ವಾಷಿಂಗ್ಟನ್: ದೇಶದ ಆಳ್ವಿಕೆ ನಡೆಸಲು, ನಾಯಕತ್ವಕ್ಕೆ ಕಮಲಾ ಹ್ಯಾರಿಸ್ ಅಸಮರ್ಥ ಎಂದು ಅಮೆರಿಕ ಮಾಜಿ ಅಧ್ಯಕ್ಷ ಮತ್ತು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹೇಳಿದ್ದು, ಕಮಲಾ ಅವರು ಎಡಪಂಥೀಯರು ಎಂದು ವ್ಯಾಖ್ಯಾನಿಸಿದ್ದಾರೆ.

ಅಧ್ಯಕ್ಷೀಯ ಚುನಾವಣೆಯ ಪ್ರಚಾರದಲ್ಲಿ ಭಾಗಿಯಾದ ಟ್ರಂಪ್ ಜನರನ್ನು ಉದ್ದೇಶಿಸಿ ಮಾತನಾಡಿದರು.

ಕಮಲಾ ಹ್ಯಾರಿಸ್ ಅವರನ್ನು ಡೆಮಾಕ್ರಟಿಕ್ ಪಕ್ಷದಿಂದ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಜೋ ಬೈಡನ್ ಅನುಮೋದಿಸಿದ ದಿನದಿಂದ ಟ್ರಂಪ್ ನಿರಂತರವಾಗಿ ಅವರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.

‘ಕಳೆದ ಮೂರೂವರೆ ವರ್ಷಗಳಲ್ಲಿ ಬೈಡನ್ ಅವರ ಪ್ರತಿಯೊಂದು ವಿನಾಶಕಾರಿ ಕೆಲಸದ ಹಿಂದೆ ಕಮಲಾ ಹ್ಯಾರಿಸ್ ಅವರ ಪಾತ್ರ ಪ್ರಮುಖವಾಗಿತ್ತು. ಅಲ್ಲದೆ ಅವರು ತೀವ್ರವಾದ ಎಡಪಂಥೀಯ ವಿಚಾರಗಳನ್ನು ಹೊಂದಿದ್ದಾರೆ. ಅವರಿಗೆ ಏನಾದರೂ ಅಧಿಕಾರಕ್ಕೆ ಬರುವ ಅವಕಾಶ ಸಿಕ್ಕರೆ ದೇಶವನ್ನು ನಾಶ ಮಾಡುತ್ತಾರೆ. ಆದರೆ ಅದಕ್ಕೆ ನಾವು ಅವಕಾಶ ನೀಡುವುದಿಲ್ಲ’ ಎಂದು ಟ್ರಂಪ್ ಹೇಳಿದ್ದಾರೆ.

‘ಜೋ ಬೈಡನ್ ಬಗ್ಗೆ ನಿಮ್ಮ ಬಳಿ ಸುಳ್ಳು ಹೇಳಿದರೆ ಅವರು ಯಾವುದರ ಬಗ್ಗೆಯಾದರೂ ಸುಳ್ಳು ಹೇಳಬಲ್ಲರು ಎಂದರ್ಥ. ಕಮಲಾ ಎಂದಿಗೂ ನಂಬಿಕೆಗೆ ಅರ್ಹರಲ್ಲ, ಬೈಡನ್‌ರಂತೆಯೇ ಅವರೂ ಕೂಡ ನಾಯಕತ್ವಕ್ಕೆ ಅಸಮರ್ಥರು. ಅವರಿಂದ ದೇಶವನ್ನು ಮುನ್ನಡೆಸಲು ಸಾಧ್ಯವಿಲ್ಲ, ಅಧಿಕಾರಕ್ಕೆ ಬಂದರೆ ಒಂದೇ ವರ್ಷದಲ್ಲಿ ನಮ್ಮ ದೇಶವನ್ನು ನಾಶ ಮಾಡುತ್ತಾರೆ. ಕಮಲಾ ಅವರಿಗೆ ನೀವು ನೀಡುವ ಒಂದು ಮತ ಇನ್ನೂ ನಾಲ್ಕು ವರ್ಷಗಳ ಅಪ್ರಾಮಾಣಿಕತೆ, ಅಸಮರ್ಥತೆ, ದೌರ್ಬಲ್ಯ ಮತ್ತು ವೈಫಲ್ಯಕ್ಕೆ ನೀಡುವ ಮತವಾಗಿದೆ’ ಎಂದು ಟ್ರಂಪ್ ಕಿಡಿಕಾರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.