ಕೋವಿಡ್ ಸೋಂಕಿನ ಎರಡನೇ ತೀವ್ರತೆಯು ಹೆಚ್ಚಾಗಿದ್ದು ಅನೇಕ ಜೀವಗಳನ್ನು ಬಲಿತೆಗೆದುಕೊಳ್ಳುತ್ತಿದೆ. ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳದೇ ಮೈಮರೆತಿದ್ದು ಇದೆಲ್ಲದಕ್ಕೂ ಕಾರಣ.

ಸಾಮಾಜಿಕ ಅಂತರ, ಕೈಗಳ ಸ್ವಚ್ಛತೆ, ಮುಖಗವಸು ಈ ಸೋಂಕನ್ನು ತಡೆಯಲು ಸಹಾಯಕ. ಅಂತೆಯೇ ಅಧ್ಯಯನಗಳ ಪ್ರಕಾರ ಕೆಮ್ಮುವಾಗ ಬಾಯಿಂದ ಹೊರಹೊಮ್ಮುವ ಹನಿಗಳಿಂದ ಹರಡಬಹುದಾಗಿರುವುದರಿಂದ ಮೌತ್ ವಾಶ್ ಬಳಕೆಯಿಂದ ಈ ಸೋಂಕು ಹರಡುವುದನ್ನುಕಡಿಮೆಮಾಡಬಹುದಾಗಿದೆ ಎಂದು ತಿಳಿಸಿವೆ.

ಮೌತ್ ವಾಶ್ ಗಳ ಬಳಕೆಯಿಂದ ಕೋವಿಡ್ ಸೋಂಕು ಹರಡುವುದನ್ನು ತಡೆಯುವ ಬಗೆ

* ಸಿ.ಪಿ.ಸಿ ತಂತ್ರಜ್ಞಾನ ( CITYPLYRIDINIUM CHLORIDE ) ವುಳ್ಳ ಮೌತ್ ವಾಶ್ಗಳ ಬಳಕೆಯಿಂದ ಕೋವಿಡ್-19 ಸೋಂಕು ಹರಡುವುದನ್ನು ತಡೆಯಬಹುದಾಗಿದೆ.

*ಸಿ.ಪಿ.ಸಿ ಎಂಬ ರಾಸಾಯನಿಕವು ಬಹುಪಾಲು ಸೂಕ್ಷ್ಮ ಜೀವಿಗಳನ್ನು ಕೊಲ್ಲಬಹುದಾಗಿದ್ದು ಸೋಂಕನ್ನು ಕಡಿಮೆ ಮಾಡಲು ಬಳಸಬಹುದಾಗಿದೆ.

*ಇಂತಹ ಮೌತ್ ವಾಶ್ಗಳು ಬಾಯಿಯಲ್ಲಿನ ವೈರಾಣುವಿನ ಪ್ರಮಾಣವನ್ನುಕಡಿಮೆಮಾಡಬಹುದಾಗಿದೆ.

*ಮೌತ್ ವಾಶ್ ಬಳಸಿದ ಆರು ಗಂಟೆಯತನಕ ವೈರಾಣುವಿನ ಪ್ರಮಾಣವನ್ನು ಕಡಿಮೆಮಾಡಬಹುದಾಗಿದೆ ಎಂದು ಅಧ್ಯಯನಗಳು ತಿಳಿಸುತ್ತವೆ.

*ಅಧ್ಯಯನಗಳ ಪ್ರಕಾರ 30 ಸೆಕೆಂಡ್ ಮೌತ್ ವಾಶ್ ಬಳಸಿ ಬಾಯಿ ಮುಕ್ಕಳಿಸಿದರೆ ಶೇ 99 ರಷ್ಟು ಸೋಕ್ಷ್ಮ ಜೀವಿಗಳು ನಾಶವಾಗುತ್ತವೆ.

* ಸಾಮಾಜಿಕ ಅಂತರ, ಕೈಗಳ ಸ್ವಚ್ಛತೆ, ಮುಖಗವಸು ಇವುಗಳೊಡನೆ ಮೌತ್ ವಾಶ್ಗಳ ಬಳಕೆಯು ಸಹ ರೋಗ ಹರಡುವಿಕೆ ತಡೆಯಲು ಸಹಕಾರಿಯಾಗಿವೆ.

*ಮೌತ್ ವಾಶ್ ಬಳಕೆಯಿಂದ ಇತರೆ ಬಾಯಿಯ ಸೋಂಕನ್ನು ತಡೆಯಬಹುದಾಗಿದ್ದು ಕೋವಿಡ್-19 ಸೋಂಕಿನ ಸಂಕೀರ್ಣತೆಗಳನ್ನು ಕಡಿಮೆ ಮಾಡಬಹುದಾಗಿದೆ.

ಕೋವಿಡ್-19 ಸೋಂಕಿತರು, ಧೀರ್ಘಕಾಲ ಐ.ಸಿ.ಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವವರು, ಧೀರ್ಘಕಾಲ ಸ್ಟಿರಾಯ್ಡ್ ಚಿಕಿತ್ಸೆ ಪಡೆಯುತ್ತಿರುವವರು, ಮಧುಮೇಹಿಗಳು ಬಾಯಿಯ ಸ್ವಚ್ಛತೆಯನ್ನು ಕಾಪಾಡಿಕೊಳ್ಳದಿದ್ದಲ್ಲಿ ಮ್ಯೂಕಾರ್ ಮೈಕೋಸಿಸ್ ಸೋಂಕಿಗೆ ಬಲಿಯಾಗಬಹುದಾಗಿದೆ. ಆದುದರಿಂದ ಮೌತ್ ವಾಶ್ ಬಳಕೆಯಿಂದ ಇತರೆ ಸೋಂಕುಗಳನ್ನು ಸಹ ದೂರ ಇರಿಸಬಹುದಾಗಿದೆ.

ಕೋವಿಡ್ ಸೋಂಕು ಕೇವಲ ಬಾಯಿಂದಲ್ಲದೆ ಮೂಗಿನಿಂದ, ಕಿವಿ, ಕಣ್ಣುಗಳ ಲೋಳೆಪದರದ ಮೂಲಕ ಶರೀರವನ್ನು ಪ್ರವೇಶಿಸಬಹುದಾಗಿರುವುದರಿಂದ ಕೈಗಳ ಸ್ವಚ್ಛತೆ, ಸಾಮಾಜಿಕ ಅಂತರ, ಮುಖಗವಸು, ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಆಂತರಿಕ ರೋಗನಿರೋಧಕ ಶಕ್ತಿಯನ್ನುಹೆಚ್ಚಿಸಿಕೊಳ್ಳಬೇಕು. ಮನಃಸ್ಥೈರ್ಯ, ಸಕಾರಾತ್ಮಕ ಯೋಚನೆಗಳು ಕೊರೊನಾವನ್ನು
ದೂರಮಾಡಬಲ್ಲವು.

(ಲೇಖಕರು: ಡಾ|| ಸ್ಮಿತಾ ಜೆ ಡಿ, ಓರಲ್ ಮೆಡಿಸಿನ್ ಅಂಡ್ ರೇಡಿಯೋಲಾಜಿ ತಜ್ಞರು, ಹಿರಿಯ ದಂತ ವೈದ್ಯರು, ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ, ಗುಂಡ್ಲುಪೇಟೆ.)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.