ನಾರ್ತ್ ಸೌಂಡ್, ಆ್ಯಂಟಿಗುವಾ ಮತ್ತು ಬಾರ್ಬುಡಾ: ಆತಿಥೇಯ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ ಬಾಂಗ್ಲಾದೇಶ ತಂಡವನ್ನು 201 ರನ್ಗಳಿಂದ ಮಣಿಸಿ ಮಂಗಳವಾರ ಮೊದಲ ಟೆಸ್ಟ್ ಗೆದ್ದುಕೊಂಡಿದೆ. ಬಾಂಗ್ಲಾದ ತಂಡದ ಶೋರಿಫುಲ್ ಇಸ್ಲಾಮ್ ಗಾಯಗೊಂಡು ನಿವೃತ್ತಿ ಘೋಷಿಸುತ್ತಿದ್ದಂತೆ ಆತಿಥೇಯರು ಸಂಭ್ರಮಿಸಿದರು. 334 ರನ್ಗಳ ಸವಾಲಿನ ಗುರಿ ನ್ನತ್ತಿದ ಬಾಂಗ್ಲಾದೇಶ ಹಿಂದಿನ ದಿನ 7 ವಿಕೆಟ್ ನಷ್ಟಕ್ಕೆ 109 ರನ್ ಗಳಿಸಿ ಸಂಕಷ್ಟದಲ್ಲಿ ಸಿಲುಕಿತ್ತು.

ಬಾಂಗ್ಲಾದ ಜೇಕರ್ ಅಲಿ ಮತ್ತು ಹಸನ್ ಮೊಹಮೂದ್ ವೇಗಿ ಅಲ್ಝಾರಿ ಜೋಸೆಫ್ಗೆ ವಿಕೆಟ್ ಒಪ್ಪಿಸಿದರು.ಜೇಕರ್

ಜೇಕರ್ ಮೊದಲ ಇನ್ನಿಂಗಸ್ನಲ್ಲಿ ಅರ್ಧ ಶತಕ ಹೊಡೆದಿದ್ದರು. ಆದರೆ ಎರಡನೆ ಇನ್ನಿಂಗ್ಸ್ ನಲ್ಲಿ ಶೂನ್ಯಕ್ಕೆ ಪೆವಿಲಿಯನ್ ಸೇರಿದರು.

ವೆಸ್ಟ್ ಇಂಡೀಸ್ ಪರ ಕೆಮರ್ ರೋಚ್ (3–20), ಜೇಡನ್ ಸೀಲ್ಸ್ (3–45) ಸೊಗಸಾಗಿ ಬೌಲಿಂಗ್ ದಾಳಿ ನಡೆಸಿದರು. ವೆಸ್ಟ್ ಇಂಡೀಸ್ ತಂಡ ಸರಣಿಯಲ್ಲಿ 1–0 ಮುನ್ನಡೆ ಪಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.