ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಮೆರಿಕ | ಅಧ್ಯಕ್ಷೆಯಾಗಲು ಕಮಲಾ ಹ್ಯಾರಿಸ್ ಅರ್ಹರು ಎಂದ ಬೈಡನ್

Published : 12 ಜುಲೈ 2024, 15:40 IST
Last Updated : 12 ಜುಲೈ 2024, 15:40 IST
ಫಾಲೋ ಮಾಡಿ
Comments

ವಾಷಿಂಗ್ಟನ್: ದೇಶವನ್ನು ಮುನ್ನಡೆಸಲು ಸದ್ಯ ಉಪಾಧ್ಯಕ್ಷೆಯಾಗಿರುವ ಕಮಲಾ ಹ್ಯಾರಿಸ್ ಅವರು ಅರ್ಹರು ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಗುರುವಾರ ಹೇಳಿದ್ದಾರೆ.

ಆ ಮೂಲಕ ಮುಂದಿನ ಅಧ್ಯಕ್ಷೆ ಹುದ್ದೆಗೆ ಕಮಲಾ ಪರ ಬೈಡನ್ ಮಾತುಗಳನ್ನಾಡಿ ಅಚ್ಚರಿ ಮೂಡಿಸಿದ್ದಾರೆ.

ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಆರಂಭದಿಂದಲೂ ನಾನು ಈ ಮಾತುಗಳನ್ನು ಹೇಳುತ್ತಲೇ ಬಂದಿದ್ದೇನೆ. ಕಮಲಾ ಅವರು ಅಧ್ಯಕ್ಷೆಯಾಗುವ ಎಲ್ಲಾ ಅರ್ಹತೆಗಳನ್ನು ಹೊಂದಿದ್ದಾರೆ. ಹೀಗಾಗಿ ನಾನು ಅವರನ್ನು ಬೆಂಬಲಿಸುತ್ತಿದ್ದೇನೆ’ ಎಂದಿದ್ದಾರೆ.

ಇದಕ್ಕೆ ಕಾರಣ ಕೇಳಿದ ಪತ್ರಕರ್ತರಿಗೆ ಉತ್ತರಿಸಿದ ಅವರು, ‘ಮಹಿಳೆಯರ ಘಟಕಗಳ ಸ್ವಾತಂತ್ರ್ಯ ಕುರಿತಂತೆ ಅವರು ಹೋರಾಡಿದ ರೀತಿ, ದೇಶದ ಹಲವು ಸಮಸ್ಯೆಗಳನ್ನು ಅವರು ನಿರ್ವಹಿಸಿದ ಪರಿ ನನ್ನ ಈ ನಿರ್ಧಾರಕ್ಕೆ ಕಾರಣ’ ಎಂದಿದ್ದಾರೆ.

59 ವರ್ಷದ ಹ್ಯಾರಿಸ್ ಅವರು 2020ರಲ್ಲಿ ಅಮೆರಿಕದ ಉಪಾಧ್ಯಕ್ಷೆಯಾದ ಮೊದಲ ಮಹಿಳೆ ಇವರಾಗಿದ್ದಾರೆ. ಇದರೊಂದಿಗೆ ಈ ಹುದ್ದೆಗೇರಿದ ಮೊದಲ ಕಪ್ಪು ವರ್ಣೀಯ ಅಮೆರಿಕನ್, ಮೊದಲ ದಕ್ಷಿಣ ಏಷ್ಯಾದ ವ್ಯಕ್ತಿಯಾಗಿದ್ದಾರೆ.

81 ವರ್ಷದ ಬೈಡನ್ ಅವರ ಈ ಹೇಳಿಕೆ ಮೂಲಕ ಸದ್ಯದ ಅಧ್ಯಕ್ಷೀಯ ಚುನಾವಣೆಯಿಂದ ಅವರು ಹಿಂದೆ ಸರಿಯುವ ಸೂಚನೆ ನೀಡಿದ್ದಾರೆ. ಬರುವ ನವೆಂಬರ್‌ನಲ್ಲಿ ಅಧ್ಯಕ್ಷೀಯ ಚುನಾವಣೆ ಅಮೆರಿಕದಲ್ಲಿ ನಡೆಯಲಿದೆ. ಕಳೆದ ತಿಂಗಳು ತಮ್ಮ ಪ್ರತಿಸ್ಪರ್ಧಿ ಡೊನಾಲ್ಡ್ ಟ್ರಂಪ್‌ ಜತೆ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯೂ ಆಗಿರುವ ಬೈಡನ್‌ ಟಿ.ವಿ. ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT