ಮಧ್ಯಂತರ ಬಜೆಟ್ ವ್ಯಾಪಕ ಮತ್ತು ವಿನೂತನವಾಗಿದೆ. ನಿರಂತರತೆಯ ವಿಶ್ವಾಸ ಇದರಲ್ಲಿದೆ. ವಿಕಸಿತ ಭಾರತದ ನಾಲ್ಕು ಆಧಾರ ಸ್ಥಂಭಗಳಾದ ಯುವ ಜನರು, ಬಡವರು, ಮಹಿಳೆಯರು ಮತ್ತು ರೈತರನ್ನು ಈ ಬಜೆಟ್ ಸಬಲೀಕರಣಗೊಳಿಸಲಿದೆ. 2047ರ ಹೊತ್ತಿಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿಸುವ ಖಾತ್ರಿ ನೀಡಿದೆ.–ನರೇಂದ್ರ ಮೋದಿ, ಪ್ರಧಾನ ಮಂತ್ರಿ
9ರಿಂದ 14 ವರ್ಷ ವಯಸ್ಸಿನ ಹೆಣ್ಣುಮಕ್ಕಳಿಗೆ ಗರ್ಭಕಂಠ ಕ್ಯಾನ್ಸರ್ ನಿರೋಧಕ ಲಸಿಕೆ ಹಾಕಿಸಲು ಸರ್ಕಾರ ಉತ್ತೇಜನ ನೀಡಲಿದೆ.–ನಿರ್ಮಲಾ ಸೀತಾರಾಮನ್
ಆರ್ಥಿಕ ಸ್ಥಿತಿಗತಿ ಕುರಿತು ಸರ್ಕಾರವು ಸಂಸತ್ತಿನಲ್ಲಿ ಶ್ವೇತಪತ್ರ ಹೊರಡಿಸಲಿದೆ.–ನಿರ್ಮಲಾ ಸೀತಾರಾಮನ್
ಆದಾಯ ಸ್ವೀಕೃತಿಗಳು ಬಜೆಟ್‌ನ ಅಂದಾಜಿಗಿಂತ ಸುಮಾರು ₹ 30.03 ಲಕ್ಷ ಕೋಟಿಗೂ ಅಧಿಕ ಇರಬಹುದು ಎಂದು ನಿರೀಕ್ಷಿಸಲಾಗಿದೆ. ತೆರಿಗೆ ಸ್ವೀಕೃತಿ 20.02 ಲಕ್ಷ ಕೋಟಿ ಇರಲಿದೆ ಎಂದು ಅಂದಾಜಿಸಲಾಗಿದೆ.–ನಿರ್ಮಲಾ ಸೀತಾರಾಮನ್