ಆರೋಗ್ಯಕ್ಕೂ, ರುಚಿಗೂ ವಿಧವಿಧ ಕಷಾಯ
ಕಾಫಿ, ಚಹಾದ ಬದಲು ಕಷಾಯ ಕುಡಿದರೆ ಆರೋಗ್ಯ ಸುಧಾರಿಸುತ್ತದೆ ಎಂಬುದು ಅನೇಕರ ಅಭಿಪ್ರಾಯ. ಅದು ಸತ್ಯವೂ ಹೌದು. ಇತ್ತೀಚೆಗೆ ಅನೇಕ ಕಾಫಿ, ಚಹಾದ ಮಳಿಗೆಗಳಲ್ಲೂ ಕಷಾಯ ಕಾಣಿಸುತ್ತಿದೆ. ಇದು ಎಲ್ಲರೂ ದಿನನಿತ್ಯ ಕುಡಿಯಬಹುದಾದ ಕಷಾಯ. ಆದರೆ ಮನೆಯಂಗಳದಲ್ಲಿ ಬೆಳೆದಿರುವ ಗಿಡಗಳ ಎಲೆ, ಬೇರುಗಳಿಂದ ಹಾಗೂ ಸದಾ ಅಡುಗೆಮನೆಯಲ್ಲಿ ಸಿಗುವ ಪದಾರ್ಥಗಳಿಂದ ಕಷಾಯ ತಯಾರಿಸಿ ಆಯಾ ಕಾಲಕ್ಕೆ ಬರುವ ಚಿಕ್ಕಪುಟ್ಟ ಆರೋಗ್ಯ ಸಮಸ್ಯೆ ಹೋಗಲಾಡಿಸಬಹುದು. ಮಳೆಗಾಲದಲ್ಲಿ ಸಾಮಾನ್ಯವಾಗಿ ಕಾಡುವ ನೆಗಡಿ, ಜ್ವರ, ಗಂಟಲು ನೋವು ಇತ್ಯಾದಿ ಸಮಸ್ಯೆಗಳಿಗೆ ಕಷಾಯವೇ ಪರಿಹಾರ ಎನ್ನುತ್ತಾರೆ ಸುಧಾ ಎಚ್.ಎಸ್.Last Updated 5 ಜುಲೈ 2019, 19:30 IST