ಶನಿವಾರ, 16 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

IND Vs BAN: ವಿಶ್ವಕಪ್‌ನಲ್ಲಿ ಅಜೇಯ ಓಟದತ್ತ ಭಾರತ ಚಿತ್ತ

Published : 19 ಅಕ್ಟೋಬರ್ 2023, 0:25 IST
Last Updated : 19 ಅಕ್ಟೋಬರ್ 2023, 0:25 IST
ಫಾಲೋ ಮಾಡಿ
Comments
ಭಾರತ ತಂಡದ ನಾಯಕ ರೋಹಿತ್ ಶರ್ಮಾ

ಭಾರತ ತಂಡದ ನಾಯಕ ರೋಹಿತ್ ಶರ್ಮಾ 

ಪಿಟಿಐ ಚಿತ್ರ

ಬಾಂಗ್ಲಾ ತಂಡದ ನಾಯಕ ಶಕೀಬ್ ಅಲ್ ಹಸನ್

ಬಾಂಗ್ಲಾ ತಂಡದ ನಾಯಕ ಶಕೀಬ್ ಅಲ್ ಹಸನ್ 

–ಪಿಟಿಐ ಚಿತ್ರ

ತಂಡದ ಸಂಯೋಜನೆಯನ್ನು ಬದಲಾವಣೆ ಮಾಡುವ ಯಾವುದೇ ಮಾತುಕತೆಯೂ ನಡೆದಿಲ್ಲ. ಕಳೆದ ಮೂರು ಪಂದ್ಯಗಳ ಜಯದಲ್ಲಿ ಆಡಿರುವ ತಂಡವನ್ನೇ ಮುಂದುವರಿಸಲಾಗುವುದು. ಜಯದ ಲಯವನ್ನು ಮುಂದುವರಿಸುವುದೇ ನಮ್ಮ ಗುರಿ.
– ಪಾರಸ್ ಮಾಂಬ್ರೆ ಭಾರತ ತಂಡದ ಸಹಾಯಕ ಕೋಚ್
ಮೊದಲ ವಿಶ್ವಕಪ್ ಪಂದ್ಯ
ಪುಣೆಯಲ್ಲಿರುವ ಕ್ರೀಡಾಂಗಣದಲ್ಲಿ ಇದೇ ಮೊದಲ ಬಾರಿಗೆ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಪಂದ್ಯ ನಡೆಯಲಿದೆ.  2017ರಿಂದ ಇಲ್ಲಿಯವರೆಗೆ ಈ ತಾಣದಲ್ಲಿ ಐದು ಅಂತರರಾಷ್ಟ್ರೀಯ ಏಕದಿನ ಪಂದ್ಯಗಳು ನಡೆದಿವೆ.  ಅದರಲ್ಲಿ ಮೂರು ಪಂದ್ಯಗಳಲ್ಲಿ ತಂಡಗಳು 300ಕ್ಕೂ ಹೆಚ್ಚು ರನ್‌ಗಳ ಮೊತ್ತವನ್ನು ದಾಖಲಿಸಿವೆ. ಬ್ಯಾಟರ್‌ಗಳಿಗೆ ಹೆಚ್ಚು ಅನುಕೂಲವಾಗುವ ಲಕ್ಷಣಗಳು ಪಿಚ್‌ನಲ್ಲಿವೆ. ಪಂದ್ಯದ ದಿನದಂದು ಮಳೆಯ ಸಾಧ್ಯತೆ ಹೆಚ್ಚಿಲ್ಲ.  ಆದರೆ ತಾಪ ಹೆಚ್ಚಿರುವ ಸಂಭವ ಇದೆ. 25 ವರ್ಷಗಳ ನಂತರ ಮುಖಾಮುಖಿ ಭಾರತ ತಂಡವು ತನ್ನ ತವರಿನಂಗಳದಲ್ಲಿ 25 ವರ್ಷಗಳ ನಂತರ ಬಾಂಗ್ಲಾದೇಶದ ವಿರುದ್ಧ ಏಕದಿನ ಕ್ರಿಕೆಟ್ ಪಂದ್ಯ ಆಡಲಿದೆ.  1998ರಲ್ಲಿ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ  ನಡೆದಿದ್ದ ಏಕದಿನ ಪಂದ್ಯದಲ್ಲಿ ಭಾರತ ಮತ್ತು ಬಾಂಗ್ಲಾ ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲಿ ಬಾಂಗ್ಲಾ ತಂಡದಲ್ಲಿ ಮಿನಾಜುಲ್ ಅಬೆದಿನ್ ಖಾಲಿದ್ ಮೆಹಮೂದ್ ಮತ್ತು ಅತ್ತರ್ ಅಲಿ ಖಾನ್ ಆಡಿದ್ದರು. ಸದ್ಯ ಮಿನಾಜುಲ್ ಸದ್ಯ ಬಾಂಗ್ಲಾದೇಶದ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿದ್ದಾರೆ. ಖಾಲಿದ್ ತಂಡದ ನಿರ್ದೇಶಕ ಮತ್ತು ಖಾನ್ ಟಿ.ವಿ. ವೀಕ್ಷಕ ವಿವರಣೆಗಾರ ಆಗಿದ್ದಾರೆ.
ಯಾವ ತಂಡವೂ ದೊಡ್ಡದಲ್ಲ: ಕೊಹ್ಲಿ
‘ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಯಾವ ತಂಡವೂ ದೊಡ್ಡದಲ್ಲ. ಆದರೆ ಕೆಲವು ತಂಡಗಳನ್ನು ಮಾತ್ರ ದೊಡ್ಡ (ಬಲಾಢ್ಯ) ಎಂದು ಭಾವಿಸಿ ಅವುಗಳನ್ನಷ್ಟೇ ಗುರಿಯಾಗಿಟ್ಟುಕೊಂಡು ಆಡುವುದು ಅಪಾಯಕಾರಿ. ಅದರಿಂದಾಗಿ ನಾವು ದೊಡ್ಡದಲ್ಲ ಎಂದುಕೊಂಡ ತಂಡಗಳ ಎದುರು ಆಘಾತ ಅನುಭವಿಸಬೇಕಾಗುತ್ತದೆ’ ಎಂದು ಭಾರತ ತಂಡದ ಬ್ಯಾಟರ್ ವಿರಾಟ್ ಕೊಹ್ಲಿ ಹೇಳಿದರು. ಈ ಬಾರಿಯ ಟೂರ್ನಿಯಲ್ಲಿ ಹೊರಹೊಮ್ಮಿರುವ ಎರಡು ಅಚ್ಚರಿಯ ಫಲಿತಾಂಶಗಳ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ವಿರಾಟ್ ಪ್ರತಿಕ್ರಿಯಿಸಿದರು. ಬಾಂಗ್ಲಾ ತಂಡದ ಕುರಿತು ಮಾತನಾಡಿದ ಕೊಹ್ಲಿ ‘ಹಲವು ವರ್ಷಗಳಿಂದ ನಾನು ಶಕೀಬ್ ಅಲ್ ಹಸನ್ ಎದುರು ಆಡಿದ್ದೇನೆ. ಅದ್ಭುತ ಆಟಗಾರ. ಅನುಭವಿಯಾಗಿರುವ ಅವರು ಬ್ಯಾಟರ್‌ಗಳನ್ನು ವಂಚಿಸಿ ವಿಕೆಟ್ ಗಳಿಸುವ ಕುರಿತು ಚೆನ್ನಾಗಿ ತಿಳಿದಿದ್ದಾರೆ. ಉತ್ತಮ ಸ್ಪಿನ್ನರ್ ಆಗಿದ್ದಾರೆ‘ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT