ಜಂ ಕ್ ಫುಡ್ ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಮಕ್ಕಳಿಗೆ, ವಿದ್ಯಾರ್ಥಿಗಳಿಗೆ ಮುಖ್ಯವೇ ಅಲ್ಲ. ಅದರ ಬಗ್ಗೆ ಅವರು ಗಮನವಹಿಸುವುದೇ ಇಲ್ಲ. ಮಕ್ಕಳ ಈ ಆಹಾರದ ಗೀಳು ಪೋಷಕರಿಗೆ ಮಾತ್ರ ಆತಂಕ ತಂದೊಡುತ್ತಿದೆ.

ಜಾಹೀರಾತುಗಳು ಮಕ್ಕಳ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತಿರುವುದರಿಂದ ಅದರಲ್ಲಿ ತೋರಿಸುವ ತಿಂಡಿಗಳನ್ನೇ ತಿನ್ನಲು ಹೆಚ್ಚು ಇಷ್ಟಪಡುತ್ತಾರೆ.

ಪ್ರಿಯಾ ಕೇಶರಿ ಮತ್ತು ಸಿ.ಪಿ. ಮಿಶ್ರಾ ಅವರು ಇತ್ತೀಚೆಗೆ ನಡೆಸಿದ ಅಧ್ಯಯನದ ಪ್ರಕಾರ ‘ಭಾರತದಲ್ಲಿ ಫಾಸ್ಟ್ ಫುಡ್ ಬಳಕೆ ಹೆಚ್ಚುತ್ತಿದೆ’ ಎಂಬುದನ್ನು ಸಾಬೀತುಪಡಿಸಿದೆ. ಕ್ರಮ ತೆಗೆದುಕೊಳ್ಳಲು ಇದು ಸರಿಯಾದ ಸಮಯ ಎಂಬುದನ್ನೂ ಅಧ್ಯಯನ ತಂಡ ಸಲಹೆ ಮಾಡಿದೆ.

ಡಬ್ಲ್ಯುಎಚ್‌ಒ ಕಾಳಜಿ: ‘ಡಿಜಿಟಲ್ ಮಾರುಕಟ್ಟೆಯಿಂದ ಮಕ್ಕಳನ್ನು ರಕ್ಷಿಸಲು ಕ್ರಮ ತೆಗೆದುಕೊಳ್ಳುವ ಅನಿವಾರ್ಯತೆ ಇದೆ. ಅದರಲ್ಲೂ ಸಕ್ಕರೆ, ಉಪ್ಪು, ಕೊಬ್ಬಿನ ಅಂಶ ಹೆಚ್ಚಿರುವಂತಹ ಆಹಾರಗಳ ಬಳಕೆ ಹೆಚ್ಚಿದೆ’ ಎಂಬ ಕಾಳಜಿಯನ್ನು ಇತ್ತೀಚೆಗೆ ಡಬ್ಲ್ಯುಎಚ್‌ಒ (ವರ್ಲ್ಡ್ ಹೆಲ್ತ್ ಆರ್ಗನೈಸೇಷನ್) ವ್ಯಕ್ತಪಡಿಸಿದೆ.

ಆನ್‌ಲೈನ್ ಬಳಕೆ ಹೆಚ್ಚಾದಂತೆ, ಮಕ್ಕಳು ವಿವಿಧ ಆ್ಯಪ್‌ಗಳನ್ನು ಡೌನ್ ಲೋಡ್ ಮಾಡಿ, ಫುಡ್ ಆರ್ಡರ್ ಮಾಡಿ ತಿನ್ನುವುದನ್ನು ರೂಢಿಸಿಕೊಂಡಿದ್ದಾರೆ. ಇದು ಕಳವಳಕಾರಿ ಎಂಬುದನ್ನೂ ಡಬ್ಲ್ಯುಎಚ್‌ಒ ಹೇಳಿದೆ.

ಹೇಗೆ ಹಾನಿಕಾರಕ?

ಬಹುತೇಕ ಜಂಕ್ ಫುಡ್‌ಗಳನ್ನು ಎಣ್ಣೆಯಲ್ಲಿ ಕರಿಯಲಾಗಿರುತ್ತದೆ. ಸಕ್ಕರೆ ಅಂಶ ಹೆಚ್ಚಿರುವುದರಿಂದ ಭಾರತ ಸೇರಿದಂತೆ ಮುಂದುವರಿಯುತ್ತಿರುವ ರಾಷ್ಟ್ರಗಳಲ್ಲಿ ಮಧುಮೇಹಿಗಳ ಸಂಖ್ಯೆ ಹೆಚ್ಚಿದೆ. ಕಳೆದ 30 ವರ್ಷಗಳಲ್ಲಿ ಅಧಿಕ ಬೊಜ್ಜು ಹಾಗೂ ರಕ್ತದೊತ್ತಡದ ಸಮಸ್ಯೆಯಿಂದ ಬಳಲುತ್ತಿರುವವರು ಹೆಚ್ಚಿದ್ದಾರೆ ಎಂದು ಬಾಸ್ಟನ್ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನ ಹೇಳಿದೆ.

ಜಂಕ್ ಫುಡ್ ಅಥವಾ ಕುರುಕಲು ತಿಂಡಿಗಳಲ್ಲಿರುವ ಜಿಡ್ಡಿನ ಅಂಶ, ಮೈದಾ, ಚೀಸ್, ಪಿಸ್ಟ್, ಸಕ್ಕರೆ ಅಂಶಗಳು ಆರೋಗ್ಯಕ್ಕೆ ಹಾನಿಕರ. ಮೈದಾ ಮತ್ತು ಚೀಸ್ ಬೇಗ ಜೀರ್ಣವಾಗುವುದಿಲ್ಲ. ಇದರಿಂದ ಮಕ್ಕಳಿಗೆ ಬೇಗ ಹಸಿವು ಆಗುವುದಿಲ್ಲ. ರುಚಿ ಹೆಚ್ಚಿಸಲು ನಿಗದಿತ ಪ್ರಮಾಣಕ್ಕಿಂತ ಹೆಚ್ಚಾಗಿ ಅಜಿನೋಮೋಟೊ (ಮೋನೋಸೋಡಿಯಂ ಗ್ಲುಟಮೇಟ್) ಬಳಸಲಾಗುತ್ತದೆ. ಇದು ಆರೋಗ್ಯಕ್ಕೆ ಅಪಾಯಕಾರಿ. ಸೀಸದಂತಹ ಅಪಾಯಕಾರಿ ರಾಸಾಯನಿಕಗಳು ಕೂಡ ಜಂಕ್‌ಫುಡ್‌ಗಳಲ್ಲಿ ಪತ್ತೆಯಾಗಿದೆ.

ಹೆಚ್ಚು ಬಳಸುತ್ತಿರುವ ಜಂಕ್ ಫುಡ್

ಚಾಕೊಲೇಟ್, ಕ್ಯಾಂಡಿ, ಕುಕ್ಕೀಸ್, ಕೇಕ್, ಪೇಸ್ಟ್ರಿ, ಪಿಜ್ಜಾ, ಬರ್ಗರ್, ಪ್ಯಾಕೆಟ್ ಹಾಗೂ ರೆಡಿಮೇಡ್ ಫುಡ್.

ರುಚಿಗೋಸ್ಕರ ತಿನ್ನುತ್ತೇನೆ

‘ಜಂಕ್ ಫುಡ್’ ಅನಾರೋಗ್ಯ ಎನ್ನುವುದು ಗೊತ್ತು. ಆದರೂ ರುಚಿಗೋಸ್ಕರ ತಿನ್ನುತ್ತೇನೆ. ತಿಂಗಳಿಗೊಮ್ಮೆ ಆದರೂ ರೆಸ್ಟೋರೆಂಟ್, ಹೋಟೆಲ್‌ಗಳಿಗೆ ಹೋಗಿ ಫ್ರೆಂಡ್ಸ್ ಜೊತೆ ತಿನ್ನುತ್ತೇವೆ. ನನಗೆ ಚೈನೀಸ್ ತಿನಿಸುಗಳು ಇಷ್ಟ. ಪಿಜ್ಜಾ, ಬರ್ಗರ್ ಕೂಡ ಆಗಾಗ ತಿನ್ನುತ್ತೇನೆ. ಪಾಕೆಟ್ ಮನಿಯ ಶೇ 80ರಷ್ಟನ್ನು ಇದಕ್ಕೇ ಖರ್ಚು ಮಾಡುತ್ತೇನೆ
–ನಯನಾ, ಅಲಯನ್ಸ್ ಯೂನಿವರ್ಸಿಟಿಯ ಕಾನೂನು ವಿದ್ಯಾರ್ಥಿನಿ

ಮಕ್ಕಳ ಆರೋಗ್ಯಯುತ ಆಹಾರ ಕ್ರಮ ಮತ್ತು ಮಕ್ಕಳ ಊಟದ ಡಬ್ಬಿಯೊಳಗೆ ಏನಿರಬೇಕು ಮತ್ತು ಹೇಗಿರಬೇಕು ಎಂಬ ಉಪಯುಕ್ತ ಮಾಹಿತಿ ಕುರಿತು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್ಎಸ್‌ಎಐ) ‘ಯೆಲ್ಲೊ ಬುಕ್’ ಹೆಸರಿನ ಮಾರ್ಗಸೂಚಿ ಕೈಪಿಡಿಯೊಂದನ್ನು ಕಳೇದ ವರ್ಷ ಹೊರತಂದಿದೆ.

ಕೈಪಿಡಿಯನ್ನು ಶಾಲಾ ಪಠ್ಯಕ್ರಮದಲ್ಲಿ ಅಳವಡಿಸುವಂತೆ ಶಿಕ್ಷಣ ಮಂಡಳಿಗಳಿಗೆ ಸೂಚಿಸುವಂತೆ ಕೋರಿ ಪ್ರಾಧಿಕಾರವು ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದೆ. ಈ ಪುಸ್ತಕವನ್ನು ಶಿಕ್ಷಣ ಸಂಸ್ಥೆಗಳು ಮಾರ್ಗಸೂಚಿಯಂತೆಯೂ ಬಳಸಬಹುದು ಎಂದು ಎಫ್‌ಎಸ್ಎಸ್‌ಎಐ ಸಲಹೆ ಮಾಡಿದೆ.

ಎಫ್‌ಎಸ್ಎಸ್‌ಎಐ ಹೊರತಂದಿರುವ ಈ ಪುಸ್ತಕವು ಆಹಾರ ಸುರಕ್ಷತೆ, ನೈರ್ಮಲ್ಯ, ಗುಣಮಟ್ಟದ ಸಮತೋಲಿತ ಆಹಾರ, ಪೌಷ್ಟಿಕಾಂಶಗಳ ಕೊರತೆ ಇತ್ಯಾದಿ ಉಪಯುಕ್ತ ಮಾಹಿತಿ ಒಳಗೊಂಡಿದೆ.

4ರಿಂದ 7, 8ರಿಂದ 12 ಮತ್ತು 13ರಿಂದ 17 ವರ್ಷದ ಶಾಲಾ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಮೂರು ಪ್ರತ್ಯೇಕ ಆವೃತ್ತಿಗಳನ್ನು ಹೊರತರಲಾಗಿದೆ. ಆರೋಗ್ಯಯುತ ಮತ್ತು ಪೌಷ್ಟಿಕ ಆಹಾರ ಸೇವನೆ ಬಗ್ಗೆ ಅನೇಕ ಕುತೂಹಲಕಾರಿ ಸಲಹೆ, ಸೂಚನೆಗಳನ್ನು ಈ ಪುಸ್ತಕದಲ್ಲಿ ನೀಡಲಾಗಿದೆ.

ಸಿಬಿಎಸ್‌ಇ, ಎನ್‌ಸಿಇಆರ್‌ಟಿಇ ಮತ್ತು ರಾಜ್ಯ ಶಿಕ್ಷಣ ಮಂಡಳಿಗಳ ಜತೆ ಸುದೀರ್ಘ ಸಮಾಲೋಚನೆಯ ನಂತರ ಈ ಪುಸ್ತಕವನ್ನು ಸಿದ್ಧಪಡಿಸಲಾಗಿದೆ. ಆಹಾರ ಮತ್ತು ಶಿಕ್ಷಣ ತಜ್ಞರ ಸಲಹೆ, ಸೂಚನೆಗಳನ್ನು ಅಳವಡಿಸಲಾಗಿದೆ.

ಇದರೊಂದಿಗೆ ಎಫ್‌ಎಸ್ಎಸ್‌ಎಐ, ಭಾರತೀಯ ಕುಟುಂಬಗಳು ಮತ್ತು ರೆಸ್ಟೋರೆಂಟ್‌ಗಳಿಗಾಗಿ ಆಹಾರ ಸುರಕ್ಷತೆ, ಪೌಷ್ಟಿಕ ಆಹಾರದ ಬಗ್ಗೆ ಮಾಹಿತಿ ಒಳಗೊಂಡಿರುವ ‘ಪಿಂಕ್’, ’ಪರ್ಪಲ್’ ಮತ್ತು ‘ಆರೇಂಜ್’ ಪುಸ್ತಕಗಳನ್ನು ಪ್ರಕಟಿಸಿದೆ.

ಮಕ್ಕಳ ಊಟದ ಡಬ್ಬಿಯಲ್ಲಿ ಏನಿರಬೇಕು?

ಆನ್‌ಲೈನ್‌ನಲ್ಲಿ ಫುಡ್ ಆರ್ಡರ್

ಶಾಲೆ, ಕಾಲೇಜು ಅಥವಾ ಮನೆಯ ಬಳಿ ಜಂಕ್ ಫುಡ್ ಸಿಗದಿದ್ದರೆ ಆನ್‌ಲೈನ್‌ನಲ್ಲಿ ಖರೀದಿ ಮಾಡುವವರ ಸಂಖ್ಯೆ ಹೆಚ್ಚಿದೆ. ಆರಂಭದಲ್ಲಿ ಕಡಿಮೆ ಬೆಲೆಗೆ ಸೇವೆ ಒದಗಿಸುವ ಮೂಲಕ ಯುವಕ, ಯುವತಿಯರನ್ನು ಆನ್‌ಲೈನ್ ಮಾರುಕಟ್ಟೆಗಳು ಆಕರ್ಷಿಸುತ್ತಿದೆ.

ಜೊಮಾಟೊ, ಸ್ವಿಗ್ಗಿ, ಊಬರ್ ಸೇರಿದಂತೆ ವಿವಿಧ ಆ್ಯಪ್ ಆಧಾರಿತ ಮಾರಾಟ ಜಾಲ ಎರಡು ವರ್ಷಗಳಲ್ಲಿ ದುಪ್ಪಟ್ಟಾಗಿದೆ.

ಜೊಮಾಟೊ ಸಂಸ್ಥೆ ಇತ್ತೀಚೆಗೆ ತನ್ನ ವಾರ್ಷಿಕ ವರದಿ ಬಿಡುಗಡೆ ಮಾಡಿತ್ತು. ಇದರ ಪ್ರಕಾರ 15 ನಗರಗಳಲ್ಲಿದ್ದ ವಹಿವಾಟು 213 ನಗರಕ್ಕೆ ವಿಸ್ತರಿಸಿದೆ. ಗ್ರಾಹಕರ ಸಂಖ್ಯೆ ಕೂಡ ದುಪ್ಪಾಟ್ಟಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.