ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
03/11/2024 - 09/11/2024
ವಾರ ಭವಿಷ್ಯ: 10-11-2024ರಿಂದ 16-11-2024 ರವರೆಗೆ– ಧನ ಸಹಕಾರ ಸಿಗಬಹುದು
Published 9 ನವೆಂಬರ್ 2024, 18:31 IST
ಡಾ. ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
author
ಜ್ಯೋತಿಷ್ಯ ವಿಶಾರದ, ಮಾದಾಪುರ ಸಂಪರ್ಕ ಸಂಖ್ಯೆ: 8197304680
ಮೇಷ
ನಿಮ್ಮ ಮನಸ್ಸೆಲ್ಲಾ ಭೂಮಿಯ ವ್ಯವ ಹಾರಗಳಲ್ಲಿ ಕೇಂದ್ರೀಕೃತವಾಗಿರುತ್ತದೆ. ನಿರೀಕ್ಷೆ ಯಷ್ಟು ಆದಾಯ ಇರುತ್ತದೆ. ಬಂಧುಗಳ ಜೊತೆ ವ್ಯವಹಾರಕ್ಕೆ ಸೇರಲು ಆಹ್ವಾನ ಬರಬಹುದು. ಹೊಸ ರೀತಿಯ ಕೃಷಿಗಳಲ್ಲಿ ಆಸಕ್ತಿಯನ್ನು ತಾಳುವಿರಿ. ಈಗ ಅಧ್ಯಯನಶೀಲರಿಗೆ ಮತ್ತು ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಪಡೆ ಯುವ ಯೋಗವಿದೆ. ಜೀರ್ಣಕ್ರಿಯೆ ಸಂಬಂಧಿ ಸಿದ ವ್ಯತ್ಯಾಸಗಳನ್ನು ಕಾಣಬಹುದು. ನಿಮ್ಮ ಸಂಗಾತಿಯು ನಿಮಗೆಬೆಂಗಾವಲಾಗಿನಿಲ್ಲುವರು. ಬಂಧುಗಳಿಂದ ಕೆಲವೊಮ್ಮೆ ಅನಿರೀಕ್ಷಿತವಾಗಿ ವಿರೋಧ ವ್ಯಕ್ತವಾಗುತ್ತದೆ. ಹಿರಿಯರಿಂದ ಸೂಕ್ತ ಸಮಯದಲ್ಲಿ ಧನಸಹಕಾರ ಸಿಗಬಹುದು. ಕಬ್ಬಿಣದ ಮಾರಾಟಗಾರರಿಗೆ ಲಾಭ ಹೆಚ್ಚುತ್ತದೆ.
ವೃಷಭ
ನಿಮ್ಮ ಕೆಲವು ಕೆಲಸಗಳಿಗೆ ಸಮಾಜದಿಂದ ಹೆಚ್ಚು ಗೌರವ ದೊರೆಯುತ್ತದೆ. ಆದಾಯವು ನಿಮ್ಮ ನಿರೀಕ್ಷೆಯ ಹತ್ತಿರ ಬರಬಹುದು. ನಿಮ್ಮ ಬಂಧುಗಳನ್ನು ಓಲೈಸಿಕೊಂಡು ಅವರ ಸಹಕಾರ ಪಡೆಯಲು ಯತ್ನಿಸುವಿರಿ. ಸರ್ಕಾರಿ ಭೂಮಿಯ ವಿಚಾರದಲ್ಲಿ ಸ್ವಲ್ಪ ತಗಾದೆಗಳು ಬರಬಹುದು. ಧರ್ಮವಿದ್ಯೆಯನ್ನು ಕಲಿಯುತ್ತಿರುವರಿಗೆ ಮಾತ್ರ ಹೆಚ್ಚು ಅಭಿವೃದ್ಧಿ ಇರುತ್ತದೆ. ಪದೇ ಪದೇ ತಲೆ ನೋವು ಬರುತ್ತಿದ್ದಲ್ಲಿ ಚಿಕಿತ್ಸೆಗೆ ಹೋಗಿರಿ. ನಿಮ್ಮ ಸಂಗಾತಿವ್ಯವಹಾರಗಳಲ್ಲಿಹೆಚ್ಚುಲಾಭವಿರುತ್ತದೆ. ಕೃಷಿಯಿಂದ ಆದಾಯ ಕಡಿಮೆಯಾಗಬಹುದು. ವಿದೇಶಿ ವ್ಯವಹಾರ ಮಾಡುವವರಿಗೆ ಲಾಭವಿರು ತ್ತದೆ. ಹಿರಿಯರೊಡನೆ ಕೆಲವೊಮ್ಮೆಜಿಜ್ಞಾಸೆಗಳು ಮೂಡಬಹುದು.
ಮಿಥುನ
ನಿಮ್ಮ ನಿರ್ಧಾರಗಳಲ್ಲಿ ಆಗುವ ವ್ಯತ್ಯಾಸ ಗಳು ನಿಮ್ಮ ಆದಾಯದ ಮೇಲೆ ಪರಿಣಾಮ ಬೀರುತ್ತವೆ. ಆದಾಯವು ಸಾಮಾನ್ಯ ಗತಿಯಲ್ಲಿ ರುತ್ತದೆ. ನಿಮ್ಮ ಹಿರಿಯರು ನಿಮಗೆ ಸಾಕಷ್ಟು ಸಹಕಾರ ಕೊಡುವವರು. ಆಸ್ತಿ ವ್ಯವಹಾರಗ ಳಲ್ಲಿ ಸಲ್ಪ ಚೇತರಿಕೆಯನ್ನು ಕಾಣಬಹುದು. ಆಡಳಿತಾತ್ಮಕ ಪರೀಕ್ಷೆಯನ್ನು ಓದುತ್ತಿರುವವ ರಿಗೆ ಉತ್ತಮಯಶಸ್ಸು ಇರುತ್ತದೆ. ನರದೌರ್ಬಲ್ಯ ಇರುವವರು ಎಚ್ಚರ ವಹಿಸಿರಿ. ಸಂಗಾತಿಯಿಂದ ಧನ ಸಹಕಾರ ನಿರೀಕ್ಷೆ ಮಾಡಬಹುದು ಮತ್ತು ಸಂಗಾತಿಯ ಆದಾಯದಲ್ಲಿ ಏರಿಕೆಯನ್ನು ಕಾಣಬಹುದು.ಉದ್ದಿಮೆದಾರರಿಗೆ ಕಾರ್ಮಿಕರ ಸಮಸ್ಯೆಗಳಾಗ ಬಹುದು. ಹಿರಿಯ ಲೋಹ ತಜ್ಞರಿಗೆ ಸನ್ಮಾನಗಳು ಆಗುವ ಸಾಧ್ಯತೆಗಳಿವೆ.
ಕರ್ಕಾಟಕ
ಕುಸ್ತಿ ಪೈಲ್ವಾನರ್ಗೆ ಸಾಕಷ್ಟು ಬೇಡಿಕೆ ಬರುತ್ತದೆ. ಆದಾಯವು ನಿರೀಕ್ಷಿತ ಮಟ್ಟದಲ್ಲಿ ರುತ್ತದೆ. ಈಗ ಸರ್ಕಾರದಿಂದ ಬರಬೇಕಾಗಿದ್ದ ಆದಾಯಗಳು ಬರುತ್ತವೆ. ಬಂಧುಗಳ ಜೊತೆ ಮುಸುಕಿನ ಗುದ್ದಾಟವಿರುತ್ತದೆ. ಸರ್ಕಾರದಿಂದ ಸಿಗುವ ಆಸ್ತಿಗಳನ್ನು ಹೊಂದುವ ಯೋಗವಿದೆ. ಗಣಿತ ವಿದ್ಯಾರ್ಥಿಗಳಿಗೆ ಮತ್ತುತೆರಿಗೆಯವಿಷಯ ದಲ್ಲಿ ಅಧ್ಯಯನ ಮಾಡುತ್ತಿರುವವರಿಗೆ ಸಾಕಷ್ಟು ಯಶಸ್ಸು ಇರುತ್ತದೆ. ಮೂತ್ರಸಂಬಂಧಿ ಕಾಯಿಲೆ ಗಳಿರುವವರು ಎಚ್ಚರ ವಹಿಸಿರಿ. ಸಂಗಾತಿಯು ನಿಮ್ಮ ಮೇಲೆ ಕೋಪಗೊಂಡರು ಸಹ ನಂತರ ಸಮಾಧಾನ ಮಾಡುವರು. ಉದ್ಯೋಗ ಸ್ಥಳದ ಲ್ಲಿದ್ದ ಗೋಜಲಗಳು ಕಡಿಮೆಯಾಗುತ್ತವೆ. ಕೃಷಿ ಪಂಡಿತರಿಗೆ ಹೆಚ್ಚಿನ ಗೌರವ ದೊರೆಯುತ್ತದೆ.
ಸಿಂಹ
ಗೌರವದ ಜೊತೆ ನಿಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಪ್ರಯತ್ನಪಡುವಿರಿ. ಆದಾಯ ಕಡಿಮೆ ಇರುತ್ತದೆ. ಧಾರ್ಮಿಕ ಕೆಲಸಗಳನ್ನು ಮಾಡುವವರಿಗೆ ಆದಾಯ ಹೆಚ್ಚುತ್ತದೆ. ನಿಮ್ಮ ಬೆಳವಣಿಗೆಗೆ ಕೇಂದ್ರೀಕೃತವಾದ ಕಾರ್ಯಕ್ರಮಗ ಳನ್ನು ಮಾತ್ರ ರೂಡಿಸಿಕೊಳ್ಳುವಿರಿ. ಸ್ಥಿರಾಸ್ತಿಯ ವ್ಯವಹಾರ ಮಾಡುವವರಿಗೆ ಲಾಭವಿರುತ್ತದೆ. ವಿದ್ಯಾರ್ಥಿಗಳಿಗೆ ಯಶಸ್ಸುಸಿಗುತ್ತದೆ ಮಹಿಳಾ ವಿದ್ಯಾರ್ಥಿಗಳು ಮತ್ತು ಮಹಿಳಾವ್ಯಾಪಾರಿಗಳಿಗೆ ಹೆಚ್ಚಿನ ಯಶಸ್ಸು ಇರುತ್ತದೆ. ಶೀತಬಾದೆಯಿಂದ ಶ್ವಾಸಕೋಶದ ತೊಂದರೆ ಬರುವಸಾಧ್ಯತೆಗಳಿವೆ. ಸಂಗಾತಿಯನ್ನು ಒಲೈಸಿಕೊಂಡು ಸಂಸಾರಕ್ಕೆ ಸಹಾಯಗಳನ್ನುಪಡೆದುಕೊಳ್ಳುವಿರಿ. ಉದ್ಯೋ ಗದಲ್ಲಿ ಆದಾಯ ಮತ್ತು ಗೌರವ ಎರಡು ದೊರೆ ಯುತ್ತದೆ.
ಕನ್ಯಾ
ಧರ್ಮದ ಸೋಗಿನಲ್ಲಿ ನಿಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳುವಿರಿ. ಆದಾಯ ಉತ್ತಮಗೊಳ್ಳುತ್ತದೆ ಬುದ್ಧಿವಂತಿಕೆ ಮತ್ತು ವ್ಯವ ಹಾರಿಕತೆಯಿಂದ ನಿನ್ನ ಬಂಧುಗಳನ್ನು ಹಿಡಿದಿ ಡಲು ಪ್ರಯತ್ನಪಡುವಿರಿ. ಸ್ತ್ರೀಯರು ಮಾಡುವ ವ್ಯವಹಾರಗಳಲ್ಲಿ ಲಾಭವಿರುತ್ತದೆ. ಸಂಸಾರದ ಸುಖಕ್ಕಾಗಿ ಸ್ವಲ್ಪ ಹಣ ಖರ್ಚು ಮಾಡುವಿರಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಅಲ್ಪ ಪ್ರಗತಿಯನ್ನು ಕಾಣಬಹುದು. ಶ್ವಾಸಕೋಶದ ತೊಂದರೆ ಇರು ವವರು ಎಚ್ಚರ ವಹಿಸಿರಿ. ಸಂಗಾತಿ ಮಾಡುವ ವಿದೇಶೀ ವ್ಯವಹಾರಗಳಿಂದ ಆದಾಯ ಬರುವ ಸಾಧ್ಯತೆ ಇದೆ.ಹಿರಿಯರಿಂದ ಧನಸಹಕಾರವನ್ನು ಕೇಳಲು ಸಿದ್ದರಾಗುವಿರಿ. ಕ್ರೀಡಾ ತರಬೇತುದಾರ ರಿಗೆ ಅಭಿವೃದ್ಧಿ ಇರುತ್ತದೆ.
ತುಲಾ
ಆತ್ಮವಿಶ್ವಾಸ ಅತಿಯಾಗಿರುತ್ತದೆ. ಆದಾಯವು ನಿಧಾನವಾಗಿ ಚೇತರಿಕೆ ಆಗುತ್ತದೆ. ಮಹಿಳೆಯರ ಜೊತೆ ಮಾಡಿದ ವ್ಯವಹಾರಗಳಲ್ಲಿ ಯಶಸ್ಸು ಇರುತ್ತದೆ. ಭೂಮಿ ವ್ಯವಹಾರಗಳಲ್ಲಿ ನಿರೀಕ್ಷಿತ ಲಾಭವಿರುವುದಿಲ್ಲ. ವಿದ್ಯಾರ್ಥಿಗಳಿಗೆ ಸಾಮಾನ್ಯ ಫಲಿತಾಂಶವಿರುತ್ತದೆ. ಕೆಲವರಿಗೆ ಚರ್ಮರೋಗಗಳು ಹಾಗೂ ಕೀಲುನೋವುಗಳು ಕಾಣಿಸಿಕೊಳ್ಳಬಹುದು. ನಿಮ್ಮ ಕೆಲಸಗಳಿಗೆ ಸಂಗಾತಿಯ ಸಹಕಾರ ದೊರೆಯುತ್ತದೆ. ತಾಯಿ ಯಿಂದ ಸಾಕಷ್ಟು ಧನಸಹಾಯದೊರೆಯುತ್ತದೆ. ವೃತ್ತಿಯಲ್ಲಿ ಪ್ರಗತಿಯನ್ನು ಕಾಣಬಹುದು. ಈಗ ಸಂಗಾತಿ ಕಡೆಯವರಿಂದ ಸರ್ಕಾರಿ ಕಚೇರಿ ಕೆಲಸ ಕಾರ್ಯಗಳು ಸರಾಗವಾಗಿ ಆಗುತ್ತದೆ. ವ್ಯವಹಾರಗಳಲ್ಲಿ ಅನಿರೀಕ್ಷಿತ ಏರಿಳಿತಗಳನ್ನು ಕಾಣಬಹುದು.
ವೃಶ್ಚಿಕ
ವ್ಯವಹಾರಿಕವಾಗಿ ಹೆಚ್ಚು ಮುನ್ನಡೆ ಸಾಧಿಸುವಿರಿ. ಆದಾಯವು ನಿರೀಕ್ಷೆಯ ಹತ್ತಿರ ಬರುತ್ತದೆ. ನಿಮ್ಮ ಶತ್ರುಗಳನ್ನು ಪತ್ತೆ ಮಾಡಿ ಅವರನ್ನು ಹತ್ತಿಕ್ಕಲು ಯಶಸ್ವಿಯಾಗುವಿರಿ. ಕೃಷಿ ಭೂಮಿಯ ವ್ಯವಹಾರಗಳಲ್ಲಿ ಯಶಸ್ವಿಯಾಗು ವಿರಿ. ವಿದೇಶದಲ್ಲಿ ಓದುತ್ತಿರುವವರಿಗೆ ಹೆಚ್ಚಿನ ಅಭಿವೃದ್ಧಿ ಇರುತ್ತದೆ. ಬಂಧುಗಳಜೊತೆಮಾಡಿದ ವ್ಯವಹಾರಗಳಲ್ಲಿಅಭಿವೃದ್ಧಿಇರುವುದಿಲ್ಲ. ನಿಮ್ಮ ಸಂಗಾತಿಯಿಂದ ನಿಮ್ಮ ವ್ಯವಹಾರಗಳಿಗೆ ಧನ ಸಹಾಯ ಮತ್ತು ಸಲಹೆಗಳು ಬರುತ್ತವೆ. ಮಿಶ್ರ ಲೋಹದ ಉದ್ಯಮದಲ್ಲಿ ತೊಡಗಿರುವವರಿಗೆ ಅಭಿವೃದ್ಧಿ ಇರುತ್ತದೆ. ಉದ್ಯೋಗದಲ್ಲಿ ಈಗ ಅಭಿವೃದ್ಧಿಯನ್ನು ಕಾಣಬಹುದು. ಧಾರ್ಮಿಕ ಮುಖಂಡರುಗಳಿಗೆ ಗೌರವ ದೊರೆಯುತ್ತದೆ.
ಧನು
ಮನಸು ಬಹಳ ಪ್ರಫುಲ್ಲತೆಯಿಂದ ಕೂಡಿರುತ್ತದೆ. ಆದಾಯವು ಕಡಿಮೆ ಇದ್ದರೂ ಸಹ ನಿರ್ವಹಣೆ ಮಾಡುವ ಅವಕಾಶವಿರುತ್ತದೆ. ಶತ್ರುಗಳನ್ನು ನಗುನಗುತ್ತಾ ಹದದಲ್ಲಿಡುವಿರಿ. ವಿದೇಶದಲ್ಲಿ ಆಸ್ತಿ ವ್ಯವಹಾರ ಮಾಡುವವರ ಲಾಭ ಹೆಚ್ಚುತ್ತದೆ. ಆಟೋಮೊಬೈಲ್ ಮಾರಾಟ ಮಾಡುತ್ತಿರುವವರಿಗೆ ಅಭಿವೃದ್ದಿ ಇರುತ್ತದೆ. ಎಲೆಕ್ಟ್ರಾನಿಕ್ಸ್ ವಿದ್ಯಾರ್ಥಿಗಳಿಗೆ ಸ್ವಲ್ಪ ಹಿನ್ನಡೆ ಆಗಬಹುದು. ಬಾರದೆಂದುಕೊಂಡಿದ್ದ ಸಾಲ ಕೊಟ್ಟ ಹಣ ಈಗ ಬರುವ ಸಾಧ್ಯತೆ ಇದೆ. ನಿಮ್ಮ ಸಂಗಾತಿ ಮಾಡುವ ವ್ಯವಹಾರಗಳಲ್ಲಿ ಆದಾಯ ಇರುವುದಿಲ್ಲ. ಯೋಗಗುರುಗಳಿಗೆ ಹೆಚ್ಚುಬೇಡಿಕೆ ಬರುತ್ತದೆ.ವ್ಯವಹಾರಗಳಲ್ಲಿ ಹಿರಿಯರ ಸಹಕಾರ ಗಳು ದೊರೆಯುತ್ತವೆ.
ಮಕರ
ಒತ್ತಡದಲ್ಲಿ ಕೆಲಸ ಮಾಡಿದರು ಸಹ ಅದರಲ್ಲಿ ಸಂತೋಷವನ್ನು ಕಾಣುವಿರಿ. ನಿಮ್ಮ ಆದಾಯವನ್ನು ವೃದ್ಧಿಸಿಕೊಳ್ಳುವತ್ತಾ ಗಮನ ಹರಿಸುವಿರಿ. ನಿಮ್ಮ ಬೆಳವಣಿಗೆಯನ್ನು ಬಂಧು ಗಳು ವಿರೋಧಿಸುವರು, ಆದರೂ ಸಹ ನೀವು ಸಾಧಿಸುವಿರಿ. ನಿಮ್ಮ ಸಂಗಾತಿಯು ನಿಮ್ಮ ಕೆಲಸಕಾರ್ಯಗಳಿಗೆ ಬೆಂಗಾವಲಾಗುವರು. ಆಸ್ತಿ ವ್ಯವಹಾರಗಳನ್ನು ಮಾಡುವವರು ಹೆಚ್ಚು ಅಭಿ ವೃದ್ಧಿಯನ್ನು ಕಾಣುವರು. ವಿದ್ಯಾರ್ಥಿಗಳು ಮತ್ತು ಅಧ್ಯಯನ ಮಾಡುವವರೆಗೂ ಹೆಚ್ಚಿನ ಯಶಸ್ಸು ಇರುತ್ತದೆ. ಸರ್ಕಾರಿ ಸಂಸ್ಥೆಗಳ ಜೊತೆ ಗಿನ ವ್ಯವಹಾರಗಳು ಅಷ್ಟು ಹಿತಕರವಾಗಿರುವು ದಿಲ್ಲ.ಒಡವೆ ತಯಾರಿಸು ವವರಿಗೆ ನಿಧಾನವಾಗಿ ಬೇಡಿಕೆ ಬರುತ್ತದೆ. ದೈವ ಕಾರ್ಯಗಳಲ್ಲಿ ಹೆಚ್ಚು ಭಾಗಿಯಾಗುವಿರಿ.
ಕುಂಭ
ಮನಸ್ಸಿನಲ್ಲಿ ದ್ವಂದ್ವಗಳಿದ್ದರೂ ಸಹ ಅದನ್ನು ಹೊರಗೆ ತೋರಿಸಿಕೊಳ್ಳುವುದು ಬೇಡ. ಮಾತಿನಲ್ಲಿ ಮೃದುತ್ವ ಖಂಡಿತ ಇರಲಿ. ಕೆಲವು ಬಂಧುಗಳು ನಿಮ್ಮ ಕೆಲಸ ಕಾರ್ಯಗಳು ಆಗ ದಂತೆ ಪ್ರಯತ್ನಪಡುವರು. ಈಗ ಸಂಸಾರದಲ್ಲಿ ಸಂತೋಷವನ್ನು ಕಾಣುವಿರಿ. ರಿಯಲ್ಎಸ್ಟೇಟ್ ಏಜೆಂಟರುಗಳಿಗೆ ಆದಾಯ ಬರುತ್ತದೆ. ತೆರಿಗೆ ತಜ್ಞರಿಗೆ ಬೇಡಿಕೆ ಹೆಚ್ಚುತ್ತದೆ ಹಾಗೂ ಇದೇ ವಿಷಯವನ್ನು ಕಲಿಯುತ್ತಿರುವವರಿಗೆ ಹೆಚ್ಚಿನ ಅನುಕೂಲಗಳು ಒದಗುತ್ತದೆ. ಈಗ ಸಾಮಾನ್ಯ ವಿದ್ಯಾರ್ಥಿಗಳಿಗೆ ಮಧ್ಯಮಫಲಿತಾಂಶವಿರುತ್ತದೆ. ಮಾಂಸಖಂಡಗಳ ನೋವು ಕೆಲವರನ್ನು ಕಾಡ ಬಹುದು. ಸಂಗಾತಿ ಕಡೆಯ ಹಿರಿಯರಿಂದ ನಿಮಗೆ ಅನುಕೂಲವಾಗುತ್ತದೆ.
ಮೀನ
ಥಳುಕಿನ ಜೀವನವನ್ನು ರೂಡಿಸಿಕೊಳ್ಳಲು ಪ್ರಯತ್ನ ಪಡುವಿರಿ. ಆದಾಯವು ಮಧ್ಯಮ ಗತಿಯಲ್ಲಿರುತ್ತದೆ. ಕೆಲವೊಂದು ಕೆಲಸಗಳಿಗೆ ಹಿರಿಯರ ಸಹಕಾರ ಸಿಗುತ್ತದೆ. ವ್ಯಾಪಾರ ವ್ಯವ ಹಾರಗಳ ಬಗ್ಗೆ ಸಾಕಷ್ಟು ಚಿಂತನೆ ಮಾಡುವಿರಿ. ಕೃಷಿಯಿಂದ ಹೆಚ್ಚಿನ ಆದಾಯವನ್ನು ಪಡೆಯ ಬಹುದು. ವಿದ್ಯುತ್ ಕ್ಷೇತ್ರದಲ್ಲಿ ಕೆಲಸಮಾಡುತ್ತಿ ರುವವರಿಗೆ ಅಭಿವೃದ್ಧಿ ಇರುತ್ತದೆ. ಅತಿಯಾದ ತಲೆನೋವು ಕೆಲವರನ್ನು ಕಾಡಬಹುದು. ಈಗ ಧಾರ್ಮಿಕ ಸಂಸ್ಥೆಗಳಲ್ಲಿ ಕೆಲಸ ಮಾಡುವ ಅವ ಕಾಶ ದೊರೆಯುತ್ತದೆ.ಸರ್ಕಾರಿ ವ್ಯವಹಾರಗಳಲ್ಲಿ ಲಾಭಗಳು ಕೈಜಾರುವ ಸಂದರ್ಭವಿದೆ. ಸಂಗಾತಿ ವ್ಯವಹಾರಗಳಲ್ಲಿ ಆದಾಯ ಕಡಿಮೆಯಾಗ ಬಹುದು. ಹಿರಿಯರಿಂದ ಕೃಷಿಜ್ಞಾನವನ್ನು ಪಡೆ ಯಬಹುದು.
ADVERTISEMENT
ADVERTISEMENT