ಇಂದು ವಿಶ್ವ ಆಸ್ತಮಾ ದಿನ. ಇಂದು ಆಸ್ತಮಾ ಸಮಸ್ಯೆಯಿಂದ ಸಾಕಷ್ಟು ಜನ ಬಳಲುತ್ತಿದ್ದಾರೆ. ಆಸ್ತಮಾಗೆ ಸೂಕ್ತ ಚಿಕಿತ್ಸೆ ಇಲ್ಲದಿದ್ದರೂ ಸಹ, ಅದರ ನಿರ್ವಹಣೆಯಿಂದ ಆಸ್ತಮಾವನ್ನು ತಡೆಗಟ್ಟಬಹುದು. ಆಸ್ತಮಾವನ್ನು ನಿರ್ಲಕ್ಷಿಸಿದರೆ ಆರೋಗ್ಯದ ಪರಿಸ್ಥಿತಿ ಇನ್ನಷ್ಟು ಹದಗಡೆಲಿದೆ. ಹೀಗಾಗಿ ಆಸ್ತಮಾ ಇರುವವರು ತಮ್ಮ ಜೀವನ ಶೈಲಿಯನ್ನು ಯಾವ ರೀತಿ ಹೊಂದಿರಬೇಕು ಹಾಗೂ ಇರುವ ಚಿಕಿತ್ಸೆಗಳ ಕುರಿತು ವೈದ್ಯರು ಸಲಹೆ ನೀಡಿದ್ದಾರೆ.

ಆಸ್ತಮಾ ಲಕ್ಷಣಗಳು:

ಆಸ್ತಮಾ ಹೊಂದಿರುವರು ವಿಪರೀತ ಕೆಮ್ಮುತ್ತಿರುತ್ತಾರೆ. ಅದರಲ್ಲೂ ರಾತ್ರಿ ಹೊತ್ತು ಈ ಕೆಮ್ಮು ಹೆಚ್ಚಾಗುತ್ತೆ. ಉಸಿರಾಟದ ಸಮಸ್ಯೆ, ಉಬ್ಬಸ, ಎದೆ ಬಿಗಿತ, ಹೆಚ್ಚು ಆಯಾಸ, ದೇಹದಲ್ಲಿ ದೌರ್ಬಲ್ಯ ಮೂಡುವುದು, ವ್ಯಾಯಾಮ ಮಾಡುವಾಗ ಉಸಿರು ಕಟ್ಟಿದಂತಾಗುವುದು, ಶ್ವಾಸಕೋಶ ಸರಿಯಾಗಿ ಕಾರ್ಯ ನಿರ್ವಹಿಸದಿರುವುದು, ಶ್ವಾಸಕೋಶದಲ್ಲಿ ಅಲರ್ಜಿ, ಶೀತದ ಲಕ್ಷಣಗಳು, ಗಂಟಲು ಕಟ್ಟವುದು, ಕಫಾ, ನಿದ್ರಿಸುವಾಗ ಗೊರಕೆ, ತಲೆ ನೋವು, ವೀಸಿಂಗ್ ಸೇರಿದಂತೆ ಇತರೆ ಲಕ್ಷಣಗಳನ್ನು ಒಳಗೊಂಡಿರುತ್ತದೆ.

ಯೋಗವೇ ಪರಿಹಾರ:

ಉಸಿರಾಡುವ ವೇಳೆ ಶ್ವಾಸಕೋಶದಲ್ಲಿ ಆಗುವ ಅಡೆತಡೆಯಿಂದಲೇ ಕೆಮ್ಮು ಹೆಚ್ಚುತ್ತದೆ. ಯಾವಾಗ ಸರಾಗ ಉಸಿರಾಟ ಮಾಡಲು ಸಾಧ್ಯವಾಗುವುದೋ ಆಗ ಆಸ್ತಮಾ ಇರುವವರಿಗೆ ಕ್ರಮೇಣ ಈ ಸಮಸ್ಯೆ ಕಡಿಮೆಯಾಗುತ್ತಾ ಬರಲಿದೆ. ಹೀಗಾಗಿ, ಪ್ರತಿದಿನ ಬೆಳಗ್ಗೆ ಅಥವಾ ಸಂಜೆ ೨೦ ನಿಮಿಷಗಳ ಕಾಲ ಯೋಗ ಅದರಲ್ಲೂ ಪ್ರಾಣಯಾಮ ಮಾಡುವುದು ಅತ್ಯಂತ ಅವಶ್ಯಕ. ಪ್ರಾಣಯಾಮವು ನಿಮ್ಮ ಉಸಿರಾಟದ ಸರಾಗತೆಯನ್ನು ಹಾಗೂ ಶ್ವಾಸಕೋಶದ ಕಾರ್ಯವನ್ನು ಸುಲಭಗೊಳಿಸಲಿದೆ. ಜೊತೆಗೆ, ಒಂದಷ್ಟು ಯೋಗಾಭ್ಯಾಸ ಕೂಡ ನಿಮ್ಮ ದೇಹವನ್ನು ಪ್ರಶಾಂತವಾಗಿಡಲಿದೆ.

ವ್ಯಾಯಾಮವಿರಲಿ:

ಕೆಲವರಿಗೆ ಯೋಗ ಮಾಡುವ ತಾಳ್ಮೆ ಇರುವುದಿಲ್ಲ. ಅಂಥವರು ತಮಗೆ ಮೆಚ್ಚುಗೆ ಎನಿಸುವ ದೈಹಿಕ ಚಟುವಟಿಕೆ ನಿಭಾಯಿಸಬಹುದು. ಈಜು, ವಾಕಿಂಗ್, ಸೈಕ್ಲಿಂಗ್, ಜಾಕಿಂಗ್, ಬ್ಯಾಡ್‌ಮಿಂಟನ್, ಜಿಮ್ ಹೀಗೆ ಯಾವುದಾದರೊಂದು ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ.

ಅಲರ್ಜಿಯನ್ನು ನಿರ್ಲಕ್ಷಿಸಬೇಡಿ:

ಆಸ್ತಮಾ ರೋಗಿಗಳನ್ನು ಕಾಡುವ ಅತಿದೊಡ್ಡ ಸಮಸ್ಯೆ ಎಂದರೆ, ಅದು ಅಲರ್ಜಿ. ಹೆಚ್ಚು ಧೂಳು, ಪ್ರದೂಷಣೆ ಇರುವ ಜಾಗದಲ್ಲಿ ಉಸಿರಾಟ ಮಾಡಿದಾಗ, ಆ ಧೂಳಿನ ಕಣಗಳು ನಿಮ್ಮ ಶ್ವಾಸಕೋಶ ಸೇರಿ, ಅಲರ್ಜಿ ಉಂಟು ಮಾಡಲಿದೆ. ಇದು ಹೆಚ್ಚು ಕೆಮ್ಮು ಮೂಡುವುದಕ್ಕೆ ದಾರಿ ಮಾಡಿದಂತೆ, ಹೀಗಾಗಿ ಸಾಧ್ಯವಾದಷ್ಟು ಧೂಳು ಇರುವ ಕಡೆ ಓಡಾಡ ಕಡಿಮೆ ಮಾಡಿ ಅಥವಾ ಮಾಸ್ಕ್ ಧರಿಸುವುದು ಮರೆಯದಿರಿ. ಇನ್ನೂ ಕೆಲವರು, ಸಾಕುಪ್ರಾಣಿಗಳನ್ನು ಹೆಚ್ಚಾಗಿ ಮುದ್ದಿಸುತ್ತಾರೆ, ಪ್ರಾಣಿಗಳು ಕೂದಲು ಸಹ ಅಲರ್ಜಿ ಉಂಟು ಮಾಡುವ ಸಾಧ್ಯತೆ ಇದೆ. ಹೀಗಾಗಿ ಸಾಕು ಪ್ರಾಣಿ, ಮಲಗುವ ಹೊದಿಕೆ ಇದರಲ್ಲಿ ಫೆದರ್ ಇಲ್ಲದೇ ಇರುವುದನ್ನು ಆಯ್ಕೆ ಮಾಡಿಕೊಳ್ಳಿ.

ಧೂಮಪಾನ ತ್ಯಜಿಸಿ:

ಧೂಮಪಾನ ಆಸ್ತಮಾ ಬರುವಿಕೆಗೆ ಒಂದು ಕಾರಣವೂ ಹೌದು. ಧೂಮಪಾನದಲ್ಲಿರುವ ನಿಕೋಟಿನ್‌ನಿಂದ ಶ್ವಾಸಕೋಶ ತನ್ನ ಆರೋಗ್ಯ ಕಳೆದುಕೊಳ್ಳಲಿದೆ. ಇದರಿಂದ ಶ್ವಾಸಕೋಶ ಅಲರ್ಜಿ, ಕೆಮ್ಮು ಸೇರಿದಂತೆ ಹಲವು ರೀತಿಯ ಆರೋಗ್ಯ ಸಮಸ್ಯೆಗೆ ಕಾರಣವಾಗಲಿದೆ. ಹೀಗಾಗಿ ಪ್ರಮೇಣ ಧೂಮಪಾನ ಸೇದುವುದು ಹಾಗೂ ಸೇದುವವರ ಬಳಿ ನಿಲ್ಲುವುದನ್ನು ಕಡಿಮೆ ಮಾಡಿ,

ಔಷಧಿ ತೆಗೆದುಕೊಳ್ಳಿ:

ಕೆಲವರಿಗೆ ಆಸ್ತಮಾ ಹೆಚ್ಚಿನ ಪ್ರಮಾಣದಲ್ಲಿ ಸಮಸ್ಯೆ ಉಂಟು ಮಾಡುತ್ತಿದ್ದರೆ, ವೈದ್ಯರು ಸೂಚಿಸಿದ ಔಷಧಿಗಳನ್ನು ನಿರ್ಲಕ್ಷಿಸಬೇಡಿ. ಕೆಲವೊಮ್ಮೆ ವಾತಾವರಣದ ಮೇಲೂ ನಿಮ್ಮ ಉಸಿರಾಟದ ಮೇಲೆ ಸಮಸ್ಯೆ ಆಗಬಹುದು, ಹೀಗಾಗಿ ಸದಾ ಇನ್‌ಹೇಲರ್‌ನನ್ನು ಜೊತೆಯಲ್ಲಿಯೇ ಇಟ್ಟುಕೊಳ್ಳಿ.

ಮನೆಯ ವಾತಾವರಣ ಚೆನ್ನಾಗಿಲಿ:

ಇನ್ನು, ಮನೆಯಲ್ಲಿನ ಸಣ್ಣ ಕಣಗಳಿಂದಲೂ ಉಸಿರಾಟದ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ಏರ್‌ಫಿಲ್ಟರ್ ಬಳಸುವುದು ಕಡಿಮೆ ಮಾಡಿ, ಮನೆಯನ್ನು ಸ್ವಚ್ಛವಾಗಿಡಿ, ಗಾಢ ಸುವಾಸನೆ ಇರುವ ರಾಸಾಯನಿಗಳನ್ನು ಬಳಸದಿರಿ. ಇದು ನಿಮ್ಮ ಉಸಿರಾಟವನ್ನು ನಿರ್ಮಲವಾಗಿಡಲಿದೆ.

ಆರೋಗ್ಯಕರ ಆಹಾರವನ್ನು ಸೇವಿಸಿ

ಸಂಸ್ಕರಿಸಿದ ಆಹಾರಗಳು ಮತ್ತು ಸಕ್ಕರೆ ಪಾನೀಯಗಳನ್ನು ಸೀಮಿತಗೊಳಿಸುವುದು ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಉತ್ತಮ. ಇದು ಅಸ್ತಮಾದ ತೀವ್ರತೆಯನ್ನು ಕಡಿಮೆ ಮಾಡುತ್ತದೆ.

–ಡಾ ವಿವೇಕ್ ಆನಂದ್ ಪಡೆಗಲ್, ನಿರ್ದೇಶಕರು - ಶ್ವಾಸಕೋಶಶಾಸ್ತ್ರ, ಫೋರ್ಟಿಸ್ ಆಸ್ಪತ್ರೆ,

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.