ಜೆರುಸಲೇಂ: ಗಾಜಾ ಪಟ್ಟಿಯ ಅತಿದೊಡ್ಡ ಚಿಕಿತ್ಸಾ ಕೇಂದ್ರ ಅಲ್ ಶಿಫಾ ಆಸ್ಪತ್ರೆಯ ಅಡಿಯಲ್ಲಿ ಸುರಂಗ ಪತ್ತೆಯಾಗಿದೆ ಎಂದು ಇಸ್ರೇಲ್ ತಿಳಿಸಿದೆ.

ಅಲ್ ಶಿಫಾ ಆಸ್ಪತ್ರೆಯಲ್ಲಿ ಹಮಾಸ್ ಬಂಡುಕೋರರ ನೆಲೆಯ ಪತ್ತೆಗಾಗಿ ಕಳೆದೊಂದು ವಾರದಿಂದ ಇಸ್ರೇಲ್ ಸೇನೆ ಶೋಧ ನಡೆಸಿತ್ತು.

ಆಸ್ಪತ್ರೆಯ ಅಡಿಯಲ್ಲಿ ಹಮಾಸ್ ಬಂಡುಕೋರರು ತೋಡಿರುವ ಸುರಂಗ ಎಂದು ವಿವರಿಸಲಾದ ವಿಡಿಯೊವೊಂದನ್ನು ಇಸ್ರೇಲ್ ಸೇನೆ ಬಿಡುಗಡೆ ಮಾಡಿದೆ. 10 ಮೀಟರ್ ಆಳದ ಸುರಂಗವನ್ನು ಎಂಜಿನಿಯರ್ಗಳು ಪತ್ತೆ ಹಚ್ಚಿದ್ದಾರೆ. ಈ ಸುರಂಗಕ್ಕೆ 55 ಮೀಟರ್ ಉದ್ದದ ಸ್ಫೋಟ ನಿರೋಧಕ ಬಾಗಿಲನ್ನು ಅಳವಡಿಸಲಾಗಿದೆ ಎಂದು ಇಸ್ರೇಲ್ ಸೇನೆ ತಿಳಿಸಿದೆ.

ಪ್ರತಿ ದಾಳಿಗೆ ತಡೆಯೊಡ್ಡುವ ಉದ್ದೇಶದಿಂದ ಹಮಾಸ್ ಬಂಡುಕೋರರು ಈ ರೀತಿಯ ಬಾಗಿಲುಗಳನ್ನು ಬಳಸುತ್ತಿದ್ದರು ಎಂದು ಇಸ್ರೇಲ್ ಸೇನೆ ಆರೋಪಿಸಿದೆ.

ನೂರಾರು ಕಿಲೋಮೀಟರ್ಗಳಷ್ಟು ರಹಸ್ಯ ಸುರಂಗಗಳು, ಬಂಕರ್ಗಳು ಸೇರಿದಂತೆ ಇತರೆ ವ್ಯವಸ್ಥೆಗಳನ್ನು ಮಾಡಿಕೊಂಡಿರುವುದಾಗಿ ಒಪ್ಪಿಕೊಂಡಿದ್ದ ಹಮಾಸ್, ಆಸ್ಪತ್ರೆಗಳಂತಹ ಸ್ಥಳಗಳಲ್ಲಿ ನೆಲೆ ಹೊಂದಿರುವ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿತ್ತು.
.ಗಾಜಾದ ಅಲ್ ಶಿಫಾ ಆಸ್ಪತ್ರೆ ಈಗ ಸಾವಿನ ವಲಯ: ಡಬ್ಲ್ಯುಎಚ್ಒ.Israel - Hamas War | ಗಾಜಾದ ಅಲ್–ಶಿಫಾ ಆಸ್ಪತ್ರೆಗೆ ನುಗ್ಗಿದ ಇಸ್ರೇಲ್ ಸೇನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.