ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ ಎಂದು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಹೇಳಿದ್ಧಾರೆ. ಪಂಜಾಬ್ ಕಾಂಗ್ರೆಸ್ ಘಟಕದಲ್ಲಿನ ಬಣ ರಾಜಕಾರಣದಿಂದಾಗಿ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಸಿಂಗ್ ಅವರು ಸೋನಿಯಾ ಅವರನ್ನು ಮಂಗಳವಾರ ಭೇಟಿಯಾಗಿ 90 ನಿಮಿಷ ಚರ್ಚಿಸಿದ್ದಾರೆ. ಪಂಜಾಬ್ ಘಟಕದಲ್ಲಿನ ಭಿನ್ನಮತ ಶಮನಕ್ಕಾಗಿ ಕಾಂಗ್ರೆಸ್‌ನ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿದೆ. ಈ ಸಮಿತಿಯ ಮುಂದೆ ಸಿಂಗ್ ಅವರು ಹಾಜರಾಗಿ ಬಣ ರಾಜಕಾರಣ ಅಂತ್ಯಗೊಳಿಸಲು ಯೋಜನೆಯೊಂದನ್ನು ಮಂಡಿಸಿದ್ದರು.

‘ಸಿಧು ಬಗ್ಗೆ ನನಗೇನೂ ಗೊತ್ತಿಲ್ಲ. ನನ್ನ ಸರ್ಕಾರದ ಕೆಲಸಗಳ ಬಗ್ಗೆ ಚರ್ಚಿಸಿದ್ದೇನೆ. ರಾಜಕೀಯ ವಿಚಾರಗಳೂ ಪ್ರಸ್ತಾಪ ಆಗಿವೆ’ ಎಂದು ಸಿಂಗ್ ಹೇಳಿದ್ಧಾರೆ. ಸಿಂಗ್ ಅವರ ತೀವ್ರ ಟೀಕಾಕಾರ ನವಜೋತ್ ಸಿಂಗ್ ಸಿಧು ಅವರು ಪಕ್ಷದ ಪುನರ್‌ರಚನೆಯಲ್ಲಿ ಮಹತ್ವದ ಪಾತ್ರ ವಹಿಸಲಿದ್ಧಾರೆಯೇ ಎಂಬ ಪ್ರಶ್ನೆಗೆ ಅವರು ಹೀಗೆ ಉತ್ತರಿಸಿದ್ದಾರೆ.

ಮುಖ್ಯಮಂತ್ರಿ ಕಾರ್ಯಶೈಲಿಯ ಬಗ್ಗೆ ಹಲವು ಮುಖಂಡರಲ್ಲಿ ಅಸಮಾಧಾನ ಇದೆ. ಸಿಖ್ಖರ ಪವಿತ್ರ ಗ್ರಂಥಕ್ಕೆ ಅವಮಾನ ಮಾಡಿದ 2015ರ ಪ್ರಕರಣದ ನಿರ್ವಹಣೆ, ಮಾದಕ ಪದಾರ್ಥ ಮತ್ತು ಸಾರಿಗೆ ಮಾಫಿಯಾ ವಿಚಾರದಲ್ಲಿ ಅತೃಪ್ತಿ ಇದೆ ಎನ್ನಲಾಗಿದೆ.

ಸಿಧು ಅವರು ಸಿಂಗ್ ವಿರುದ್ಧ ಬಹಿರಂಗವಾಗಿಯೇ ಟೀಕೆ ಮಾಡುತ್ತಿದ್ಧಾರೆ. ಸಿಧು ಅವರಿಗೆ ಪಕ್ಷದಲ್ಲಿ ಪ್ರಮುಖ ಹುದ್ದೆ ಅಥವಾ ಸರ್ಕಾರದಲ್ಲಿ ಸ್ಥಾನ ನೀಡಬೇಕು ಎಂದು ಖರ್ಗೆ ನೇತೃತ್ವದ ಸಮಿತಿಯು ಸಲಹೆ ನೀಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.