ನವದೆಹಲಿ: ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ನಿವಾಸದ ಮೇಲೆಸಿಬಿಐ ದಾಳಿ ನಡೆದ ಕೆಲವೇ ಗಂಟೆಗಳಲ್ಲಿ 12 ಮಂದಿ ಐಎಎಸ್ ಅಧಿಕಾರಿಗಳನ್ನು ವರ್ಗಾಯಿಸಿ ದೆಹಲಿ ಸರ್ಕಾರ ಆದೇಶ ಹೊರಡಿಸಿದೆ.

ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸೋಡಿಯಾ ಅವರ ಮನೆಯಲ್ಲಿ ಸಿಬಿಐ ಅಧಿಕಾರಿಗಳು ಶುಕ್ರವಾರ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.

ಇದನ್ನೂ ಓದಿ:ತಪ್ಪು ಮಾಡಿಲ್ಲ, ದಾಳಿಯಿಂದ ಭೀತಿಗೊಂಡಿಲ್ಲ: ಮನೀಶ್ ಸಿಸೋಡಿಯಾ

ಇದಾದ ಕೆಲವೇ ಗಂಟೆಗಳಲ್ಲಿ ಆಡಳಿತಾತ್ಮಕ ಪುನರ್ ರಚನೆಗೆ ಕೈ ಹಾಕಲಾಗಿದ್ದು, ಐಎಎಸ್ ಅಧಿಕಾರಿಗಳನ್ನು ಹಲವು ಇಲಾಖೆಗಳಿಗೆ ವರ್ಗಾವಣೆ ಮಾಡಲಾಗಿದೆ.

ದೆಹಲಿ ಸರ್ಕಾರದ ಸರ್ವಿಸ್ ಇಲಾಖೆ ಹೊರಡಿಸಿದ ಆದೇಶದ ಪ್ರಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿಶೇಷ ಕಾರ್ಯದರ್ಶಿ ಉದಿತ್ ಪ್ರಕಾಶ್ ರೈ (2007ರ ಬ್ಯಾಚ್) ಅವರ ಹೆಸರು ಕೂಡ ವರ್ಗಾವಣೆಗೊಂಡ ಐಎಎಸ್ ಅಧಿಕಾರಿಗಳ ಪಟ್ಟಿಯಲ್ಲಿದೆ.

ಇತ್ತೀಚೆಗಷ್ಟೇ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಅವರು ಎರಡು ಭ್ರಷ್ಟಾಚಾರ ಪ್ರಕರಣಗಳಲ್ಲಿಉದಿತ್ ಪ್ರಕಾಶ್ ರೈ ವಿರುದ್ಧಕ್ರಮಕೈಗೊಳ್ಳುವಂತೆ ಕೇಂದ್ರ ಗೃಹ ಸಚಿವಾಲಯಕ್ಕೆ ಶಿಫಾರಸು ಮಾಡಿದ್ದರು. ಎಕ್ಸಿಕ್ಯೂಟಿವ್ ಎಂಜಿನಿಯರ್ಗೆ ಅನುಕೂಲ ಮಾಡಿದ್ದ ಪ್ರಕರಣದಲ್ಲಿ ₹50 ಲಕ್ಷ ಲಂಚ ಸ್ವೀಕರಿಸಿದ್ದರು ಎಂಬ ಆರೋಪ ರೈ ಮೇಲೆ ಹೊರಿಸಲಾಗಿದೆ.

ಉದಿತ್ ಪ್ರಕಾಶ್ ರೈ ಅವರನ್ನು ಆಡಳಿತ ಸುಧಾರಣಾ ಇಲಾಖೆಯ ವಿಶೇಷ ಕಾರ್ಯದರ್ಶಿಯನ್ನಾಗಿ ವರ್ಗಾಯಿಸಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

2007ರ ಬ್ಯಾಚ್ನ ಐಎಎಸ್ ಅಧಿಕಾರಿ ವಿಜೇಂದ್ರ ಸಿಂಗ್ ರಾವತ್ ಅವರು ರೈ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಅವರು ಯೋಜನಾ ವಿಭಾಗದ ನಿರ್ದೇಶಕ ಹುದ್ದೆಯ ಹೆಚ್ಚುವರಿ ಜವಾಬ್ದಾರಿಯನ್ನು ಹೊಂದಿರುತ್ತಾರೆ.

ಇವನ್ನೂ ಓದಿ:
ಸಿಸೋಡಿಯಾ ಮನೆ ಮೇಲೆ ಸಿಬಿಐ ದಾಳಿ; 'ಎಎಪಿ ಸಾಧನೆಯೇ ಶೋಧಕ್ಕೆ ಕಾರಣ' ಎಂದು ಟೀಕೆ
ಸಿಸೋಡಿಯಾ ಮನೆ ಮೇಲೆ ಸಿಬಿಐ ದಾಳಿ: ಪ್ರತಿಪಕ್ಷಗಳನ್ನು ಬೆದರಿಸುವ ತಂತ್ರ– ಟಿಎಂಸಿ
ಸಿಸೋಡಿಯಾ ಸೇರಿದಂತೆ 15 ಜನರನ್ನು ಎಫ್ಐಆರ್ನಲ್ಲಿ ಹೆಸರಿಸಿದ ಸಿಬಿಐ
ಸಿಸೋಡಿಯಾ ಮನೆಯಲ್ಲಿ ಪೆನ್ಸಿಲ್, ನೋಟ್ಬುಕ್ಗಳು ಸಿಗಲಿವೆ: ರಾಘವ್ ಚಡ್ಡಾ
9510001000 ಮಿಸ್ಡ್ಕಾಲ್ ನೀಡಿ, ಇಂಡಿಯಾ ನಂ.1 ಅಭಿಯಾನಕ್ಕೆ ಸೇರಿ: ಕೇಜ್ರಿವಾಲ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.