ಮುಂಬೈ: ಲಾಸ್ ಏಂಜಲೀಸ್ನಲ್ಲಿ ನಡೆಯುವ 2028ರ ಒಲಿಂಪಿಕ್ ಕ್ರೀಡಾಕೂಟಕ್ಕೆ ಕ್ರಿಕೆಟ್ ಸೇರಿದಂತೆ ಐದು ಕ್ರೀಡೆಗಳನ್ನು ಸೇರಿಸುವ ಪ್ರಸ್ತಾವನೆಯನ್ನು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ (ಐಒಸಿ) ಕಾರ್ಯಕಾರಿ ಮಂಡಳಿಯು ಶುಕ್ರವಾರ ಅನುಮೋದಿಸಿದೆ.

ಕ್ರೀಡಾಕೂಟ ಆಯೋಜಿಸುವ ಪ್ರತಿ ನಗರವು ಆಯಾ ಆವೃತ್ತಿಗೆ ಹೊಸ ಕ್ರೀಡೆಗಳನ್ನು ಸೇರ್ಪಡೆಗೊಳಿಸಲು ಐಒಸಿ ನಿಯಮಗಳ ಅಡಿಯಲ್ಲಿ ಮನವಿ ಸಲ್ಲಿಸಬಹುದಾಗಿದೆ. ಅದರಂತೆ, 2028ರ ಲಾಸ್ ಏಂಜಲೀಸ್ ಒಲಿಂಪಿಕ್ ಆಯೋಜಕರು, ಕ್ರಿಕೆಟ್, ಫ್ಲಾಗ್ ಫುಟ್ಬಾಲ್, ಲಾಕ್ರೋಸ್, ಸ್ಕ್ವಾಷ್ ಮತ್ತು ಬೇಸ್ಬಾಲ್–ಸಾಫ್ಟ್ಬಾಲ್ ಕ್ರೀಡೆಗಳನ್ನು ಸೇರಿಸುವ ಬಯಕೆ ವ್ಯಕ್ತಪಡಿಸಿದ್ದರು.

'ಪಸ್ತಾವನೆಗಳನ್ನು ಐಒಸಿ ಕಾರ್ಯಕಾರಿ ಮಂಡಳಿಯು ಅನುಮೋದಿಸಿದೆ' ಎಂದು ಐಒಸಿ ಅಧ್ಯಕ್ಷ ಥಾಮಸ್ ಬಾಚ್ ಅವರು ಮಂಡಳಿ ಸಭೆ ಬಳಿಕ ನಡೆದ ಪ್ರತಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.
.ಪಾಕ್ ಎದುರು ಹೆಚ್ಚು ರನ್, ವಿಕೆಟ್ ಗಳಿಸುವ ಆಟಗಾರರನ್ನು ಹೆಸರಿಸಿದ ರಮಿಜ್ ರಾಜಾ.
ಐಒಸಿ ಅಧಿವೇಶನವು ಭಾನುವಾರದಿಂದ ಆರಂಭವಾಗಲಿದ್ದು, ಪ್ರಸ್ತಾವನೆಗೆ ಅಂತಿಮ ಮುದ್ರೆ ಬೀಳುವುದಷ್ಟೇ ಬಾಕಿ ಇದೆ.

1900ರ ಒಲಿಂಪಿಕ್ನಲ್ಲಿ ಕೊನೆಯ ಬಾರಿ ಕ್ರಿಕೆಟ್ ಆಡಲಾಗಿತ್ತು. ಫ್ರಾನ್ಸ್ ವಿರುದ್ಧ ನಡೆದ ಏಕೈಕ ಪಂದ್ಯದಲ್ಲಿ ಇಂಗ್ಲೆಂಡ್ (ಗ್ರೇಟ್ ಬ್ರಿಟನ್) ತಂಡ ಚಿನ್ನದ ಪದಕ ಜಯಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.