* ನನಗೆ ವಿಪರೀತ ಕುಡಿತದ ಚಟವಿದೆ. ಮನುಷ್ಯನಾಗಿ ಒಳ್ಳೆಯವನೇ ಎಂದುಕೊಳ್ಳುವೆ. ಆದರೆ, ಈ ಚಟ ನನ್ನ ಬಗ್ಗೆ ಕೀಳರಿಮೆ ಮೂಡಿಸಿದೆ. ಜತೆಗೆ ಆಗಾಗ್ಗೆ ಎದುರು ಸಿಕ್ಕ ಹೆಣ್ಣಿನ ದೇಹದ ಅಂಗಾಂಗಗಳನ್ನ ನೋಡುವ ಚಟವಿದೆ. ಇದಕ್ಕೆ ಪರಿಹಾರವೇನು?
–ಹೆಸರು, ಊರು ತಿಳಿಸಿಲ್ಲ

ಉತ್ತರ: ನಿಮ್ಮ ವಯಸ್ಸು ವೃತ್ತಿ ಮುಂತಾದ ವೈಯುಕ್ತಿಕ ವಿವರಗಳಿದ್ದರೆ ಉತ್ತರಿಸುವುದು ಸುಲಭವಾಗುತ್ತಿತ್ತು. ನಿಮಗೆ ಮದ್ಯಪಾನ ಮಾಡಿದಾಗ ಎಂತಹ ಅನುಭವವಾಗುತ್ತದೆ ಎನ್ನುವುದನ್ನು ಗಮನಿಸಿದ್ದೀರಾ? ಒಂದು ರೀತಿಯ ಸ್ವಾತಂತ್ರ್ಯ ಪಡೆದ ಅಥವಾ ಬಿಡುಗಡೆ ಹೊಂದಿದ ಅನುಭವ? ಯಾವುದೋ ಒತ್ತಡವನ್ನು ಕಳೆದುಕೊಂಡಂತಹ ಅಥವಾ ಮರೆಯಲು ಸಾಧ್ಯವಾದಂತಹ ಅನುಭವ? ನೋವು ಅವಮಾನ ಹಿಂಜರಿಕೆ ಮುಂತಾದವುಗಳನ್ನು ತಾತ್ಕಾಲಿಕವಾಗಿ ಮರೆಯಲು ಸಾಧ್ಯವಾಗುವ ಅನುಭವ? ಹೀಗೆ ಮದ್ಯಪಾನ ನಿಮ್ಮ ಅಂತರಂಗದ ಸಮಾಧಾನಕ್ಕೆ ಕೆಲವು ರೀತಿಯಲ್ಲಿ ಸಹಾಯ ಮಾಡುತ್ತಿದೆ. ಅದೇನೆಂದು ಗುರುತಿಸಿದ ಮೇಲೆ ನಿಮಗೆ ಅಂತಹ ಒತ್ತಡಗಳು, ನೋವು, ಸ್ವಾತಂತ್ರ್ಯದ ಕೊರತೆ ಎಲ್ಲಿಂದ ಬರುತ್ತಿದೆ ಎಂದು ಯೋಚಿಸಿ. ಹೊರಗಿನ ಪರಿಸ್ಥಿತಿಗಳು ಅಥವಾ ವ್ಯಕ್ತಿಗಳಿಂದ ನಿಮಗೆ ಆಗುತ್ತಿರುವ ಒತ್ತಡ ನೋವು ಅವಮಾನಗಳನ್ನು ಮರೆಯಲು ಅವುಗಳಿಂದ ದೂರ ಓಡಲು ನೀವು ಮದ್ಯವನ್ನು ಬಿಡುಗಡೆಯ ಮಾರ್ಗವಾಗಿ ಬಳಸಿರುತ್ತೀರಿ. ನಿಧಾನವಾಗಿ ಅದು ನಶೆಯಾಗಿ ಅಂಟಿಕೊಂಡಿರುತ್ತದೆ. ಈಗ ಅದರಿಂದ ಹೊರಬರಲು ಕಷ್ಟವಾಗುತ್ತಿರುತ್ತದೆ. ಹೊರಗಿನ ಯಾವ ಸಂದರ್ಭ ಅಥವಾ ವ್ಯಕ್ತಿಗಳ ಮೇಲೆ ನಮಗೆ ಹಿಡಿತವೇ ಇಲ್ಲದಿರುವಾಗ ನಮ್ಮೊಳಗಿನ ನೋವು ಒತ್ತಡಗಳನ್ನು ನಾವೇ ನಿಭಾಯಿಸುವುದನ್ನು ಕಲಿಯಬೇಕು. ಇದಕ್ಕೆ ಮನೋಚಕಿತ್ಸಕರ ಸಹಾಯದ ಅಗತ್ಯವಿರುತ್ತದೆ. ನೀವೇ ಹೇಳುವಂತೆ ವ್ಯಕ್ತಿಯಾಗಿ ನೀವು ಕೆಟ್ಟವರು ಖಂಡಿತವಾಗಿ ಅಲ್ಲ. ಆದರೆ ಕುಡಿತದ ವ್ಯಸನ ನಿಮ್ಮನ್ನು ಎಲ್ಲರಿಂದ ಮಾನಸಿಕವಾಗಿ ದೂರತಳ್ಳಿ ನಿಮ್ಮ ಬಗೆಗೆ ನಿಮ್ಮೊಳಗೇ ಕೆಟ್ಟ ಅಭಿಪ್ರಾಯಗಳನ್ನು ಮೂಡಿಸುತ್ತಿದೆ. ಇದನ್ನೇ ನೀವು ಕೀಳರಿಮೆ ಎನ್ನುತ್ತಿದ್ದೀರಿ. ಕುಡಿತದ ವ್ಯಸನದಿಂದ ಬಿಡುಗಡೆ ಹೊಂದಲು ಅಗತ್ಯವಿದ್ದರೆ ಹತ್ತಿರದ ಡೀಅಡಿಕ್ಷನ್ ಕೇಂದ್ರಗಳನ್ನು ಸಂಪರ್ಕಿಸಿ. ಮಹಿಳೆಯರ ದೇಹವನ್ನು ಗಮನಿಸುವುದು ಚಟವಲ್ಲ. ನಿಮಗೆ ಲೈಂಗಿಕ ಆಸಕ್ತಿ ಹೆಚ್ಚಾಗುತ್ತಿರುವುದರ ಸೂಚನೆ ಮಾತ್ರ. ಇದು ಪ್ರಕೃತಿ ಸಹಜ. ಆದರೆ ಸಾರ್ವಜನಿಕವಾಗಿ ಮಹಿಳೆಯರ ಅಂಗಾಂಗಗಳನ್ನು ತದೇಕ ಚಿತ್ತದಿಂದ ನೋಡುವುದು ಅವರಿಗೆ ಮತ್ತು ನಿಮಗೆ ಮುಜುಗರ ಉಂಟುಮಾಡುತ್ತದೆ. ಹಾಗಾಗಿ ನಿಮ್ಮ ಜೀವನವನ್ನು ವ್ಯವಸ್ಥಿತವಾಗಿ ರೂಪಿಸಿಕೊಂಡು ಗೌರವದಿಂದ ಲೈಂಗಿಕ ಸುಖವನ್ನು ಪಡೆದುಕೊಳ್ಳುವ ದಾರಿಗಳನ್ನು ಹುಡುಕಿ. ಹತ್ತಿರದಲ್ಲಿ ಆಪ್ತಸಮಾಲೋಚಕರ ಸಹಾಯ ಸಿಗುತ್ತಿದ್ದರೆ ಪಡೆಯಿರಿ.

* ನನಗೆ 17 ವರ್ಷ.ಲೈಂಗಿಕತೆಯ ಮೇಲೆ ತುಂಬಾ ಆಸಕ್ತಿ ಹೆಚ್ಚುತ್ತಿದೆ. ಯಾವ ಕೆಲಸದಮೇಲೂ ಆಸಕ್ತಿಯೇ ಬರುವುದಿಲ್ಲ. ನಾನೂ ಚೆನ್ನಾಗಿ ಓದಿ ಒಳ್ಳೆಯ ಉದ್ಯೋಗ ಪಡೆಯಬೇಕೆಂಬ ಆಸೆ ಇದೆ. ಯಾವಾಗಲೂ ಫೋನಿನಲ್ಲಿ ಪೋರ್ನ್ ವಿಡಿಯೋಗಳನ್ನೇ ನೋಡಬೇಕೆಂಬ ಬಯಕೆ ಹೆಚ್ಚುತ್ತಿದೆ. ಇದನ್ನು ನಿಯಂತ್ರಿಸುವ ಕ್ರಮವನ್ನು ತಿಳಿಸುತ್ತೀರಾ?
-ಹೆಸರು, ಊರು ತಿಳಿಸಿಲ್ಲ

ಉತ್ತರ: ಲೈಂಗಿಕ ಆಸಕ್ತಿ ವಯೋಸಹಜ. ಆದರೆ ಸುಲಭವಾಗಿ ಸಿಗುವ ಪೋರ್ನ್ ವಿಡಿಯೋಗಳನ್ನು ನಿಮ್ಮೊಳಗಿರುವ ಹಿಂಜರಿಕೆ ಕೀಳರಿಮೆ ಆತಂಕ ಮುಂತಾದವುಗಳನ್ನು ಮರೆಯಲು ಬಳಸುತ್ತಿದ್ದೀರಲ್ಲವೇ? ತಕ್ಷಣ ಎಲ್ಲವನ್ನೂ ಮರೆಸುವ ಲೈಂಗಿಕ ಆಕರ್ಷಣೆ ನಶೆಯ ರೀತಿಯಲ್ಲಿ ಅಂಟಿಕೊಳ್ಳುತ್ತದೆ. ಹಾಗಾಗಿ ಮೊದಲು ನಿಮ್ಮ ಆತಂಕ ಕೀಳರಿಮೆ ಮುಂತಾದವುಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಹತ್ತಿರದಲ್ಲಿ ಮನೋಚಿಕಿತ್ಸಕರ ಸಹಾಯ ಸಿಗಬಹುದೇ ನೋಡಿ. ಇಲ್ಲದಿದ್ದರೆ ನಿಮಗೆ ನಂಬಿಕೆ ಗೌರವವಿರುವ ಒಬ್ಬ ಸ್ನೇಹಿತ ಅಥವಾ ಉಪಾಧ್ಯಾಯರೊಡನೆ ಎಲ್ಲವನ್ನೂ ಹಂಚಿಕೊಳ್ಳಿ. ಪೋರ್ನ್ಗಳತ್ತ ಮನಸ್ಸು ತಿರುಗಿದೊಡನೆ ದೀರ್ಘವಾಗಿ ಉಸಿರಾಡುತ್ತಾ ದೇಹವನ್ನು ಸಡಿಲಬಿಟ್ಟು ಇದು ನನ್ನ ಯಾವ ತೊಂದರೆಗೂ ಪರಿಹಾರವಲ್ಲ ಎಂದು ನೆನಪಿಸಿಕೊಳ್ಳಿ. ಆಗಾಗ ನಿಮ್ಮ ಮನಸ್ಸು ದೇಹಗಳತ್ತ ಗಮನ ಹರಿಸಿ ಬೇಸರ ಆತಂಕಗಳು ತುಂಬಿಕೊಳ್ಳುತ್ತಿರುವುದನ್ನು ಗಮನಿಸಿ. ಭವಿಷ್ಯದ ಅನಿಶ್ಚಿತತೆಯನ್ನು ನಿಧಾನವಾಗಿ ನಿಭಾಯಿಸಲು ಚೆನ್ನಾಗಿ ಓದಿ ಒಳ್ಳೆಯ ಉದ್ಯೋಗ ಪಡೆಯಬೇಕು ಎನ್ನುವುದನ್ನು ಸ್ಪಷ್ಟ ಗುರಿಗಳಾಗಿ ಬದಲಾಯಿಸಿ. ನನ್ನ ಆಸಕ್ತಿಗಳೇನು? ಅವುಗಳಿಗೆ ಎಲ್ಲಿ ಅವಕಾಶವಿದೆ? ಅವುಗಳನ್ನು ಹುಡುಕುವುದು ಹೇಗೆ? ಅದಕ್ಕೆ ಯಾರ ಸಹಾಯ ಪಡೆಯಬೇಕು? ಹೀಗೆ ಎಲ್ಲಾ ವಿಚಾರಗಳ ಕುರಿತು ಹೆಚ್ಚು ಸ್ಪಷ್ಟತೆ ಮೂಡಿಸಿಕೊಳ್ಳಿ. ತಕ್ಷಣದ ಬದಲಾವಣೆ ನಿರೀಕ್ಷಿಸದೆ ನಿಧಾನವಾಗಿ ಪ್ರಯತ್ನಿಸುತ್ತಲೇ ಹೋಗಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.