ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಳ್ಳಾರಿ: ಕಚೇರಿಯನ್ನೇ ತೆರೆಯದ ಸಂಸದ; ಅಹವಾಲು ಸಲ್ಲಿಸಲು ಹೋಗುವುದೆಲ್ಲಿಗೆ?

Published : 23 ಸೆಪ್ಟೆಂಬರ್ 2024, 5:31 IST
Last Updated : 23 ಸೆಪ್ಟೆಂಬರ್ 2024, 5:31 IST
ಫಾಲೋ ಮಾಡಿ
Comments
ಬಳ್ಳಾರಿ ನಗರದ ಹಳೇ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಸಂಸದರ ಹಳೇ ಕಚೇರಿ ಆವರಣ ಬಿಕೋ ಎನ್ನುತ್ತಿರುವುದು

ಬಳ್ಳಾರಿ ನಗರದ ಹಳೇ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಸಂಸದರ ಹಳೇ ಕಚೇರಿ ಆವರಣ ಬಿಕೋ ಎನ್ನುತ್ತಿರುವುದು

ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ. ಸಾರ್ವಜನಿಕರಿಗೆ ಸಂಸದರು ಸಿಗುತ್ತಿಲ್ಲ. ತುಕಾರಾಂ ಅವರು ಗೆದ್ದು ಮೂರು ತಿಂಗಳಿಗೂ ಹೆಚ್ಚು ಸಮಯವಾಗಿದೆ. ಗೆದ್ದಾಗ ಅವರ ಮೇಲೆ ಅಪಾರವಾದ ನಿರೀಕ್ಷೆಗಳಿದ್ದವು. ಅವುಗಳನ್ನು ಈಡೇರಿಸಬೇಕಿದ್ದರೆ ಸಂಸದರು ಮೊದಲು ಕಚೇರಿ ಆರಂಭಿಸಬೇಕು.
–ರೆಕ್ಕಲ ವೆಂಕಟರೆಡ್ಡಿ, ಸಾಮಾಜಿಕ ಕಾರ್ಯಕರ್ತ, ಬಳ್ಳಾರಿ
ಅಹವಾಲುಗಳನ್ನು ಕೊಡಬೇಕಿದ್ದರೆ ಎಲ್ಲಿಗೆ ಹೋಗಬೇಕು? ನಗರದಲ್ಲಿ ಸಮಸ್ಯೆಗಳಿವೆ. ಆಸ್ಪತ್ರೆಗಳಲ್ಲಿ ಶುಚಿತ್ವ ಇಲ್ಲ. ಗಡಿ ಪ್ರದೇಶದಲ್ಲಿ ಅಭಿವೃದ್ಧಿ ಆಗಿಲ್ಲ. ಅಭಿವೃದ್ಧಿ ಕಾರ್ಯಗಳು ಕುಂಟುತ್ತಿವೆ. ಇದೆಲ್ಲದರ ಪರಿಹಾರಕ್ಕಾಗಿ ಜನ ಸಂಪರ್ಕ ಕಚೇರಿಯನ್ನು ಸಂಸದರು ತೆಗೆಯಲೇಬೇಕಾಗುತ್ತದೆ.
–ವಿರೂಪಾಕ್ಷ,ರಾಣಿತೋಟ, ಬಳ್ಳಾರಿ
ಸಂಸದರು ಇರುವುದು ಜನಸೇವೆ ಮಾಡಲು. ತುಕಾರಾಂ ಅವರಿಗೆ ಜನಪರ ಕಾಳಹಿ ಇದ್ದಿದ್ದರೆ ಕೂಡಲೇ ಕಚೇರಿ ತೆರೆಯಬೇಕಿತ್ತು. ಸಭೆ ಸರಂಭಗಳಲ್ಲಿ ಅಧಿಕಾರಿಗಳನ್ನು ತರಾಟೆ ತಗೆದುಕೊಳ್ಳುವುದಲ್ಲ. ಮೊದಲು ತಾವು ಸರಿಯಾಗಿರಬೇಕು. ಸಂಡೂರು ಮಾಡಲ್ ಎನ್ನುತ್ತಾರೆ. ಸಂಡೂರಲ್ಲಿ ಬಸ್ ನಿಲ್ದಾಣವೇ ಸರಿ, ಆಸ್ಪತ್ರೆಗಳೇ ನಾರುತ್ತಿವೆ.
–ಶ್ರೀಶೈಲ ಆಲದಹಳ್ಳಿ, ಸಂಡೂರು
ಹಳೇ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಹೊಸದೊಂದು ಕಚೇರಿಯನ್ನು ತುಕಾರಾಂ ಅವರಿಗೆ ನೀಡಲಾಗಿದೆ. ಅದರ ಶುದ್ಧೀಕರಣ ಕಾರ್ಯ ನಡೆಯುತ್ತಿದೆ. ಬಹುತೇಕ ದಸರಾ ಹಬ್ಬದ ಹೊತ್ತಿಗೆ ಸಂಸದರು ಜಿಲ್ಲಾ ಕೇಂದ್ರ ಬಳ್ಳಾರಿ ನಗರದಲ್ಲಿ ಹೊಸ ಕಚೇರಿಯನ್ನು ತೆರೆಯಲಿದ್ದಾರೆ.
–ಅಲ್ಲಂ ಪ್ರಶಾಂತ್‌, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT