ದಿನ ಭವಿಷ್ಯ: ಸಹೋದ್ಯೋಗಿಗಳ ಮಾತಿನಂತೆ ನಡೆದುಕೊಳ್ಳುವುದು ಉತ್ತಮ
Published 26 ನವೆಂಬರ್ 2024, 23:43 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಮನೆಯಲ್ಲಿ ನಡೆಯಬೇಕಾಗಿರುವ ಕಾರ್ಯಕ್ರಮಗಳ ಬಗ್ಗೆ ಒಡ ಹುಟ್ಟಿದವರೊಡನೆ ಗಹನ ಮಾತುಕತೆ ನಡೆಯಲಿದೆ. ಪರಿಶ್ರಮದಿಂದ ಫಲ ಸಿಗಲಿಲ್ಲವೆಂದು ಬೇಸರಪಟ್ಟುಕೊಳ್ಳುವ ಅಗತ್ಯವಿಲ್ಲ.
ವೃಷಭ
ಮಕ್ಕಳನ್ನು ಶಿಕ್ಷೆಗೆ ಒಳಪಡಿಸದೆ ನಯವಾದ ಮಾತುಗಳಿಂದ ತಿದ್ದುವ ಪ್ರಯತ್ನ ಮಾಡಿ. ತಂದೆಯ ಅನಾರೋಗ್ಯದಿಂದ ದಿನಚರಿಯಲ್ಲಿ ಕೆಲವೊಂದು ಬದಲಾವಣೆಯಾಗಬಹುದು.
ಮಿಥುನ
ಧಾರ್ಮಿಕ ಕಾರ್ಯದಲ್ಲಿ ಭಾಗವಹಿಸುವುದರಿಂದ ಮಾನಸಿಕ ಶಾಂತಿ ಹೆಚ್ಚಾಗಲಿದೆ. ಉದಾರ ಮನೋಭಾವ ಅನುಕೂಲ ಒದಗಿಸಲಿದೆ. ಸಹೋದ್ಯೋಗಿಗಳ ಮಾತಿನಂತೆ ನಡೆದುಕೊಳ್ಳುವುದು ಉತ್ತಮ.
ಕರ್ಕಾಟಕ
ಆಲಂಕಾರಿಕ ವಸ್ತುಗಳ ಮಾರಾಟಗಾರರು ಉತ್ತಮ ಸಂಪಾದನೆಯಿಂದ ನೆಮ್ಮದಿ ಕಾಣಬಹುದು. ವಿದೇಶದಿಂದ ಸ್ನೇಹಿತರ ಆಗಮನ ಸಂತೋಷ ತರಲಿದೆ. ಸಹೋದರರೊಂದಿಗೆ ಕಾಲ ಕಳೆಯುವಿರಿ.
ಸಿಂಹ
ಸುಖ-ದುಃಖ, ನೋವು, ಅನಾರೋಗ್ಯ, ಲಾಭ-ನಷ್ಟಗಳ ಮಿಶ್ರಫಲವನ್ನು ಅನುಭವಿಸಬೇಕಾಗುತ್ತದೆ. ಆರ್ಥಿಕತೆಯಲ್ಲಿ ಅಗೌರವವಾಗುವ ಸನ್ನಿವೇಶ ಎದುರಾಗಿ ಕೊನೆಯ ಕ್ಷಣದಲ್ಲಿ ಹಣಕಾಸಿನ ಹೊಂದಿಕೆಯಾಗುವುದು.
ಕನ್ಯಾ
ಕುಟುಂಬದ ಸದಸ್ಯರಲ್ಲಿ ಮೂಡಿರುವ ಮನಸ್ತಾಪವನ್ನು ಮುಕ್ತ ಮನಸ್ಸಿನ ಮಾತುಕತೆಗಳಿಂದ ಸರಿಪಡಿಸಿಕೊಳ್ಳಬಹುದು. ನುರಿತವರ ಸಲಹೆ ಸೂಚನೆಗಳನ್ನು ವ್ಯವಹಾರದಲ್ಲಿ ಅಳವಡಿಸಿಕೊಳ್ಳುವುದು ಉತ್ತಮ.
ತುಲಾ
ಭವಿಷ್ಯದ ಯೋಜನೆಗಳಿಗೆ ಗಮನ ಕೊಡುವುದರಿಂದ ಗುರಿ ತಲುಪಲು ಸುಲಭವಾಗುವುದು. ಗಂಟಲು ಬೇನೆ ಕಾಣಿಸಿಕೊಂಡಲ್ಲಿ ಗಿಡಮೂಲಿಕೆಗಳ ಬಳಕೆಯಿಂದ ಶಮನವಾಗುವುದು. ಗಣೇಶನ ಧ್ಯಾನ ಶುಭ ತರಲಿದೆ.
ವೃಶ್ಚಿಕ
ನಿವೇಶನ ಮಾರಾಟದಿಂದ ಲಾಭ ಪಡೆಯುವಿರಿ. ಇದರಿಂದ ಹಣಕಾಸಿನ ಬಗೆಗಿನ ಚಿಂತೆಗಳು, ಸಾಲವು ದೂರವಾಗಿ ಆರ್ಥಿಕವಾಗಿ ವೃದ್ಧಿ ಕಾಣಲಿದ್ದೀರಿ. ನ್ಯಾಯಾಂಗ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯಲ್ಲಿ ಪ್ರಗತಿ.
ಧನು
ಪೂರ್ವ ನಿಯೋಜಿತ ಕೆಲಸಗಳನ್ನು ಉತ್ತಮವಾಗಿ ನೆರವೇರಿಸುವುರಿಂದ ನೆಮ್ಮದಿ ಇರುವುದು. ಮಹಿಳೆಯರಿಗೆ ಆದರ , ಮನ್ನಣೆ ಹೆಚ್ಚಲಿದ್ದು, ರಾಜಕೀಯವಾಗಿ ಲಾಭ ಪಡೆದುಕೊಳ್ಳುವಿರಿ.
ಮಕರ
ತೋಟದ ಕೆಲಸ ಮಾಡಬೇಕಾದ ಸಂದರ್ಭದಲ್ಲಿ ವಿಷಜಂತುಗಳ ಅಥವಾ ಕಾಡುಪ್ರಾಣಿಗಳಿಂದ ತೊಂದರೆ ಆಗಬಹುದು. ವಿದ್ಯಾರ್ಥಿಗಳಿಗೆ ಪ್ರತಿಭಾ ಪ್ರದರ್ಶನಕ್ಕೆ ಬೇಕಾದ ಅವಕಾಶಗಳು ಅರಸಿ ಬರಲಿವೆ. ಬಳಸಿಕೊಳ್ಳಿ.
ಕುಂಭ
ಸಹೋದ್ಯೋಗಿಗಳ ಮಾತಿನಿಂದ ಭಿನ್ನಾಭಿಪ್ರಾಯಗಳು ಸೃಷ್ಟಿಯಾಗುತ್ತವೆ. ನಿವೇಶನ ಖರೀದಿಸುವ ಬಗ್ಗೆ ಮನೆಯವರೊಂದಿಗೆ ಚರ್ಚೆ ಮಾಡುವಿರಿ. ಎಲೆಕ್ಟ್ರಿಕಲ್ ವಸ್ತುಗಳ ರಿಪೇರಿ, ಮಾರಾಟದಿಂದ ವರಮಾನ ಗಳಿಸುವಿರಿ.