ಕಾರವಾರ: ಶಿರೂರು ಗುಡ್ಡ ಕುಸಿತ ದುರಂತದಲ್ಲಿ ಗಂಗಾವಳಿ ನದಿಯಲ್ಲಿ ಸಿಲುಕಿದ ಕೇರಳದ ಲಾರಿಯನ್ನು ಹೊರತೆಗೆಯಲು ಮತ್ತು ಚಾಲಕ ಅರ್ಜುನ್ ಪತ್ತೆ ಮಾಡಲು ಸತತ 11 ದಿನಗಳಿಂದ ಪ್ರಯತ್ನ ನಡೆದಿದೆ.

ಆದರೆ, ನದಿ ರಭಸವಾಗಿ ಹರಿಯುತ್ತಿರುವ ಕಾರಣ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಈ ನಡುವೆ ತ್ವರಿತ ಕಾರ್ಯಾಚರಣೆಗೆ ಕೇರಳ ಸರ್ಕಾರ ಒತ್ತಡ ಹೆಚ್ಚಿಸುತ್ತಿದ್ದು, ಉತ್ತರ ಕನ್ನಡ ಜಿಲ್ಲಾಡಳಿತ ಇಕ್ಕಟ್ಟಿಗೆ ಸಿಲುಕಿದೆ.

ಜುಲೈ 16 ರಂದು ಬೆಳಿಗ್ಗೆ 8.45ಕ್ಕೆ ಶಿರೂರಿನಲ್ಲಿ ಗುಡ್ಡ ಕುಸಿತ ಅವಘಡ ಸಂಭವಿಸಿತ್ತು. ಘಟನೆ ನಡೆದ 10 ದಿನದ ಬಳಿಕ ಲಾರಿಯ ಕ್ಯಾಬಿನ್ ನದಿ ದಡದಿಂದ 60 ಮೀಟರ್ ದೂರ ಮತ್ತು 5 ಮೀಟರ್ ಆಳದಲ್ಲಿ ಸಿಲುಕಿರುವುದು ಡ್ರೋನ್ ತಂತ್ರಜ್ಞಾನ ಆಧಾರಿತ ಶೋಧನ ಯಂತ್ರದಿಂದ ಗೊತ್ತಾಯಿತು. ಆದರೆ, ಚಾಲಕ ಅರ್ಜುನ್ ಸುಳಿವು ಸಿಗಲಿಲ್ಲ. ಅವರನ್ನು ಶೀಘ್ರವೇ ಪತ್ತೆ ಮಾಡುವಂತೆ ಕೇರಳ ಸರ್ಕಾರದ ಸಚಿವರು, ಶಾಸಕರು ಪಟ್ಟು ಹಿಡಿದಿದ್ದಾರೆ.

ಕೇರಳದ ಮಂಜೇಶ್ವರ ಶಾಸಕ ಎ.ಕೆ.ಅಶ್ರಫ್, ಬಾಲಾಸ್ಸೇರಿ ಶಾಸಕ ಸಚಿನ್ ದೇವ, ತಿರುವಾಂಬುಡು ಶಾಸಕ ಲಿಂಡೋ ಜೊಸೆಫ್ ಒಂದು ವಾರದಿಂದ ಶಿರೂರಿನಲ್ಲಿ ಬೀಡುಬಿಟ್ಟಿದ್ದಾರೆ. ಕೋಯಿಕ್ಕೋಡ್ ಸಂಸದ ಎಂ.ಕೆ.ರಾಘವನ್ ಭೇಟಿ ನೀಡಿದರು. ಕೇರಳದ ಲೋಕೋಪಯೋಗಿ ಇಲಾಖೆ ಸಚಿವ ಪಿ.ಎ.ಮೊಹಮ್ಮದ್ ರಿಯಾಜ್ ಸ್ಥಳಕ್ಕೆ ಭೇಟಿ ನೀಡಿ ಕಾರ್ಯಾಚರಣೆ ವೇಗಗೊಳಿಸಲು ಒತ್ತಾಯಿಸಿದ್ದಾರೆ.

‘ಲಾರಿ ಮೇಲಕ್ಕೆತ್ತಲು ನೌಕದಳದ ಮುಳುಗುತಜ್ಞರು ಪ್ರಯತ್ನ ನಡೆಸಿದ್ದಾರೆ. ಆದರೆ, ನದಿಯ ರಭಸ ಪ್ರತಿ ಗಂಟೆಗೆ 6 ರಿಂದ 8 ನಾಟಿಕಲ್ ಮೈಲು ವೇಗವಿದೆ. ಕಾರ್ಯಾಚರಣೆಗೆ ಅಡ್ಡಿಯಾಗಿದೆ’ ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ತಿಳಿಸಿದರು.

‘ಅರ್ಜುನ್ ಇದ್ದ ಲಾರಿ ನದಿಯಲ್ಲಿ ಸಿಲುಕಿರುವ ಸ್ಥಳ ಶೋಧಿಸಿದ್ದು, ಅದನ್ನು ಮೇಲಕ್ಕೆತ್ತಲು ತ್ವರಿತ ಕೆಲಸವಾಗಬೇಕು’ ಎಂದು ಮಂಜೇಶ್ವರ ಶಾಸಕ ಎ.ಕೆ.ಅಶ್ರಫ್ ಹೇಳಿದರು.

ಗಂಗಾವಳಿ ನದಿಯಲ್ಲಿ ನೀರಿನ ರಭಸ ಕಡಿಮೆ ಆಗುವವರೆಗೆ ಲಾರಿ ಮೇಲೆತ್ತುವುದು ಕಷ್ಟ ಎಂದು ಮುಳುಗು ತಜ್ಞರು ಹೇಳಿದ್ದಾರೆ. ಆದರೂ ಕಾರ್ಯಾಚರಣೆಗೆ ಮುಂದುವರೆದಿದೆ.

–ಕೆ.ಲಕ್ಷ್ಮಿಪ್ರಿಯಾ ಜಿಲ್ಲಾಧಿಕಾರಿ

ದೇಶದಲ್ಲಿ ಎಷ್ಟೋ ದುರಂತ ಘಟಿಸಿದಾಗ ಕಾರ್ಯಾಚರಣೆ ನಡೆದಿದೆ. ನದಿಯಲ್ಲಿ ಸಿಲುಕಿದ ಲಾರಿ ಮತ್ತು ಚಾಲಕ ಅರ್ಜುನ್ ಹುಡುಕಲು ಕಾರ್ಯಾಚರಣೆಯ ಅಗತ್ಯವಿದೆ.

–ಎ.ಕೆ.ಅಶ್ರಫ್ ಶಾಸಕ ಮಂಜೇಶ್ವರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.