* 25ರ ಅವಿವಾಹಿತ ಯುವಕ. ನಾನು ಮಹಿಳೆಯರ ಒಳ ಉಡುಪುಗಳನ್ನು ನೋಡಿದರೆ ಉದ್ವೇಗಕ್ಕೆ ಒಳಗಾಗುತ್ತೇನೆ. ಇದು ಸಲಿಂಗ ಕಾಮವೇ ಅಥವಾ ಸಹಜವೇ? ಇದರಿಂದ ಹೊರಬರುವುದು ಹೇಗೆ?
-ಹೆಸರು ಊರು ತಿಳಿಸಿಲ್ಲ

ಸ್ತ್ರೀಯರ ಒಳಉಡುಪುಗಳನ್ನು ನೋಡಿದಾಗ ನಿಮ್ಮೊಳಗೆ ಮೂಡುತ್ತಿರುವುದು ಉದ್ವೇಗವಲ್ಲ, ಉದ್ರೇಕ. ದೈಹಿಕವಾಗಿ ಇವೆರೆಡರಲ್ಲಿಯೂ ಒಂದೇ ಲಕ್ಷಣಗಳಿರುತ್ತವೆ. ನೀವೊಬ್ಬ ಯುವಕನಾಗಿರುವುದರಿಂದ ಮಹಿಳೆಯರ ಒಳಉಡುಪುಗಳಿಂದ ಆಕರ್ಷಿತರಾಗುವುದು ಸಲಿಂಗ ಕಾಮ ಹೇಗಾಗುತ್ತದೆ? ಪುರುಷರ ಬಗೆಗೆ ನಿಮಗೆ ಆಸಕ್ತಿ ಆಕರ್ಷಣೆಯಿದ್ದರೆ ಮಾತ್ರ ಸಲಿಂಗಕಾಮವಾಗುತ್ತದೆ. ಒಬ್ಬೊಬ್ಬರ ಲೈಂಗಿಕ ಆಕರ್ಷಣೆ ಒಂದೊಂದು ರೀತಿಯಾಗಿರಬಹುದು. ಕೆಲವರು ದೇಹದ ಬೇರೆಬೇರೆ ಅಂಗಾಂಗಗಳಿಂದ ಆಕರ್ಷಿತರಾದರೆ, ಇನ್ನು ಕೆಲವರು ಉಡುಪು, ಧ್ವನಿ, ಸುತ್ತಲಿನ ಪರಿಸರ ಮುಂತಾದವುಗಳಿಂದ ಉದ್ರೇಕಗೊಳ್ಳಬಹುದು. ಇದು ಕಾಯಿಲೆಯೇನಲ್ಲ. ಆದರೆ ಉದ್ರೇಕಕಾರಿಯಾಗುವುದನ್ನು ಎಲ್ಲಾ ಸಂದರ್ಭಗಳಲ್ಲಿಯೂ ಹುಡುಕಿಕೊಂಡು ಹೋಗುವ ಒತ್ತಡ ಉಂಟಾಗುತ್ತಿದ್ದರೆ ಮತ್ತು ಅದರ ಹೊರತಾಗಿ ಲೈಂಗಿಕ ಆಕರ್ಷಣೆಯೇ ಮೂಡದಿದ್ದರೆ ನಿಮಗೆ ಸಹಾಯದ ಅಗತ್ಯವಿರುತ್ತದೆ. ಆಕರ್ಷಣೆ ಸಾಮಾಜಿಕ ಮಿತಿಗಳಲ್ಲಿದೆ ಎಂದಾದರೆ ಸದ್ಯಕ್ಕೆ ಆನಂದಿಸಿ. ವಿವಾಹವಾದ ನಂತರ ಸಮಸ್ಯೆಗಳಿದ್ದರೆ ಮಾತ್ರ ಲೈಂಗಿಕ ಮನೋಚಿಕಿತ್ಸಕರನ್ನು ಸಂರ್ಕಿಸಿ.

* ವಿವಾಹಿತ. ಮೂರು ಮಕ್ಕಳಿದ್ದಾರೆ. ದಾಂಪತ್ಯದಲ್ಲಿ ಸಮಸ್ಯೆಗಳಿವೆ. ಎಷ್ಟೇ ಮನವರಿಕೆ ಮಾಡಿಕೊಟ್ಟರೂ ಹೆಂಡತಿ ಬೇಸರದಲ್ಲಿರುತ್ತಾರೆ. ತಾಯಿಯ ಆರೋಗ್ಯ ಸರಿಯಿಲ್ಲದಿರುವುದರಿಂದ ರಾತ್ರಿಯೆಲ್ಲಾ ಅವರ ಬಳಿ ಮಲಗಿರಬೇಕಾಗುತ್ತದೆ. ಮಧ್ಯರಾತ್ರಿ ಸಿಗುವ ಒಂದೆರೆಡು ಗಂಟೆಗಳಲ್ಲಿ ಲೈಂಗಿಕ ಸಂಪರ್ಕಕ್ಕೆ ಪತ್ನಿ ಒಪ್ಪುತ್ತಿಲ್ಲ. ಇದರಿಂದ ನನಗೆ ಬೇಸರವಾಗಿದೆ. ಪರಿಹಾರವೇನು?
-ಹೆಸರು ಇಲ್ಲ, ಬೆಂಗಳೂರು

ನಿಮ್ಮ ಲೈಂಗಿಕ ಅಗತ್ಯಗಳು ಸಹಜವಾದದ್ದು. ಆದರೆ ನಿಮ್ಮ ಸಂಬಂಧದಲ್ಲಿ ಆತ್ಮೀಯತೆಯಿಲ್ಲದೆ ಪತ್ನಿಯ ಸಹಕಾರವನ್ನು ಹೇಗೆ ನಿರೀಕ್ಷಿಸುತ್ತೀರಿ? ಪತ್ನಿಗೆ ಮನವರಿಕೆ ಮಾಡಿಕೊಡುವುದು ಎಂದರೆ ನೀವು ಸರಿ ಎಂದು ತೀರ್ಮಾನಿಸಿಕೊಂಡಿದ್ದನ್ನು ಪತ್ನಿ ಒಪ್ಪಿಕೊಳ್ಳಬೇಕೆಂಬ ನಿರೀಕ್ಷೆಯಲ್ಲವೇ? ಕೇವಲ ಲೈಂಗಿಕ ಸಂಬಂಧದ ಕುರಿತಾಗಿ ಮಾತ್ರವಲ್ಲ, ಕುಟುಂಬಕ್ಕೆ ಸಂಬಂಧಿಸಿದ ಎಲ್ಲಾ ವಿಚಾರಗಳಲ್ಲಿ ಪತ್ನಿಯ ಅಭಿಪ್ರಾಯ ಕೇಳುತ್ತೀರಾ? ಇಬ್ಬರೂ ಗೌರವದಿಂದ ವಿಷಯಗಳನ್ನು ಚರ್ಚೆಮಾಡಿ ಪರಿಹಾರ ಹುಡುಕುತ್ತೀರಾ? ಭಿನ್ನಾಭಿಪ್ರಾಯಗಳಿಂದ ಸಂಬಂಧಗಳು ಹಾಳಾಗುವುದಿಲ್ಲ. ಪರಸ್ಪರ ಮುಕ್ತತೆ, ನಂಬಿಕೆ ಮತ್ತು ಗೌರವವಿಲ್ಲದಿದ್ದಾಗ ಸಂಬಂಧಗಳು ಬಿರುಕು ಬಿಡುತ್ತವೆ. ಆಗ ಕೇವಲ ಲೈಂಗಿಕ ಸುಖಕ್ಕೆ ಮಾತ್ರ ಪತ್ನಿಯ ಸಹಕಾರವನ್ನು ಹೇಗೆ ನಿರೀಕ್ಷಿಸುತ್ತೀರಾ? ಸಂಬಂಧಗಳು ಆತ್ಮೀಯವಾಗಿದ್ದಾಗ ಪತ್ನಿಗೂ ನಿಮಗಿರುವಷ್ಟೇ ಲೈಂಗಿಕ ಸುಖದ ಬಯಕೆಯಿರುತ್ತದೆ. ಹಾಗಾಗಿ ಎಲ್ಲಾ ವಿಚಾರಗಳನ್ನು ಪತ್ನಿಯೊಡನೆ ಮುಕ್ತವಾಗಿ ನೇರವಾಗಿ ಚರ್ಚೆಮಾಡಿ. ಪರಿಹಾರಗಳು ನಿಮ್ಮ ಸಂಬಂಧದಲ್ಲಿಯೇ ಸಿಗುತ್ತದೆ.

* ಯುವಕ. ಪೋಲೀಸ್ ಪರೀಕ್ಷೆಗೆ ಓದುತ್ತಿದ್ದೇನೆ. ನನಗೆ ಮಾತನಾಡುವಾಗ ತೀವ್ರವಾದ ತೊದಲಿನ ಸಮಸ್ಯೆ ಇದೆ. ಅದನ್ನು ಲೆಕ್ಕಿಸದೆ ಮಾತನಾಡಲು ಪ್ರಯತ್ನಿಸಿದರೆ ಉಚ್ಚಾರಣೆ ಸರಿಯಾಗಿರುವುದಿಲ್ಲ. ನಾಲಿಗೆ ದಪ್ಪವಿದ್ದು ಒರಟಾಗಿದೆ. ಗಟ್ಟಿಯಾಗಿ ಮಾತನಾಡಲು ಪ್ರಯತ್ನಿಸಿದರೆ ಗಂಟಲು ನೋವಾಗುತ್ತದೆ. ಇದರಿಂದ ನನ್ನ ಆತ್ಮವಿಶ್ವಾಸ ಕುಸಿಯುತ್ತಿದೆ. ಪರಿಹಾರವೇನು?
-ಹೆಸರು ಊರು ತಿಳಿಸಿಲ್ಲ.

ನಾಲಿಗೆ ದಪ್ಪವಾಗುವುದು ಒರಟಾಗುವುದು ತೊದಲಿನ ಕಾರಣವಲ್ಲ. ಪತ್ರದ ದಾಟಿಯನ್ನು ನೋಡಿದರೆ ನಿಮ್ಮ ಕುರಿತು ನಿಮ್ಮೊಳಗೆ ಸಾಕಷ್ಟು ಹಿಂಜರಿಕೆ, ಕೀಳರಿಮೆಗಳಿವೆ. ಇವೆಲ್ಲವೂ ಆತಂಕದ ರೂಪದಲ್ಲಿ ಹೊರಕಾಣಿ ಸುತ್ತಿದೆ. ನಿಮ್ಮ ಹಿಂಜರಿಕೆಗಳನ್ನು ಗುರುತಿಸಿ ಆತಂಕವನ್ನು ಹಿಡಿತಕ್ಕೆ ತಂದರೆ ತೊದಲು ಪರಿಹಾರವಾಗುತ್ತದೆ. ಮಾತಿನ ವೇಗವನ್ನು ಕಡಿಮೆಮಾಡಿ. ದೀರ್ಘವಾಗಿ ಉಸಿರಾಡುತ್ತಾ ದೇಹವನ್ನು ಸಡಿಲಬಿಡುವ ಅಭ್ಯಾಸಮಾಡಿ. ನಂತರ ನಿಧಾನವಾಗಿ ನೀವು ಹೇಳಬೇಕಾಗಿರುವುದನ್ನು ಹೇಳುತ್ತಾ ಹೋಗಿ. ಇದನ್ನು ದಿನಕ್ಕೆ ಹಲವಾರು ಬಾರಿ ಕನ್ನಡಿಯ ಮುಂದೆ ನಿಂತು ಅಭ್ಯಾಸಮಾಡಿ. ಅಕ್ಷರಗಳ ಮೇಲೆ ಒತ್ತು ನೀಡದಿರುವುದು, ದೇಹ ಮನಸ್ಸುಗಳನ್ನು ಹತೋಟಿಗೆ ತಂದುಕೊಳ್ಳುವುದು ಹೀಗೆ ಹಲವಾರು ವಿಚಾರಗಳ ತರಬೇತಿಯ ಅಗತ್ಯವಿರುತ್ತದೆ. ತಜ್ಞ ಮಾನಸಿಕ ಚಿಕಿತ್ಸಕರ ಅಥವಾ ಜಿಲ್ಲಾ ಆಸ್ಪತ್ರೆಗಳಲ್ಲಿ ದೊರೆಯುವ ವಾಕ್ಶ್ರವಣ ತಜ್ಞರ ಸಹಾಯ ಪಡೆಯಿರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.