ಭಾರತಕ್ಕೆ ಮರಳಿದ ಭಾರತೀಯ ವಿದ್ಯಾರ್ಥಿಗಳು
ಅಗರ್ತಲಾ/ಕೋಲ್ಕತ್ತ (ಪಿಟಿಐ): ಬಾಂಗ್ಲಾದೇಶದಲ್ಲಿ ಮೀಸಲಾತಿಗೆ ಸಂಬಂಧಿಸಿದಂತೆ ಹಿಂಸಾಚಾರ ನಡೆಯುತ್ತಿರುವ ಕಾರಣ ಸುಮಾರು 100 ವಿದ್ಯಾರ್ಥಿಗಳು ತ್ರಿಪುರಾದ ಎರಡು ಪ್ರಮುಖ ಚೆಕ್‌ಪಾಯಿಂಟ್‌ಗಳ ಮೂಲಕ ಶನಿವಾರ ಭಾರತಕ್ಕೆ ಮರಳಿದ್ದಾರೆ ಎಂದು ಗಡಿ ಭದ್ರತಾ ಪಡೆ ತಿಳಿಸಿದೆ. ಭಾರತೀಯ ವಿದ್ಯಾರ್ಥಿಗಳ ಜೊತೆ ವಿದೇಶಿ ವಿದ್ಯಾರ್ಥಿಗಳೂ ದೇಶಕ್ಕೆ ಮರಳಿದ್ದಾರೆ. ಈಗಾಗಲೇ ಸುಮಾರು 100 ವಿದ್ಯಾರ್ಥಿಗಳು ವಾಪಸ್ಸಾಗಿದ್ದು ಇನ್ನೂ ಸುಮಾರು 240 ವಿದ್ಯಾರ್ಥಿಗಳು ವಾಪಸ್ಸಾಗುವ ನಿರೀಕ್ಷೆ ಇದೆ ಹಲವು ವಿದ್ಯಾರ್ಥಿಗಳು ದೇಶಕ್ಕೆ ಮರಳಲಿದ್ದಾರೆ ಎಂದು ತ್ರಿಪುರಾದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪಶ್ಚಿಮ ಬಂಗಾಳದ ಮೂಲಕವೂ ವಿದ್ಯಾರ್ಥಿಗಳು ಭಾರತಕ್ಕೆ ಮರಳುತ್ತಿದ್ದು ಈ ವರೆಗೆ ನೇಪಾಳದ ಐವರು ವಿದ್ಯಾರ್ಥಿಗಳು ಫುಲ್ಬರಿ ಗಡಿ ಮೂಲಕ ಆಗಮಿಸಿದ್ದಾರೆ. ಮೆಕ್ಲಿಗಂಜ್ ಗಡಿ ಮೂಲಕ ಆರು ಭಾರತೀಯ ವಿದ್ಯಾರ್ಥಿಗಳು ಆಗಮಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.