ಪರ್ತ್: ಆಸ್ಟ್ರೇಲಿಯಾದ ದೇಶೀಯ ಕ್ರಿಕೆಟ್ ಪಂದ್ಯದ ವೇಳೆ ಬ್ಯಾಟರ್ ನೇರವಾಗಿ ಬಾರಿಸಿದ ಚೆಂಡು ಮುಖಕ್ಕೆ ಬಡಿದ ಪರಿಣಾಮ ಅಂಪೇರ್ ಟೋನಿ ಡಿ ನೊಬ್ರೆಗಾ ಅವರು ತೀವ್ರವಾಗಿ ಗಾಯಗೊಂಡಿದ್ದಾರೆ. ಪರ್ತ್ನ ಚಾರ್ಲ್ಸ್ ವೆರ್ಯಾರ್ಡ್ ರಿಸರ್ವ್ ಕ್ರೀಡಾಂಗಣದಲ್ಲಿ ಪಂದ್ಯ ಆಯೋಜನೆಗೊಂಡಿತ್ತು.

WASTCA ಅಂಪೈರ್ಸ್ ಸಂಘವು ಈ ವಿಷಯವನ್ನು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಹಂಚಿಕೊಂಡಿದ್ದು, ನೊಬ್ರೆಗಾ ಅವರು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಲಾಗಿದೆ.
.IND vs AUS | ಮೊದಲ ಟೆಸ್ಟ್ಗೆ ಆಡುವ 11ರ ಬಳಗ ಅಂತಿಮಗೊಳಿಸಲಾಗಿದೆ: ಬೂಮ್ರಾ.ಎರಡನೇ ಮಗುವಿಗೆ ತಂದೆಯಾದ ರೋಹಿತ್; ಪರ್ತ್ ಟೆಸ್ಟ್ ಪಂದ್ಯದಲ್ಲಿ ಆಡುವ ಸಾಧ್ಯತೆ.
‘ಶನಿವಾರ ನಡೆದ ಪಂದ್ಯದಲ್ಲಿ ಬ್ಯಾಟ್ನಿಂದ ಚಿಮ್ಮಿದ ಚೆಂಡು ನೇರವಾಗಿ ನೋಬ್ರೆಗಾ ಅವರ ಮುಖದ ಬಲಭಾಗಕ್ಕೆ ಬಡಿದಿದೆ. ಅದೃಷ್ಟವಶಾತ್ ಅವರ ಮೂಳೆಗಳಿಗೆ ಯಾವುದೇ ಹಾನಿಯಾಗಿಲ್ಲ. ಅಂಪೈರ್ ಸಂಘವು ಅವರೊಂದಿಗಿದೆ’ ಎಂದು ಪೋಸ್ಟ್ನಲ್ಲಿ ಹೇಳಲಾಗಿದೆ.

ನಾರ್ಥ್ ಪರ್ತ್ ಹಾಗೂ ವಿಂಬ್ಲೆ ಡಿಸ್ಟ್ರಿಕ್ಟ್ ತಂಡಗಳ ನಡುವೆ ವೆಸ್ಟ್ ಆಸ್ಟ್ರೇಲಿಯಾ ಸಬ್ಅರ್ಬನ್ ಟರ್ಫ್ ಕ್ರಿಕೆಟ್ ಅಸೋಸಿಯೇಷನ್ ಆಯೋಜಿಸಿದ್ದ ದೇಶಿ ಕ್ರಿಕೆಟ್ ಪಂದ್ಯದಲ್ಲಿ ಈ ಘಟನೆ ನಡೆದಿದೆ.

2014ರಲ್ಲಿ ಇಸ್ರೇಲ್ ಅಂಪೈರ್ ಹಿಲ್ಲೇಲ್ ಆಸ್ಕರ್ ಅವರು ಇದೇ ಮಾದರಿಯಲ್ಲಿ ಚೆಂಡು ಬಡಿದು ಗಾಯಗೊಂಡು ಮೃತಪಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.