ಬೈರೂತ್/ ಜೆರುಸಲೇಂ: ಅ.7 ಇಸ್ರೇಲ್ ಮೇಲಿನ ದಾಳಿಗೆ ಒಂದು ವರ್ಷ ತುಂಬಿದ್ದು, ಹಿಜ್ಬುಲ್ಲಾ ಹಾಗೂ ಹಮಾಸ್ ಬಂಡುಕೋರರು ಇಸ್ರೇಲ್ ಮೇಲೆ ಸೋಮವಾರ ದಾಳಿ ನಡೆಸಿದ್ದಾಗಿ ಹೇಳಿವೆ.
.ಹಮಾಸ್ ದಾಳಿಗೆ ವರ್ಷ: ಬೈರೂತ್ ಮೇಲೆ ಇಸ್ರೇಲ್ ದಾಳಿ, ಹಿಜ್ಬುಲ್ಲಾ ಪ್ರತಿದಾಳಿ.
ದಕ್ಷಿಣ ಲೆಬನಾನ್ನ ಗಡಿ ಗ್ರಾಮಗಳಲ್ಲಿರುವ ಇಸ್ರೇಲ್ ಪಡೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಹಿಜ್ಬುಲ್ಲಾ ಹೇಳಿದರೆ, ಟೆಲ್ ಅವಿವ್ ಮೇಲೆ ಭಾರಿ ಪ್ರಮಾಣದ ರಾಕೆಟ್ ದಾಳಿ ನಡೆಸಿದ್ದಾಗಿ ಹಮಾಸ್ನ ಶಸ್ತ್ರಾಸ್ತ್ರ ಪಡೆ ತಿಳಿಸಿದೆ.

ರಾಕೆಟ್ ಸಾಲ್ವೊ ಬಳಸಿ ಮರೌನ್ ಅಲ್ ರಾಸ್ ಪಾರ್ಕ್ನಲ್ಲಿ ಸೇರಿದ್ದ ಇಸ್ರೇಲ್ ಪಡೆಗಳ ಮೇಲೆ ಬಾಂಬ್ ದಾಳಿ ನಡೆಸಲಾಗಿದೆ ಎಂದು ಹಿಜ್ಬುಲ್ಲಾ ಪ್ರಕಟಣೆಯಲ್ಲಿ ತಿಳಿಸಿದೆ. ಇದರ ಜೊತೆಗೆ ಉತ್ತರ ಇಸ್ರೇಲ್ ಹಾಗೂ ಗಡಿಯುದ್ಧಕ್ಕೂ ಇರುವ ಇಸ್ರೇಲ್ ನೆಲೆಗಳ ಮೇಲೆಯೂ ದಾಳಿ ನಡೆಸಲಾಗಿದೆ ಎಂದು ಅದು ಹೇಳಿದೆ.
.ಹಿಜ್ಬುಲ್ಲಾ, ಹಮಾಸ್ ವಿರುದ್ಧ ಇಸ್ರೇಲ್ ದಾಳಿ ಅವ್ಯಾಹತ: ಭಾನುವಾರ 23 ಬಲಿ .
ಇಸ್ರೇಲ್ ಮೇಲೆ ರಾಕೆಟ್ಗಳ ಮಳೆಯನ್ನೇ ಸುರಿಸಲಾಗಿದೆ ಎಂದು ಹಮಾಸ್ನ ಶಸ್ತ್ರಾಸ್ತ್ರ ಪಡೆ ಪ್ರಕಟಣೆಯಲ್ಲಿ ತಿಳಿಸಿದೆ.

ಯುದ್ಧದ ಭಾಗವಾಗಿ ಇಝ್ಝುದ್ದೀನ್ ಅಲ್ ಕಾಸಿಂ ಬ್ರಿಗೇಡ್, ಟೆಲ್ ಅವಿವ್ ನಗರವನ್ನು ಗುರಿಯಾಗಿಸಿಕೊಂಡು ಎಂ90 ಕ್ಷಿಪಣಿಗಳ ಮೂಲಕ ಮಾರಣಾಂತಿಕ ದಾಳಿ ನಡೆಸಿದೆ ಎಂದು ಹೇಳಿದೆ.
.ಮಧ್ಯ ಗಾಜಾದ ಮಸೀದಿ ಮೇಲೆ ಇಸ್ರೇಲ್ ವೈಮಾನಿಕ ದಾಳಿ: ಕನಿಷ್ಠ 18 ಜನರ ಸಾವು.
ಈ ದಾಳಿಗಳ ಬಗ್ಗೆ ಈವರೆಗೂ ಇಸ್ರೇಲ್ನಿಂದ ಮಾಹಿತಿ ಬರಲಿಲ್ಲವಾದರೂ, ಗಾಜಾ ಪಟ್ಟಿಯಿಂದ ಕೇಂದ್ರ ಇಸ್ರೇಲ್ ಅನ್ನು ಗುರಿಯಾಗಿಸಿಕೊಂಡು ಹಾರಿ ಬಂದ ರಾಕೆಟ್ಗಳ ಬಗ್ಗೆ ಮುನ್ನೆಚ್ಚರಿಕಾ ಕ್ರಮವಾಗಿ ವಾಯುದಾಳಿ ಸೈರನ್ಗಳನ್ನು ಮೊಳಗಿಸಲಾಯಿತು ಎಂದು ಇಸ್ರೇಲ್ ಸೇನೆ ತಿಳಿಸಿದೆ.

ಈ ವೇಳೆ ಟೆಲ್ ಅವಿವ್ನಲ್ಲಿ ಭಾರಿ ಸ್ಫೋಟದ ಸದ್ದೂ ಕೇಳಿಸಿದೆ ಎಂದು ಅಲ್ಲಿಂದ ವರದಿ ಮಾಡುತ್ತಿರುವ ಮಾಧ್ಯಮ ಪ್ರತಿನಿಧಿಗಳು ತಿಳಿಸಿದ್ದಾರೆ.

(ವಿವಿಧ ಏಜೆನ್ಸಿಗಳ ಮಾಹಿತಿ ಆಧರಿಸಿ ಬರೆದ ಸುದ್ದಿ)
.ದಕ್ಷಿಣ ಬೈರೂತ್ನಲ್ಲಿ ಇಸ್ರೇಲ್ ದಾಳಿ: ಲೆಬನಾನ್–ಸಿರಿಯಾ ನಡುವಿನ ಪ್ರಮಖ ಗಡಿ ಬಂದ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.