ನವದೆಹಲಿ: ಅಸುರಕ್ಷಿತ ಆಹಾರ ಸೇವನೆಯಿಂದ ವಿಶ್ವದಲ್ಲಿ ವಾರ್ಷಿಕ 4.20 ಲಕ್ಷ ಜನರು ಮೃತಪಡುತ್ತಿದ್ದರೆ, 60 ಕೋಟಿಗೂ ಹೆಚ್ಚು ಆಹಾರ ಸಂಬಂಧಿತ ಅನಾರೋಗ್ಯ ಪ್ರಕರಣಗಳು ದಾಖಲಾಗುತ್ತಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಪ್ರಧಾನ ನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಹೇಳಿದ್ದಾರೆ.

ಜಾಗತಿಕ ಆಹಾರ ನಿಯಂತ್ರಕರ ಸಮ್ಮೇಳನದಲ್ಲಿ ಶುಕ್ರವಾರ ಎರಡನೇ ದಿನದ ಕಾರ್ಯಕ್ರಮದಲ್ಲಿ ವಿಡಿಯೊ ಸಂದೇಶದಲ್ಲಿ ಅವರು ಈ ಮಾಹಿತಿ ನೀಡಿದ್ದಾರೆ.

ಹವಾಮಾನ ಬದಲಾವಣೆ, ಜನಸಂಖ್ಯಾ ಬೆಳವಣಿಗೆ, ಹೊಸ ತಂತ್ರಜ್ಞಾನ, ಜಾಗತೀಕರಣ, ಕೈಗಾರಿಕೀಕರಣದಿಂದ ಆಹಾರ ವ್ಯವಸ್ಥೆಯು ಹೆಚ್ಚು ಸವಾಲುಗಳನ್ನು ಎದುರಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಅಸುರಕ್ಷಿತ ಆಹಾರ ಸೇವನೆಯಿಂದ ಮೃತಪಡುವವರ ಪೈಕಿ ಐದು ವರ್ಷದೊಳಗಿನ ಮಕ್ಕಳ ಸಂಖ್ಯೆ ಶೇ 70ರಷ್ಟಿದೆ ಎಂದು ಹೇಳಿದ್ದಾರೆ.

ವಿಶ್ವದಲ್ಲಿ 30 ಲಕ್ಷಕ್ಕೂ ಹೆಚ್ಚಿನ ಜನರು ಪೌಷ್ಟಿಕ ಆಹಾರ ಪಡೆಯಲು ಸಾಧ್ಯವಾಗುತ್ತಿಲ್ಲ. ಇಂತಹ ಜಾಗತಿಕ ಸವಾಲು ಎದುರಿಸುವಲ್ಲಿ ಆಹಾರ ನಿಯಂತ್ರಕ ಸಮುದಾಯದ ಪಾತ್ರ ಮಹತ್ವದ್ದಾಗಿದೆ. ಎಲ್ಲರಿಗೂ ಸುರಕ್ಷಿತ ಆಹಾರ ನೀಡಲು ಎಲ್ಲ ದೇಶಗಳ ಸಹಕಾರ ಅಗತ್ಯವಾಗಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.