ಮುಂಬೈ: ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ನಿಂದ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಜೀವ ಬೆದರಿಕೆ ಸಂದೇಶಗಳು ಬರುತ್ತಿರುವ ಪ್ರಕರಣಗಳು ದಾಖಲಾಗುತ್ತಿರುವ ಬೆನ್ನಲೇ ಈಗ ನಟ ಶಾರುಕ್ ಖಾನ್ ಅವರಿಗೂ ವ್ಯಕ್ತಿಯೊಬ್ಬರಿಂದ ಜೀವ ಬೆದರಿಕೆ ಕರೆ ಬಂದಿದೆ. ₹50 ಲಕ್ಷದ ಬೇಡಿಕೆಯನ್ನೂ ಇಡಲಾಗಿದೆ.

ಶಾರುಕ್ ಖಾನ್ ಅವರಿಗೆ ಬೆದರಿಕೆವೊಡ್ಡಿದ ಕರೆಯು ಬಾಂದ್ರಾ ಪೊಲೀಸ್ ಠಾಣೆಗೆ ಬಂದಿತ್ತು. ಮುಂಬೈ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದರು. ಹೆಚ್ಚಿನ ತನಿಖೆಗಾಗಿ ಛತ್ತೀಸಗಢದ ರಾಯಪುರ ಸೇರಿ ಬೇರೆ ಬೇರೆ ರಾಜ್ಯಗಳ ವಿವಿಧೆಡೆ ಪೊಲೀಸರ ತಂಡ ತೆರಳಿತ್ತು.

‘ಪ್ರಕರಣ ಸಂಬಂಧ ಮುಂಬೈ ಪೊಲೀಸರು ಗುರುವಾರ ಬೆಳಿಗ್ಗೆ ರಾಯಪುರಕ್ಕೆ ಬಂದಿದ್ದರು. ರಾಯಪುರದ ವಕೀಲ ಫೈಜಾನ್ ಖಾನ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದರು. ನಂತರ, ವಕೀಲ ಫೈಜಾನ್ ವಿಚಾರಣೆಗೆ ಹಾಜರಾಗಿ, ಕಳೆದ ವಾರವೇ ತಮ್ಮ ಮೊಬೈಲ್ ಕಳವಾಗಿದ್ದರ ಬಗ್ಗೆ ಹಾಗೂ ಈ ಸಂಬಂಧ ದೂರು ನೀಡಿದ್ದರ ಬಗ್ಗೆ ಮಾಹಿತಿ ನೀಡಿದರು’ ಎಂದು ರಾಯಪುರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಸಿಂಗ್ ಹೇಳಿದರು.

‘ಬಾಂದ್ರಾ ಪೊಲೀಸ್ ಠಾಣೆಗೂ ವಿಚಾರಣೆಗೆ ಹಾಜರಾಗುವಂತೆ ಫೈಜಾನ್ ಅವರಿಗೆ ಮುಂಬೈ ಪೊಲೀಸರು ತಿಳಿಸಿದರು’ ಎಂದರು.

‘ಬೆದರಿಕೆ ಕರೆಯು ಛತ್ತೀಸಗಢದ ರಾಯಪುರದಿಂದಲೇ ಬಂದಿದೆ ಎನ್ನುವ ಕುರಿತು ಖಚಿತ ಮಾಹಿತಿಗಳಿಲ್ಲ. ಆದರೆ, ಬೆದರಿಕೆ ಕರೆ ಬಂದಿರುವ ಮೊಬೈಲ್ ಸಂಖ್ಯೆಯು ಫೈಜಾನ್ ಅವರ ಹೆಸರಿನಲ್ಲಿ ನೋಂದಣಿಯಾಗಿದೆ’ ಎಂದು ಮುಂಬೈ ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.