ನವದೆಹಲಿ: ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಅವರು ಮಂಗಳವಾರ ಜಮ್ಮು ಮತ್ತು ಕಾಶ್ಮೀರ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ (ಜೆಕೆಪಿಸಿಸಿ) ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಆರೋಗ್ಯ ಕಾರಣಗಳಿಂದಾಗಿ ಜಮ್ಮು ಮತ್ತು ಕಾಶ್ಮೀರದ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಲು ಆಜಾದ್ ನಿರಾಕರಿಸಿದ್ದಾರೆ. ಈ ವಿಚಾರವನ್ನು ಕಾಂಗ್ರೆಸ್ ಹೈಕಮಾಂಡ್ ಗಮನಕ್ಕೆ ತಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಎಲ್ಲ ಬೆಳವಣಿಗೆ ನಡುವೆಯೇ ಪಕ್ಷದ ವರಿಷ್ಠೆ ಸೋನಿಯಾ ಗಾಂಧಿ ಅವರು ಮಂಗಳವಾರ ವಿಕರ್ ರಸೂಲ್ ವಾನಿ ಅವರನ್ನು ಜಮ್ಮು ಮತ್ತು ಕಾಶ್ಮೀರದ ಅಧ್ಯಕ್ಷರಾಗಿ ಮತ್ತು ರೇಮನ್ ಭಲ್ಲಾ ಅವರನ್ನು ಕಾರ್ಯಾಧ್ಯಕ್ಷರಾಗಿ ನೇಮಕ ಮಾಡಿದ್ದಾರೆ.

ಈ ಹಿಂದೆ ಗುಲಾಂ ನಬಿ ಆಜಾದ್ ಅವರ ಆಪ್ತ ಗುಲಾಮ್ ಅಹ್ಮದ್ ಮಿರ್ ಅವರು ಜಮ್ಮು –ಕಾಶ್ಮೀರದ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಜುಲೈ 6ರಂದು ಮಿರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ರಾಜೀನಾಮೆಯನ್ನು ಸೋನಿಯಾ ಗಾಂಧಿ ಅಂಗೀಕರಿಸಿದ್ದಾರೆ ಎನ್ನಲಾಗಿದೆ.

ಆಜಾದ್ ಅಧ್ಯಕ್ಷರಾಗಿ ಮತ್ತು ತಾರಿಕ್ ಹಮೀದ್ ಕರ್ರಾ ಉಪಾಧ್ಯಕ್ಷರಾಗಿ 11 ಸದಸ್ಯರನ್ನು ಒಳಗೊಂಡ ಪ್ರಚಾರ ಸಮಿತಿಯನ್ನು ಕಾಂಗ್ರೆಸ್ ರಚಿಸಿತ್ತು. ಆದರೆ, ಪಿಸಿಸಿ ಮುಖ್ಯಸ್ಥರ ನೇಮಕ ಮಾಡಿರುವುದು ಪಕ್ಷದ ಅನೇಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು.

ಗುಲಾಂ ನಬಿ ಆಜಾದ್ ಅವರನ್ನು ಜೆಕೆಪಿಸಿಸಿ ನೂತನ ಅಧ್ಯಕ್ಷರನ್ನಾಗಿಆಯ್ಕೆ ಮಾಡಲು ತೀರ್ಮಾನಿಸಿದ್ದ ಕಾಂಗ್ರೆಸ್ ಹೈಕಮಾಂಡ್, ಆಜಾದ್ ಅವರು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಮುನ್ನಡೆಸಲಿದ್ದಾರೆ ಎಂದು ಹೇಳಿಕೊಂಡಿತ್ತು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಹಿರಿಯ ನಾಯಕಿ ಅಂಬಿಕಾ ಸೋನಿ ಮತ್ತು ಆಜಾದ್ ಅವರನ್ನು ಒಳಗೊಂಡಂತೆ ಪಕ್ಷದ ಉನ್ನತ ನಾಯಕರು ಈ ಸಂಬಂಧ ಜಮ್ಮು ಮತ್ತು ಕಾಶ್ಮೀರದ ನಾಯಕರೊಂದಿಗೆ ಎರಡು ದಿನಗಳ ಚಿಂತನ, ಮಂಥನ ಸಭೆ ನಡೆಸಿದ್ದರು.

ನಾಯಕತ್ವ ಬದಲಾವಣೆ ಸೇರಿ ಪಕ್ಷದಲ್ಲಿ ಆಮೂಲಾಗ್ರ ಬದಲಾವಣೆಗೆ ಆಗ್ರಹಿಸಿದ್ದ 23 ಮಂದಿ ಬಂಡಾಯ ನಾಯಕರಲ್ಲಿ ಆಜಾದ್ ಸಹ ಒಬ್ಬರು.

ಓದಿ...

ಕಾಂಗ್ರೆಸ್ ಸೇರಿ ಎಲ್ಲಾ ಪಕ್ಷಗಳು ಜನರಲ್ಲಿ ಒಡಕು ಮೂಡಿಸುತ್ತಿವೆ: ಆಜಾದ್

Explainer: ಆಳ-ಅಗಲ; ಕಾಂಗ್ರೆಸ್ ಒಳಜಗಳದ ಕೋಲಾಹಲ

ಮೋದಿಯ ಶ್ಲಾಘಿಸಿದ ಬೆನ್ನಲ್ಲೇ ಜಮ್ಮುವಿನಲ್ಲಿ ಗುಲಾಂ ನಬಿ ಆಜಾದ್ ಪ್ರತಿಕೃತಿ ದಹನ

ಎಐಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆ ಕಳೆದುಕೊಂಡ ಖರ್ಗೆ, ಆಜಾದ್

ಗುಲಾಂ ನಬೀ ಆಜಾದ್ಗೆ ಪದ್ಮಭೂಷಣ: ಮೌನಕ್ಕೆ ಶರಣಾದ ಜಮ್ಮು–ಕಾಶ್ಮೀರ ನಾಯಕರು

ಗುಲಾಂ ನಬಿ ಆಜಾದ್ಗೆ ‘ಪದ್ಮಭೂಷಣ’: ಕಾಂಗ್ರೆಸ್ನಲ್ಲಿ ಕಚ್ಚಾಟ

ಸೋನಿಯಾರನ್ನು ಭೇಟಿಯಾಗಿ ಪಕ್ಷದ ಸಂಘಟನೆ ಬಲಪಡಿಸಲು ಸಲಹೆಗಳನ್ನು ಮುಂದಿಟ್ಟ ಆಜಾದ್

ಕಾಂಗ್ರೆಸ್ | ಜಿ–23 ಮುಖಂಡರ ಜತೆ ಸಂಧಾನ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.