‘ಲಿಂಫೋಮಾ’ ದೇಹದ ದುಗ್ಧರಸ ಗ್ರಂಥಿ ವ್ಯವಸ್ಥೆಯಲ್ಲಿ ತಲೆದೋರುವ ಗಂಟುಗಳು. ಇವು ಒಂದು ಬಗೆಯ ಕ್ಯಾನ್ಸರ್ ಗಂಟುಗಳೇ ಆಗಿವೆ. ಕುತ್ತಿಗೆ, ಕಂಕುಳ ಭಾಗದಲ್ಲಿ ಗಂಟುಗಳು ಕಂಡುಬಂದರೆ ನಿರ್ಲಕ್ಷಿಸದೇ ವೈದ್ಯರನ್ನು ಕಂಡು ತಪಾಸಣೆಗೊಳಪಡುವುದು ಅಗತ್ಯ. ನಿರ್ಲಕ್ಷಿಸಿದಲ್ಲಿ ಅಪಾಯವನ್ನು ಎದುರಿಸಬೇಕಾಗಬಹುದು.

ಕುತ್ತಿಗೆ, ಕಂಕುಳ ಭಾಗದಲ್ಲಿ ಗಂಟುಗಳಲ್ಲದೆ, ಅತಿಯಾಗಿ ಬೆವರುವುದು, ತುರಿಕೆ, ಹಸಿವಾಗದಿರುವುದು, ದೈಹಿಕವಾಗಿ ಕ್ಷಯಿಸುವುದು, ಮೂಳೆಗಳಲ್ಲಿ ನೋವುಂಟಾಗುವುದು ಹಾಗೂ ಜ್ವರ ಕೂಡ ಲಿಂಫೋಮಾ ಲಕ್ಷಣಗಳು. ಈ ಲಕ್ಷಣಗಳು ಗಮನಕ್ಕೆ ಬರುತ್ತಲೇ ವೈದ್ಯರನ್ನು ಕಂಡು ತಪಾಸಣೆ ಮಾಡಿಸಿಕೊಂಡರೆ ಸೂಕ್ತ ಚಿಕಿತ್ಸೆ ಪಡೆದು ಆ ಬಾಧೆಯಿಂದ ಬಹುಬೇಗ ಮುಕ್ತರಾಗಬಹುದು. ಎಕ್ಸರೇ, ಸ್ಕ್ಯಾನಿಂಗ್, ಪೆಟ್ ಸ್ಕ್ಯಾನ್, ಬಯಾಪ್ಸಿ ಮೂಲಕ ಲಿಂಫೋಮಾ ಪತ್ತೆ ಮಾಡಿ, ಯಾವ ಹಂತದಲ್ಲಿದೆ ಎಂಬುದನ್ನು ನಿರ್ಧರಿಸಲಾಗುವುದು.

ಬಯಾಪ್ಸಿ ಸಮಯದಲ್ಲಿ, ಸೂಜಿ ಬಯಾಪ್ಸಿಯಲ್ಲಿ ಮಾದರಿಯನ್ನು ತೆಗೆದುಕೊಳ್ಳಲು ವೈದ್ಯರು ನೇರವಾಗಿ ದುಗ್ಧರಸ ಗ್ರಂಥಿಗೆ ಸೂಜಿಯನ್ನು ಸೇರಿಸುತ್ತಾರೆ. ತೆರೆದ ಬಯಾಪ್ಸಿಯಲ್ಲಿ ಹೆಸರೇ ಸೂಚಿಸುವಂತೆ ಶಸ್ತ್ರಚಿಕಿತ್ಸೆ ತೆರೆದಿರುತ್ತದೆ. ಸೆಂಟಿನೆಲ್ ನೋಡ್ ಬಯಾಪ್ಸಿಯಲ್ಲಿ ಕ್ಯಾನ್ಸರ್ ಹರಡುವಿಕೆಯನ್ನು ಪತ್ತೆಹಚ್ಚಲು ವೈದ್ಯರು ಟ್ರೇಸರ್ ಅನ್ನು ಬಳಸುತ್ತಾರೆ.

‘ಲಿಂಫೋಮಾ ಕಾಯಿಲೆಗೂ ಕ್ಯಾನ್ಸರ್‌ನಲ್ಲಿ ಅನುಸರಿಸುವ ಚಿಕಿತ್ಸಾ ಕ್ರಮಗಳನ್ನೇ ನೀಡಲಾಗುವುದು. ಕಿಮೋಥೆರಪಿ, ರೆಡಿಯೇಷನ್ ಚಿಕಿತ್ಸೆಗಳ ಮೂಲಕವೇ ಗುಣಪಡಿಸಲಾಗುವುದು. 12 ವರ್ಷದ ಮೇಲ್ಪಟ್ಟು, 60 ವರ್ಷದವರನ್ನೂ ಲಿಂಫೋಮಾ ಬಾಧಿಸಬಹುದು. ಇಳಿವಯಸ್ಸಿನವರಲ್ಲೂ ಕಂಡುಬರುತ್ತಿದೆ. ಹೆಣ್ಣುಮಕ್ಕಳಿಗಿಂತ ಗಂಡು ಮಕ್ಕಳಲ್ಲೇ ಈ ಬಾಧೆ ಹೆಚ್ಚು ಕಂಡುಬರುತ್ತಿದೆ’ ಎಂಬುದು ಕಿಮ್ಸ್‌ನ ಕ್ಯಾನ್ಸರ್ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಎಂ.ಜಿ.ಗಿರಿಯಪ್ಪ ಗೌಡರ್ ಅವರ ಅಭಿಪ್ರಾಯ.

‘ಕಾಯಿಲೆಯ ಅರಿವಿನ ಕೊರತೆ ಕಾರಣದಿಂದ ಹಾಗೂ ಲಕ್ಷಣಗಳು ಗಮನಕ್ಕೆ ಬಂದರೂ ವೈದ್ಯರಲ್ಲಿಗೆ ಹೋಗಿ ತಪಾಸಣೆಗೊಳಗಾಗುವಲ್ಲಿ ನಿರ್ಲಕ್ಷ್ಯ ತೋರಿ ಕಾಯಿಲೆಯ ಹಂತವನ್ನು ಹೆಚ್ಚಿಸಿಕೊಳ್ಳುವವರ ಸಂಖ್ಯೆಯೇ ಹೆಚ್ಚಿದೆ. ಇದರಿಂದ ಪ್ರಾಣಕ್ಕೂ ಕಂಟಕವಾಗಲಿದೆ. ಕಾಯಿಲೆಯ ಲಕ್ಷಣಗಳು ಗಮನಕ್ಕೆ ಬರುತ್ತಲೇ ಮೊದಲು ವೈದ್ಯರನ್ನು ಕಂಡು ತಪಾಸಣೆ ಮಾಡಿಸಿಕೊಂಡು, ರೋಗ ಮುಕ್ತರಾಗಬೇಕು’ ಎಂಬುದು ಅವರು ನೀಡುವ ಸಲಹೆ.

‘ಆಹಾರಕ್ರಮ, ವ್ಯಾಯಾಮ ಅಗತ್ಯ’

ಲಿಂಫೋಮಾದಿಂದ ದೂರವಿರಲು ಸರಿಯಾದ ಆಹಾರಕ್ರಮದೊಂದಿಗೆ ನಿತ್ಯ ವ್ಯಾಯಾಮ ಮಾಡುವುದು ಅಗತ್ಯ. ಜಂಕ್ ಫುಡ್‌ಗಳಿಂದ ದೂರವಿರಬೇಕು. ನಿತ್ಯ ಸೊಪ್ಪು, ತರಕಾರಿ, ಕಾಳುಪಲ್ಲೆ, ಹಣ್ಣುಗಳ ಸೇವನೆ ಅಗತ್ಯ. ಕರಿದ ಪದಾರ್ಥಗಳಿಂದ ದೂರವಿರಬೇಕು.
ದೇಹದಲ್ಲಿ ಬೊಜ್ಜಿಗೆ ಅವಕಾಶ ನೀಡದೆ ಶಿಸ್ತುಬದ್ಧ ಜೀವನಕ್ರಮ ಅನುಸರಿಸಿದಲ್ಲಿ ಲಿಂಫೋಮಾ ಮಾತ್ರವಲ್ಲ; ಬೇರೆ ಬೇರೆ ರೀತಿಯ ಕಾಯಿಲೆಗಳಿಂದಲೂ ದೂರವಿರಬಹುದು’ ಎಂದು ಡಾ. ಎಂ.ಜಿ. ಗಿರಿಯಪ್ಪಗೌಡರ್ ಸಲಹೆ ನೀಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.