ನೊಯ್ಡಾ: ಸ್ಫೂರ್ತಿದಾಯಕ ಆಟವಾಡಿದ ತಮಿಳ್ ತಲೈವಾಸ್ ತಂಡ ಮಂಗಳವಾರ ನಡೆದ ಪ್ರೊ ಕಬಡ್ಡಿ ಲೀಗ್ ಪಂದ್ಯದಲ್ಲಿ ಯು.ಪಿ. ಯೋಧಾಸ್ ತಂಡವನ್ನು 40–26ರಲ್ಲಿ 14 ಅಂಕಗಳಿಂದ ಸೋಲಿಸಿತು.

ಇದರೊಂದಿಗೆ ತಲೈವಾಸ್ ಗೆಲುವಿನ ಹಳಿಗೆ ಮರಳಿತು. ಮತ್ತೊಂದೆಡೆ ಯೋಧಾಸ್, ಸತತ ನಾಲ್ಕು
ಪಂದ್ಯಗಳ ನಂತರ ಮೊದಲ ಸೋಲಿಗೆ ಗುರಿಯಾಯಿತು. ಯೊಧಾಸ್ ತಂಡದ ಪರ ಗಗನ್ ಗೌಡ ಗರಿಷ್ಠ 8 ಅಂಕಗಳನ್ನು ಗಳಿಸಿದರೆ, ಅಶು ಸಿಂಗ್ 5 ಅಂಕಗಳ ಕೊಡುಗೆ ನೀಡಿದರು.

ತಲೈವಾಸ್ ತಂಡದ ಪರ ಮೋಯಿನ್ ಮತ್ತು ನಾಯಕ ನರೇಂದರ್ ಕಂಡೋಲಾ ಕ್ರಮವಾಗಿ 8 ಮತ್ತು 6 ಅಂಕಗಳ ಅಮೂಲ್ಯ ಕಾಣಿಕೆ ನೀಡಿದರು.

ಪಂದ್ಯ ಸಮಬಲ: ಡೆಲ್ಲಿ ದಬಾಂಗ್ ಮತ್ತು ಪಟ್ನಾ ಪೈರೇಟ್ಸ್ ನಡುವಣ ನಡೆದ ದಿನದ ಎರಡನೇ ಪಂದ್ಯ 39–39ರಲ್ಲಿ ಟೈ ಆಯಿತು. ಪೈರೇಟ್ಸ್ ಪರ ದೇವಾಂಕ್ 15 ಅಂಕ ಗಳಿಸಿದರೆ, ದಬಾಂಗ್ ಪರ ಆಶು ಮಲಿಕ್ 11 ಅಂಕ ಸಂಪಾದಿಸಿದರು.

ಬುಧವಾರದ ಪಂದ್ಯಗಳು: ಹರಿಯಾಣ ಸ್ಟೀಲರ್ಸ್– ಪುಣೇರಿ ಪಲ್ಟನ್ (ರಾತ್ರಿ 8.00); ಬೆಂಗಾಲ್ ವಾರಿಯರ್ಸ್ ಮತ್ತು ಗುಜರಾತ್ ಜೈಂಟ್ಸ್ (ರಾತ್ರಿ 9)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.