫ ಕಟ್ಟುವುದು ಈ ಲಕ್ಷಣಗಳು ಕಂಡು ಬಂದರೆ ಇದು ಅಸ್ತಮಾ ಎನ್ನುವುದು ಖಚಿತ. ರಾತ್ರಿ ಸಂದರ್ಭದಲ್ಲಿ ಕೆಮ್ಮು ಹೆಚ್ಚಳವಾಗುತ್ತಿದ್ದರೆ ತಡ ಮಾಡದೇ ವೈದ್ಯರನ್ನು ಭೇಟಿ ಮಾಡಿ. ಇಲ್ಲವಾದರೆ ಇದು ದೊಡ್ಡ ಮಟ್ಟದ ಆರೋಗ್ಯ ಸಮಸ್ಯೆಗೂ ಕಾರಣವಾಗಬಹುದು.

ಆಹಾರದಲ್ಲಿ ನಿಯಂತ್ರಣ: ಇನ್ನು ಅಸ್ತಮಾ ಇರುವವರು ಎಣ್ಣೆ ಪದಾರ್ಥಗಳನ್ನು ಕಡ್ಡಾಯವಾಗಿ ನಿಯಂತ್ರಿಸಿಕೊಳ್ಳಬೇಕು. ಇದು ನಿಮ್ಮ ಆರೋಗ್ಯವನ್ನು ಇನ್ನಷ್ಟು ಹದಗೆಡಿಸಲು ಕಾರಣವಾಗಬಹುದು, ಇನ್ನು ನಿಮ್ಮ ಆಹಾರ ಕ್ರಮದಲ್ಲಿ ಪೌಷ್ಟಿಕಾಂಶ ಯುಕ್ತ ಆಹಾರ, ವಿಟಮಿನ್ ಡಿ, ಸಿ ಇರುವ ಆಹಾರವನ್ನು ಹೆಚ್ಚಾಗಿ ಸೇವಿಸಿ.

ವ್ಯಾಯಾಮ: ಅಸ್ತಮಾ ಸಮಸ್ಯೆ ಇರುವವರು ಬೆಳಗ್ಗಿನ ಸಮಯದಲ್ಲಿ ಯೋಗ, ಧ್ಯಾನ, ಪ್ರಾಣಯಾಮ ಮಾಡುವುದನ್ನು ರೂಢಿಸಿಕೊಳ್ಳಿ ಇದು ಅಸ್ತಮಾವನ್ನು ಸುಧಾರಿಸಲಿದೆ.

ಓಮೈಕ್ರಾನ್‌ನಿಂದ ಅಸ್ತಮಾ ಹೆಚ್ಚಳ: ಕೋವಿಡ್‌ನಿಂದಾಗಿ ಕೆಲವರಲ್ಲಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದರೂ ಕೋವಿಡ್ ಗುಣಮುಖವಾದ ಬಳಿಕ ಈ ಸಮಸ್ಯೆಗೂ ಸರಿ ಹೋಗುತ್ತಿತ್ತು. ಕೋವಿಡ್ ಎರಡೂ ಅಲೆಗಳಿಂದ ಅಸ್ತಮಾ ಹೆಚ್ಚಳ ಪ್ರಕರಣಗಳು ಕಾಣಿಸಿರಲಿಲ್ಲ. ಆದರೆ, ಓಮೈಕ್ರಾನ್‌ನಿಂದ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರದಿದ್ದರೂ ಅಸ್ತಮಾ ರೋಗಿಗಳನ್ನು ಹೆಚ್ಚಳ ಮಾಡಿದೆ. ನಮ್ಮ ಆಸ್ಪತ್ರೆಗೆ ಓಮೈಕ್ರಾನ್ ಅಲೆ ಇರುವಾಗಲೇ ಅಸ್ತಮಾ ಸಮಸ್ಯೆ ಎಂದು ದಾಖಲಾದವರು ಹೆಚ್ಚು.

ಬೂಸ್ಟರ್ ಡೋಸ್ ತೆಗೆದುಕೊಳ್ಳುವುದು ಒಳ್ಳೆಯದು. ಕೋವಿಡ್ ಪ್ರಕರಣಗಳು ಕಡಿಮೆಯಾಗುತ್ತಿರಬಹುದು, ಆದರೆ, ನಮ್ಮ ಇತರೆ ಆರೋಗ್ಯ ಸಮಸ್ಯೆಗಳನ್ನು ಎದುರಿಸಲು ಕೋವಿಡ್ ಲಸಿಕೆಗಳು ಹೆಚ್ಚು ಕೆಲಸ ಮಾಡುತ್ತಿವೆ. ಹೀಗಾಗಿ ಎಲ್ಲರೂ ಬೂಸ್ಟರ್ ಡೋಸ್ ಪಡೆದರೆ ಅಸ್ತಮಾದಂತಹ ರೋಗವನ್ನು ನಿಯಂತ್ರಣಕ್ಕೆ ತರಬಹುದಾಗಿದೆ.

–ಡಾ. ವಿವೇಕ್ ಆನಂದ್ ಪಡೇಗಲ್, ಶ್ವಾಸಕೋಶ ತಜ್ಞ, ಫೋರ್ಟಿಸ್ ಆಸ್ಪತ್ರೆ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.