ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ಮಾಸ ಭವಿಷ್ಯ | ಆಗಸ್ಟ್ 2024: ಈ ರಾಶಿಯ ನಿರುದ್ಯೋಗಿಗಳಿಗೆ ಉದ್ಯೋಗ ಸಿಗಲಿದೆ
Published 1 ಆಗಸ್ಟ್ 2024, 0:30 IST
ಅರುಣ ಪಿ.ಭಟ್ಟ
ಮೇಷ
ವಿವೇಚನೆಯಿಂದಿರಿ. ಕೆಲವರ ಮಾತನ್ನು ನಂಬಿ ವ್ಯವಹಾರದಲ್ಲಿ ನಷ್ಟವಾಗಬಹುದು, ಎಚ್ಚರವಿರಲಿ. ಸಹೋದರರ ವಿಶ್ವಾಸ ಗಳಿಸಿ. ಬಹುಕಾಲದ ವ್ಯಾಜ್ಯಗಳಿಗೆ ಪರಿಹಾರ ದೊರಕಲಿದೆ. ಸಂಗಾತಿ ಮಕ್ಕಳ ಜತೆಗಿನ ಬಾಂಧವ್ಯ ಉತ್ತಮವಾಗಿರುತ್ತದೆ. ದಾಖಲೆ ಪತ್ರಗಳ ಬಗ್ಗೆ ಎಚ್ಚರವಿರಲಿ. ಶುಭ: 10,16,20 ಅಶುಭ: 11,19,24.
ವೃಷಭ
ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶಗಳು ಕಂಡುಬರಲಿವೆ. ಕಷ್ಟದ ಕಾರ್ಯಗಳನ್ನೂ ಅನಾಯಾಸವಾಗಿ ಮಾಡಿ ಮುಗಿಸಲಿದ್ದೀರಿ. ಕುಟುಂಬದಲ್ಲಿ ಶುಭಸುದ್ದಿ. ಅವಿವಾಹಿತರಿಗೆ ವಿವಾಹ ಯೋಗ. ವೈಯಕ್ತಿಕ ಜೀವನದಲ್ಲಿ ಭಿನ್ನಾಭಿಪ್ರಾಯ, ತಾಳ್ಮೆಯಿಂದ ವ್ಯವಹರಿಸಿ. ಶುಭ: 14,19,26 ಅಶುಭ: 12,18,28.
ಮಿಥುನ
ಆತ್ಮೀಯ ವ್ಯಕ್ತಿಗಳೊಡನೆ ವಿವಾದಗಳು, ಭೂಮಿಗೆ ಸಂಬಂಧಪಟ್ಟ ವ್ಯಾಜ್ಯಗಳು ನೆಮ್ಮದಿ ಕೆಡಿಸಬಹುದು. ಅನಗತ್ಯ ಮಾತುಗಳನ್ನು ತಪ್ಪಿಸಿ. ಕೆಲಸದ ಸ್ಥಳದಲ್ಲಿನ ಸಮಸ್ಯೆಗಳನ್ನು ಆ ಕ್ಷಣದಲ್ಲೇ ಬಗೆಹರಿಸಿ. ಒತ್ತಡ, ಖಿನ್ನತೆ ಕಾಣಿಸಿಕೊಳ್ಳಬಹುದು, ದೈಹಿಕ–ಮಾನಸಿಕ ಚೈತನ್ಯ ಕಾಪಾಡಿಕೊಳ್ಳಿ. ಶುಭ: 10,14,27 ಅಶುಭ: 12,16,29.
ಕರ್ಕಾಟಕ
ಧನಾಗಮನ ಸರಾಗವಾಗಲಿದೆ. ಲೇವಾದೇವಿ ವ್ಯವಹಾರಗಳಿಂದ ದೂರವಿರುವುದು ಲೇಸು. ಆತ್ಮೀಯರೊಡನೆ ಮನಸ್ತಾಪ ತಪ್ಪಿಸಿ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ. ಮುಂಬರುವ ದಿನಗಳಲ್ಲಿ ಹಲವು ಸಕಾರಾತ್ಮಕ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ. ಶುಭ: 10,13,19 ಅಶುಭ: 12,15,26.
ಸಿಂಹ
ಜನಪ್ರಿಯತೆ ಹೆಚ್ಚಾದಂತೆ ವಿರೋಧಿಗಳು ಹೆಚ್ಚಾಗಲಿದ್ದಾರೆ. ಅಂಥವರನ್ನು ಗುರುತಿಸಿ ಆದಷ್ಟು ದೂರವಿಡುವುದು ಒಳ್ಳೆಯದು. ವೈಯಕ್ತಿಕ ವಿಚಾರಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಸಂಗಾತಿಯ ವಿಚಾರಗಳಿಗೆ ಸಹಮತ ನೀಡಿ. ಆರ್ಥಿಕವಾಗಿ ಸಂತೃಪ್ತಿಯ ದಿನಗಳು. ಶುಭ: 11,15,22 ಅಶುಭ: 10,18,27.
ಕನ್ಯಾ
ಬಹುಮುಖ್ಯ ಕೆಲಸವನ್ನು ಮರೆಯುವ ಸಾಧ್ಯತೆ ಇದೆ. ಅಗತ್ಯ ಕೆಲಸಗಳನ್ನು ಬರೆದಿಟ್ಟುಕೊಳ್ಳಿ. ಹೆಚ್ಚಿನ ಕೆಲಸ ಹಾಗೂ ಹೊಸ ಆದಾಯ ಮಾರ್ಗ ಕಂಡುಬರಲಿದೆ. ಹೊಸ ಉದ್ಯೋಗ ಭರವಸೆಯ ಮಹಾಪೂರವನ್ನೇ ತರಲಿದೆ. ಅನಪೇಕ್ಷಿತ ಖರ್ಚುಗಳಿಗೆ ಕಡಿವಾಣ ಹಾಕಿದರೆ ಒಳ್ಳೆಯದು. ಶುಭ: 12,19,28 ಅಶುಭ: 15,18,29.
ತುಲಾ
ವ್ಯವಹಾರದ ನಿಮಿತ್ತ ತಿರುಗಾಟ ಹೆಚ್ಚಾಗಬಹುದು. ಸಾಲದ ಬಾಧೆ ಸಮಸ್ಯೆಗಳಿಗೆ ಮತ್ತಷ್ಟು ಸಂಕಷ್ಟ ತಂದೊಡ್ಡಲಿದೆ. ವ್ಯವಹಾರದಲ್ಲಿ ಅಲಕ್ಷ್ಯ ಹೆಚ್ಚಾಗಬಹುದು. ನಿಮ್ಮ ದೈನಂದಿನ ವ್ಯವಹಾರಗಳಲ್ಲಿ ಏರಿಳಿತಗಳಾಗುತ್ತವೆ. ನಿಮ್ಮ ಶ್ರಮಕ್ಕೆ ಉತ್ತಮ ಫಲಿತಾಂಶ ಸಿಗಲು ಶುರುವಾಗುತ್ತದೆ. ಶುಭ: 14,16,22 ಅಶುಭ: 15,23,27.
ವೃಶ್ಚಿಕ
ಚರ್ಚಾಕೂಟಗಳಲ್ಲಿ ಪಾಲ್ಗೊಳ್ಳಲಿದ್ದೀರಿ. ನಿರೀಕ್ಷೆಯಂತೆ ಆರ್ಥಿಕವಾಗಿ ಪ್ರಬಲರಾಗುವಿರಿ. ಸ್ವಾವಲಂಬನೆಯ ಚಿಂತನೆ ಮೂರ್ತಸ್ವರೂಪ ಪಡೆಯಲಿದೆ. ತಿಂಗಳ ಮಧ್ಯ ಭಾಗದಲ್ಲಿ ದಿಢೀರ್ ಖರ್ಚಿನ ಪ್ರಮಾಣ ಹೆಚ್ಚಬಹುದು. ತಿಂಗಳ ಅಂತ್ಯದಲ್ಲಿ ಹಲವು ಅವಕಾಶಗಳು ಏಕಕಾಲಕ್ಕೆ ದೊರೆಯುತ್ತವೆ. ಶುಭ: 11,16,20 ಅಶುಭ: 12,19,25.
ಧನು
ಮಾನಸಿಕ ಕ್ಲೇಶಗಳು ಅಭಿವೃದ್ಧಿಗೆ ಮಾರಕವಾಗಬಹುದು. ಕುಟುಂಬದಲ್ಲಿ ಅಶಾಂತಿ. ಕೆಲವು ವ್ಯಕ್ತಿಗಳಿಂದ ನಿಮ್ಮ ಕಾರ್ಯಗಳಲ್ಲಿ ಹಸ್ತಕ್ಷೇಪ ಕಂಡುಬರುತ್ತದೆ. ವ್ಯಾವಹಾರಿಕ ಕ್ಷೇತ್ರದಲ್ಲಿ ಹಿನ್ನಡೆ ಆಗಬಹುದಾದ ಸಾಧ್ಯತೆ ಉಂಟು. ಆರೋಗ್ಯದಲ್ಲಿ ವ್ಯತ್ಯಾಸ ಕಾಣಬಹುದು. ತಾಳ್ಮೆಯಿಂದಿರಿ. ಶುಭ: 10,16,25 ಅಶುಭ: 13,18,29.
ಮಕರ
ಉದ್ಯೋಗದಲ್ಲಿ ಉತ್ತಮ ಸ್ಥಾನಮಾನ ಸಿಗಲಿದೆ. ಸಹವರ್ತಿಗಳು ನಿಮ್ಮ ಯೋಜನೆಗಳಿಗೆ ಬೆಂಬಲ ನೀಡಲಿದ್ದಾರೆ. ಸಾಹಿತ್ಯ ಚಟುವಟಿಕೆಗಳಲ್ಲಿ ಉತ್ತಮ ಮನ್ನಣೆ ಗಳಿಸಲಿದ್ದೀರಿ. ಸರ್ಕಾರಿ ಉದ್ಯೋಗಸ್ಥರಿಗೆ ಬಡ್ತಿ ದೊರೆಯಬಹುದು, ಜೊತೆಗೆ ಜವಾಬ್ದಾರಿಯೂ ಹೆಚ್ಚಬಹುದು. ಶುಭ: 12,16,19 ಅಶುಭ: 16,19,28.
ಕುಂಭ
ಅಪರಿಚಿತ ವ್ಯಕ್ತಿಗಳಿಂದ ನಷ್ಟವಾಗಬಹುದು. ಸಂಗಾತಿಯೊಡನೆ ತಾಳ್ಮೆಯಿಂದಿರಿ. ಹಣಕಾಸಿನ ವಿಷಯದಲ್ಲಿ ಸಮಾಧಾನ ಅಗತ್ಯ. ತಿಂಗಳ ಮಧ್ಯಭಾಗದಲ್ಲಿ ಧಾರ್ಮಿಕ ಕೆಲಸ ಕಾರ್ಯಗಳನ್ನು ಮಾಡಲಿದ್ದೀರಿ. ಇದರಿಂದ ಸಂತೋಷ. ಕುಟುಂಬದವರ ಜತೆಗೆ ಉತ್ತಮ ಬಾಂಧವ್ಯ ಏರ್ಪಡುತ್ತದೆ. ಶುಭ: 11,17,23 ಅಶುಭ: 13,19,26.
ಮೀನ
ಧಾರ್ಮಿಕ ಕೆಲಸ ಕಾರ್ಯಗಳಲ್ಲಿ ನಿಮ್ಮ ಪಾಲ್ಗೊಳ್ಳುವಿಕೆ ಇರಲಿದೆ. ಸ್ನೇಹಿತರ ಜೊತೆಗೆ ಉತ್ತಮ ಬಾಂಧವ್ಯವನ್ನು ಬೆಳೆಸಿಕೊಳ್ಳಲು ಮುಂದಾಗಿ. ಆರ್ಥಿಕ ಸ್ಥಿತಿ ಮಧ್ಯಮ ಗತಿಯಲ್ಲಿ ನಡೆಯಲಿದೆ. ವೈವಾಹಿಕ ಜೀವನ ಸಂತುಷ್ಟವಾಗಿರುತ್ತದೆ. ಚಿಕ್ಕ ಪ್ರವಾಸ. ಶುಭ: 09,18,28 ಅಶುಭ: 12,19,25
ADVERTISEMENT
ADVERTISEMENT