ಲಖನೌ: ಉತ್ತರ ಪ್ರದೇಶದ 9 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ದಿನಾಂಕ ಮರುನಿಗದಿ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿರುವ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, ‘ಚುನಾವಣೆಯ ಸೋಲನ್ನು ತಪ್ಪಿಸಲು ಬಿಜೆಪಿಯ ಹಳೆಯ ತಂತ್ರವಾಗಿದೆ ಇದು’ ಎಂದು ಹೇಳಿದರು.

ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಯಾದವ್, ‘ಮೊದಲು ಮಿಲ್ಕಿಪುರ ಉಪ ಚುನಾವಣೆಯನ್ನು ಮುಂದೂಡಲಾಯಿತು. ಇದೀಗ ಉಳಿದ ಸ್ಥಾನಗಳಿಗೆ ಉಪ ಚುನಾವಣೆ ದಿನಾಂಕ ಮರುನಿಗದಿಯಾಗಿದೆ. ಯಾವತ್ತೂ ಬಿಜೆಪಿ ಇಷ್ಟೊಂದು ದುರ್ಬಲವಾಗಿರಲಿಲ್ಲ’ ಎಂದರು.

‘ಚುನಾವಣೆಗಳನ್ನು ಅವರು(ಬಿಜೆಪಿ) ಮುಂದೂಡಿದಷ್ಟು ಅತ್ಯಂತ ಹೀನಾಯವಾಗಿ ಸೋಲುತ್ತಾರೆ’ ಎಂದು ಲೇವಡಿ ಮಾಡಿದರು.
.ಮೂರು ರಾಜ್ಯಗಳ 14 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ದಿನಾಂಕ ಬದಲು!.
‘ಉತ್ತರ ಪ್ರದೇಶದಲ್ಲಿನ ನಿರುದ್ಯೋಗ ಸಮಸ್ಯೆಯಿಂದ ಕೆಲಸ ಅರಸಿಕೊಂಡು ದೇಶದ ವಿವಿಧ ಭಾಗಗಳಿಗೆ ಇಲ್ಲಿನ ಯುವಕರು ತೆರಳಿದ್ದಾರೆ. ದೀಪಾವಳಿ ಮತ್ತು ಛತ್ ಹಬ್ಬದ ಪ್ರಯುಕ್ತ ಅವರೆಲ್ಲ ರಾಜ್ಯಕ್ಕೆ ಹಿಂದಿರುಗಿದ್ದು, ಬಿಜೆಪಿಯನ್ನು ಸೋಲಿಸಲು ಉಪ ಚುನಾವಣೆಯಲ್ಲಿ ಮತ ಹಾಕಲು ಹೊರಟಿದ್ದರು. ಹೀಗಾಗಿ ದಿನಾಂಕವನ್ನು ಮರುನಿಗದಿ ಮಾಡಲಾಗಿದೆ’ ಎಂದು ಹೇಳಿದರು.

‘ಈ ವಿಷಯ ಅರ್ಥವಾಗುತ್ತಲೇ ಬಿಜೆಪಿಯವರು ಉಪ ಚುನಾವಣೆಯನ್ನು ಮುಂದೂಡುವಂತೆ ಮಾಡಿದರು. ರಜಾ ದಿನಗಳನ್ನು ಕಳೆಯಲು ಬಂದ ಅವರು ಮತ ಹಾಕದೆ ಹೋಗುತ್ತಾರೆ’ ಎಂದು ಅಖಿಲೇಶ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.